ಚಂದ್ರ, ಸೂರ್ಯಯಾನದ ಬಳಿಕ ಸಮುದ್ರ ಮಂಥನಕ್ಕೆ ಸಿದ್ದತೆ ! ಬಲು ವಿಶೇಷ ಈ ಸಮುದ್ರಯಾನ ಮಿಷನ್

What is Samudryaan Mission: ಇದೆಲ್ಲದರ ನಡುವೆ ಸಮುದ್ರಯಾನ ಮಿಷನ್ ಕಳುಹಿಸಲು ಸಿದ್ಧತೆಗಳು ಆರಂಭವಾಗಿದೆ. ಈ ಮೂಲಕ ಸಮುದ್ರದ ಆಳದಲ್ಲಿ ಅಡಗಿರುವ ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.

Written by - Ranjitha R K | Last Updated : Sep 12, 2023, 02:56 PM IST
  • ಬಂಗಾಳಕೊಲ್ಲಿಯಲ್ಲಿ ಮತ್ಸ್ಯ 6000 ಜಲಾಂತರ್ಗಾಮಿ ನೌಕೆ
  • ಸಮುದ್ರದ 6 ಸಾವಿರ ಮೀಟರ್ ಆಳಕ್ಕೆ ಮೂವರು
  • ಸಮುದ್ರಯಾನ ಮಿಷನ್‌ನ ವಿಶೇಷತೆ ಏನು ಗೊತ್ತಾ ?
ಚಂದ್ರ, ಸೂರ್ಯಯಾನದ ಬಳಿಕ ಸಮುದ್ರ ಮಂಥನಕ್ಕೆ ಸಿದ್ದತೆ !  ಬಲು ವಿಶೇಷ ಈ  ಸಮುದ್ರಯಾನ ಮಿಷನ್  title=

What is Samudryaan Mission : ಬಾಹ್ಯಾಕಾಶದ ರಹಸ್ಯಗಳನ್ನು ತಿಳಿಯಲು ಪ್ರಪಂಚದ ವಿವಿಧ ದೇಶಗಳು ಕಾಲಕಾಲಕ್ಕೆ ಮಿಷನ್‌ಗಳನ್ನು ಕಳುಹಿಸುತ್ತಿವೆ. ಅದರಲ್ಲಿ ಭಾರತವೂ ಒಂದು. 2023 ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ಭಾರತಕದ ಪಾಲಿಗೆ ವಿಶೇಷವಾಗಿತ್ತು. ಆಗಸ್ಟ್ 23 ರಂದು, ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಸೆಪ್ಟೆಂಬರ್ 2 ರಂದು, ಸೂರ್ಯನ ರಹಸ್ಯಗಳನ್ನು ತಿಳಿಯಲು ಆದಿತ್ಯ L 1 ಮಿಷನ್  ಯಶಸ್ವಿ ಉಡಾವಣೆಯಾಯಿತು. ಇದೆಲ್ಲದರ ನಡುವೆ ಸಮುದ್ರಯಾನ ಮಿಷನ್ ಕಳುಹಿಸಲು ಸಿದ್ಧತೆಗಳು ಆರಂಭವಾಗಿದೆ. ಈ ಮೂಲಕ ಸಮುದ್ರದ ಆಳದಲ್ಲಿ ಅಡಗಿರುವ ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಇದಕ್ಕಾಗಿ ಬಂಗಾಳಕೊಲ್ಲಿಯಲ್ಲಿ ಮತ್ಸ್ಯ 6000 ಜಲಾಂತರ್ಗಾಮಿ ನೌಕೆಯನ್ನು ಉಡಾವಣೆ ಮಾಡಲಾಗುವುದು.

ಸಮುದ್ರದ ಆಳಕ್ಕೆ ಮೂವರು :  
ಜಲಾಂತರ್ಗಾಮಿ ಮೂಲಕ ಮೂವರು ಸಮುದ್ರದಲ್ಲಿ 6 ಸಾವಿರ ಮೀಟರ್ ಆಳಕ್ಕೆ ಹೋಗಲಿದ್ದಾರೆ. ಇದು 500 ಮೀಟರ್ ಆಳದಿಂದ ಆರಂಭವಾಗಲಿದ್ದು, 2026ರ ವೇಳೆಗೆ ಮತ್ಸ್ಯ 6000 ಜಲಾಂತರ್ಗಾಮಿ ನೌಕೆಯು 6 ಸಾವಿರ ಮೀಟರ್ ಆಳ ತಲುಪಲಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯ ವಿಜ್ಞಾನಿಗಳು 2 ವರ್ಷಗಳ ಕಠಿಣ ಪರಿಶ್ರಮದ ನಂತರ ಜಲಾಂತರ್ಗಾಮಿ ನಿರ್ಮಿಸಿದ್ದಾರೆ. 

ಇದನ್ನೂ ಓದಿ : ಡೀಸೆಲ್ ಕಾರುಗಳ ಮೇಲೆ ಹೆಚ್ಚುವರಿ ಸುಂಕ ! ದುಬಾರಿಯಾಗುವುದು ಡೀಸೆಲ್ ವಾಹನಗಳ ಖರೀದಿ

ಸಮುದ್ರಯಾನ ಮಿಷನ್‌ನ ವಿಶೇಷತೆ : 
1. 2.1 ಮೀಟರ್ ವ್ಯಾಸದ ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ
2. ಮತ್ಸ್ಯ 6000 ತೂಕ ಸುಮಾರು 25 ಟನ್.
3. 9 ಮೀಟರ್ ಉದ್ದ ಮತ್ತು 4 ಮೀಟರ್ ಅಗಲ
4. 80 ಎಂಎಂ ಟೈಟಾನಿಯಂ ಬಳಸಲಾಗುತ್ತದೆ
5. ಸಮುದ್ರದೊಳಗೆ 600 ಪಟ್ಟು ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ
6. ಭಾರತ ಸರ್ಕಾರವು 2021 ರಲ್ಲಿ  ಡೀಪ್ ಓಶನ್ ಗೆ ಅನುಮೋದನೆ ನೀಡಿತ್ತು. 
7.  2024ರಲ್ಲಿ  ಮೊದಲ ಹಂತದ ಆರಂಭ ಸಾಧ್ಯತೆ.
8. ಇಲ್ಲಿಯವರೆಗೆ ಅಮೆರಿಕ, ಜಪಾನ್, ಫ್ರಾನ್ಸ್, ರಷ್ಯಾ ಸಾಗರದಲ್ಲಿ ಮನುಷ್ಯರನ್ನು ಅಷ್ಟು ಆಳಕ್ಕೆ ಕೊಂಡೊಯ್ಯಲು ಸಮರ್ಥವಾಗಿವೆ.

ಈ ಖನಿಜ ಸಂಪನ್ಮೂಲಗಳಿಗಾಗಿ ಹುಡುಕಾಟ : 
ಈ ಜಲಾಂತರ್ಗಾಮಿ ಸಹಾಯದಿಂದ, ಅನಿಲ ಹೈಡ್ರೇಟ್ ಗಳು, ನಿಕಲ್, ಮ್ಯಾಂಗನೀಸ್, ಕೋಬಾಲ್ಟ್, ಹೈಡ್ರೋಥರ್ಮಲ್ ಸಲ್ಫೈಡ್ ಮತ್ತು  ಕಿಮೋ ಸಿಂಥೆಟಿಕ್ ಜೈವಿಕ ಮತ್ತು ಇತರ ಸಸ್ಯಗಳನ್ನು ಸಮುದ್ರದಲ್ಲಿ ಕಂಡುಹಿಡಿಯಲಾಗುತ್ತದೆ. 

ಇದನ್ನೂ ಓದಿ : ರಿಲಯನ್ಸ್ ಜಿಯೋದ 7ನೇ ವಾರ್ಷಿಕೋತ್ಸವ: ಗ್ರಾಹಕರಿಗೆ ಬಂಪರ್ ಆಫರ್

ಸಮುದ್ರಯಾನ ಉದ್ದೇಶ : 
IAEA ಪ್ರಕಾರ, 2030 ರ ವೇಳೆಗೆ ಲಿಥಿಯಂನ ಜಾಗತಿಕ ಅಗತ್ಯವು ಐದು ಪಟ್ಟು ಹೆಚ್ಚಾಗುತ್ತದೆ. ಕೋಬಾಲ್ಟ್ ನ ಅಗತ್ಯತೆ ಮೂರು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಈ ಮಿಶನ್ ಬಹಳ ಪ್ರಮುಖವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News