ಹೊಸ ವರ್ಷದಲ್ಲಿ ರೋಡಿಗಿಳಿಯಲಿದೆ MG 4 ಎಲೆಕ್ಟ್ರಿಕ್ ಕಾರು.!

ಮೋಟಾರ್ ಇಂಡಿಯಾ  ಅಪ್ಡೇಟೆಡ್ ಹೆಕ್ಟರ್ SUV ಮತ್ತು  ತು ಡೋರ್  ಏರ್ EV ಅನ್ನು ಜನವರಿ 2023 ರ  ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುತ್ತದೆ. 

Written by - Ranjitha R K | Last Updated : Dec 8, 2022, 05:40 PM IST
  • 2023 ರಲ್ಲಿ ಭಾರತದಲ್ಲಿ MG 4 EV ಅನ್ನು ಅನಾವರಣ
  • 2023 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ
  • ಏನಿರಲಿದೆ ಈ ಕಾರಿನ ವಿಶೇಷತೆ ?
ಹೊಸ ವರ್ಷದಲ್ಲಿ ರೋಡಿಗಿಳಿಯಲಿದೆ  MG 4 ಎಲೆಕ್ಟ್ರಿಕ್ ಕಾರು.!   title=
MG 4 EV

MG 4 EV : MG ಮೋಟಾರ್ ಇಂಡಿಯಾ  ಅಪ್ಡೇಟೆಡ್ ಹೆಕ್ಟರ್ SUV ಮತ್ತು  ಟು  ಡೋರ್  ಏರ್ EV ಅನ್ನು ಜನವರಿ 202 3 ರ  ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುತ್ತದೆ. ಇದರೊಂದಿಗೆ, ಕಂಪನಿಯು ಭಾರತದಲ್ಲಿ MG 4 EV ಅನ್ನು ಅನಾವರಣಗೊಳಿಸುತ್ತದೆ.  ಈ ಕಾರು ಇತ್ತೀಚೆಗೆ ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಎಲೆಕ್ಟ್ರಿಕ್ ಕಾರು ಎಡಲ್ಟ್ ಅಕ್ಯುಪೆಂಟ್ ಪ್ರೊಟೆಕ್ಷನ್ ನಲ್ಲಿ ಶೇಕಡಾ 83, ಚೈಲ್ಡ್ ಅಕ್ಯುಪೆಂಟ್ ಪ್ರೊಟೆಕ್ಷನ್ ನಲ್ಲಿ  ಶೇಕಡಾ 80, ಪಾದಚಾರಿಗಳ  ರಕ್ಷಣೆಯಲ್ಲಿ ಶೇಕಡಾ 75 ಮತ್ತು ಸೇಫ್ಟಿ ಅಸಿಸ್ಟ್ ಸಿಸ್ಟಮ್ ನಲ್ಲಿ ಶೇಕಡಾ 78 ರಷ್ಟು ಅಂಕಗಳನ್ನು ಗಳಿಸಿದೆ.

ಪರೀಕ್ಷೆಗೆ ಒಳಪಡಿಸಿದ ಮಾದರಿಯು ಮುಂಭಾಗ, ಸೈಡ್ ಹೆಡ್, ಸೈಡ್ ಚೆಸ್ಟ್ ಮತ್ತು ಸೈಡ್ ಪೆಲ್ವಿಸ್ ಏರ್‌ಬ್ಯಾಗ್‌ಗಳು, ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳು, ಸೀಟ್‌ಬೆಲ್ಟ್ ಲೋಡ್ ಲಿಮಿಟರ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಗ್ಲೋಬಲ್ ಸ್ಪೆಕ್ ಆವೃತ್ತಿಯು ಡ್ರೈವರ್ ಅಟೆನ್ಶನ್ ಅಲರ್ಟ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಕ್ಟಿವ್ ಎಮರ್ಜೆನ್ಸಿ ಬ್ರೇಕಿಂಗ್, ಹೈ ಬೀಮ್ ಅಸಿಸ್ಟ್, ಸ್ಪೀಡ್ ಲಿಮಿಟ್ ಅಸಿಸ್ಟ್ ಸೇರಿದಂತೆ ಸುಧಾರಿತ ಸುರಕ್ಷತಾ ಫಿಟ್‌ಮೆಂಟ್‌ಗಳೊಂದಿಗೆ ಬರುತ್ತದೆ.

ಇದನ್ನೂ ಓದಿ : Maruti Dzire Airbags: 70 ಕಿಮೀ ವೇಗದಲ್ಲಿ ಅಪಘಾತಕ್ಕೀಡಾದರೂ ತೆರೆಯದ Maruti Dzire ಏರ್ ಬ್ಯಾಗ್: ಕಂಪನಿ ಹೇಳಿದ್ದೇನು?

ಸುಧಾರಿತ ಸುರಕ್ಷತಾ ಫಿಟ್‌ಮೆಂಟ್‌ಗಳ ಹೊರತಾಗಿ, MG ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ OTA ಅಪ್ಡೇಟ್ ನೊಂದಿಗೆ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್, 360-ಡಿಗ್ರಿ ಕ್ಯಾಮೆರಾ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜಿಂಗ್, ಎಲ್ಲಾ-LED ಲೈಟಿಂಗ್  ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. 

MG 4 EV ನ ಉದ್ದ 4287mm, ಅಗಲ 1836mm ಮತ್ತು ಎತ್ತರ 1506mm. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ವೀಲ್‌ಬೇಸ್ 2705 ಎಂಎಂ ಉದ್ದವಿದೆ. ಈ ಮಾಡೆಲ್ ಅನ್ನು ಜಾಗತಿಕವಾಗಿ 51kWh ಮತ್ತು 64kWh ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ರೂಪಾಂತರಗಳು ಸಿಂಗಲ್ ಮೋಟಾರು, RWD ವ್ಯವಸ್ಥೆಯನ್ನು  ಹೊಂದಿವೆ.  ಚಿಕ್ಕ ಬ್ಯಾಟರಿ ಪ್ಯಾಕ್‌ನೊಂದಿಗೆ 350 ಕಿಮೀ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ 452 ಕಿಮೀ  ರೇಂಜ್  ನೀಡಲಿದೆ .

ಇದನ್ನೂ ಓದಿ : Apple iPhone 13: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News