ಮಾರುಕಟ್ಟೆಗೆ ಬಂದಿದೆ ಏಳು ಸಾವಿರ ಬೆಲೆಯ ಸೂಪರ್ ಸ್ಮಾರ್ಟ್‌ಫೋನ್

ಭಾರತದಲ್ಲಿ 7 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಫೋನ್‌ನ ವಿನ್ಯಾಸವು ಬಳಕೆದಾರರಿಗೆ ಇಷ್ಟವಾಗುವ ರೀತಿಯಲ್ಲಿಯೇ ಇದೆ ಎಂದು ಹೇಳಲಾಗುತ್ತಿದೆ. Infinix Smart 6 HD ನ ಬೆಲೆ ಮತ್ತು ಅದ್ಭುತ ವೈಶಿಷ್ಟ್ಯಗಳನ್ನು ತಿಳಿಯೋಣ .

Written by - Ranjitha R K | Last Updated : Aug 9, 2022, 08:41 AM IST
  • Infinix Smart 6 HD ಭಾರತದಲ್ಲಿ ಬಿಡುಗಡೆಯಾಗಿದೆ.
  • 7,000 ರೂಪಾಯಿ ಬೆಲೆಯ ಹೊಸ ಸ್ಮಾರ್ಟ್ ಫೋನ್
  • ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ
ಮಾರುಕಟ್ಟೆಗೆ ಬಂದಿದೆ ಏಳು ಸಾವಿರ ಬೆಲೆಯ ಸೂಪರ್ ಸ್ಮಾರ್ಟ್‌ಫೋನ್   title=
nfinix Smart 6 HD (file photo)

ಬೆಂಗಳೂರು : Infinix Smart 6 HD ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಬೆಲೆ 7,000 ರೂಪಾಯಿ ಆಗಿದ್ದು,  ಅದ್ಭುತ ವೈಶಿಷ್ಟ್ಯಗಳನ್ನು ಕೂಡಾ ಹೊಂದಿದೆ.   ಈ ಫೋನ್ Android Go OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಡಿಮೆ ಬಜೆಟ್ ನಲ್ಲಿ  ಸ್ಮಾರ್ಟ್‌ಫೋನ್  ಖರೀದಿಸಬೇಕು ಎಂದು ಕೊಂಡವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. Infinix Smart 6 HD ನ ಬೆಲೆ ಮತ್ತು ಅದ್ಭುತ ವೈಶಿಷ್ಟ್ಯಗಳನ್ನು ತಿಳಿಯೋಣ ...

ಭಾರತದಲ್ಲಿ Infinix Smart 6 HD ಬೆಲೆ :
Infinix Smart 6 HD ಅನ್ನು Aqua Sky, Force Black ಮತ್ತು Origin Blue ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ 6,799  ರೂಪಾಯಿ. ಆಗಸ್ಟ್ 12 ರಿಂದ ಈ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಿರಲಿದೆ.  

ಇದನ್ನೂ ಓದಿ : ಸಿಂಗಲ್ ಚಾರ್ಜ್‌ನಲ್ಲಿ 21 ದಿನಗಳವರೆಗೆ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್ 6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ

Infinix Smart 6 HD ವಿಶೇಷಣಗಳು :
Infinix Smart 6 HD HD+ ರೆಸಲ್ಯೂಶನ್ ಮತ್ತು ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 500 ನಿಟ್ಸ್ ಬ್ರೈಟ್‌ನೆಸ್ ಮತ್ತು 89 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಸ್ಮಾರ್ಟ್ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 8MP ರಿಯರ್ ಕ್ಯಾಮರಾ ಮತ್ತು 5MP ಸೆಲ್ಫಿ ಸ್ನ್ಯಾಪರ್ ನೊಂದಿಗೆ ಬರುತ್ತದೆ. 

Infinix Smart 6 HD ವೈಶಿಷ್ಟ್ಯಗಳು :
Infinix Smart 6 HD ಮೀಡಿಯಾ ಟೆಕ್ Helio A22 ಪ್ರೊಸೆಸರ್ ಅನ್ನು ಹೊಂದಿದೆ. ಇದು 2GB RAM ಆನ್‌ಬೋರ್ಡ್ ಮತ್ತು 2GB ವಿಸ್ತರಿಸಬಹುದಾದ RAM ವೈಶಿಷ್ಟ್ಯವನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 512GB ವರೆಗೆ ವಿಸ್ತರಿಸಬಹುದಾದ 32GB  ಇಂಟರ್ನಲ್ ಸ್ಟೋರೇಜ್ ಇದೆ.  

ಇದನ್ನೂ ಓದಿ : Flipkart Big Billion Days Sale: ₹ 500ಕ್ಕಿಂತ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಖರೀದಿಸಿ

Infinix Smart 6 HD ಬ್ಯಾಟರಿ :
Infinix Smart 6 HD 10W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ಯೂನಿಟ್ ನಿಂದ ತನ್ನ ಶಕ್ತಿಯನ್ನು ಸೆಳೆಯುತ್ತದೆ. Infinix Smart 6 HDನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, ಡ್ಯುಯಲ್ 4G VoLTE, ವೈಫೈ, ಬ್ಲೂಟೂತ್ ಮತ್ತು ಮೈಕ್ರೋ USB ಪೋರ್ಟ್ ಸೇರಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News