"ಬುಮ್ರಾ ಜೊತೆ ಮಾತನಾಡೋ ಹಕ್ಕು ಅವನಿಗಿಲ್ಲ..." ಸರಣಿ ಸೋತ ಬೆನ್ನಲ್ಲೇ ಗರಂ ಆದ ಕೋಚ್‌ ಗಂಭೀರ್ ಹೀಗಂದಿದ್ದು ಯಾರಿಗೆ?

Gautam Gambhir statement on Sam konstas: ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯ ನಂತರ ಭಾರತವನ್ನು ಮುನ್ನಡೆಸುತ್ತಿದ್ದ ಜಸ್ಪ್ರೀತ್ ಬುಮ್ರಾ, ಉಸ್ಮಾನ್ ಖವಾಜಾ ವಿಕೆಟ್‌ ಪಡೆಯುವ ಮುನ್ನ ಸ್ಯಾಮ್ ಕಾನ್ಸ್ಟಾಸ್ ಅವರಿಗೆ ಏನೋ ಹೇಳುತ್ತಿರುವುದು ಕಂಡುಬಂದಿತ್ತು, ಇದರ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Bhavishya Shetty | Last Updated : Jan 5, 2025, 03:46 PM IST
    • ಜಸ್ಪ್ರೀತ್ ಬುಮ್ರಾ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದಿದ್ದ ಸ್ಯಾಮ್ ಕಾನ್‌ಸ್ಟಾಸ್‌
    • ಸ್ಯಾಮ್ ಕಾನ್‌ಸ್ಟಾಸ್‌ನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕಿಸಿದ್ದಾರೆ
    • ಭಾರತವನ್ನು ಮುನ್ನಡೆಸುತ್ತಿದ್ದ ಜಸ್ಪ್ರೀತ್ ಬುಮ್ರಾ
"ಬುಮ್ರಾ ಜೊತೆ ಮಾತನಾಡೋ ಹಕ್ಕು ಅವನಿಗಿಲ್ಲ..." ಸರಣಿ ಸೋತ ಬೆನ್ನಲ್ಲೇ ಗರಂ ಆದ ಕೋಚ್‌ ಗಂಭೀರ್ ಹೀಗಂದಿದ್ದು ಯಾರಿಗೆ? title=
Gautam Gambhir

Gautam Gambhir criticizes sam konstas: ಐದನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಸ್ಯಾಮ್ ಕಾನ್‌ಸ್ಟಾಸ್‌ನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕಿಸಿದ್ದಾರೆ.

ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯ ನಂತರ ಭಾರತವನ್ನು ಮುನ್ನಡೆಸುತ್ತಿದ್ದ ಜಸ್ಪ್ರೀತ್ ಬುಮ್ರಾ, ಉಸ್ಮಾನ್ ಖವಾಜಾ ವಿಕೆಟ್‌ ಪಡೆಯುವ ಮುನ್ನ ಸ್ಯಾಮ್ ಕಾನ್ಸ್ಟಾಸ್ ಅವರಿಗೆ ಏನೋ ಹೇಳುತ್ತಿರುವುದು ಕಂಡುಬಂದಿತ್ತು, ಇದರ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಮಧ್ಯರಾತ್ರಿ ಐಶ್ವರ್ಯ ರೈ ಮನೆ ಮುಂದೆ ಸಲ್ಮಾನ್‌ ಖಾನ್‌ ಗಲಾಟೆ ಮಾಡಿದ್ರಾ! FIR ಕೂಡ ದಾಖಲಾಗಿತ್ತಾ!?

ಇದೀಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್‌ ಗೌತಮ್‌ ಗಂಭೀರ್‌, "ಇದು ಕಠಿಣ ಜನರು ಆಡುವ ಕಠಿಣ ಆಟ. ಮೃದುವಾಗಿ ಹೋಗಲು ಸಾಧ್ಯವಿಲ್ಲ. ಆದರೆ ಇದರಲ್ಲಿ ಯಾವುದೇ ಬೆದರಿಕೆ ಇದೆ ಎಂದು ನಾನು ಭಾವಿಸುವುದಿಲ್ಲ. ಉಸ್ಮಾನ್ ಖವಾಜಾ ಸಮಯ ವ್ಯರ್ಥ ಮಾಡುತ್ತಿದ್ದಾಗ, ಜಸ್ಪ್ರೀತ್ ಬುಮ್ರಾ ಜೊತೆ ಕಾನ್‌ಸ್ಟಾಸ್‌ ಮಾತನಾಡೋದು ತಪ್ಪು, ಆತನಿಗೆ ಯಾವುದೇ ಹಕ್ಕಿಲ್ಲ. ಇದಕ್ಕೂ ಅವನಿಗೂ ಯಾವುದೇ ಸಂಬಂಧವಿರಲಿಲ್ಲ. ಇದು ಅಂಪೈರ್‌ನ ಕೆಲಸವಾಗಿತ್ತು" ಎಂದಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ್ದರೂ ಸಹ, ಆ ನಂತರ ಸ್ಯಾಮ್‌ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಗೌತಮ್ ಗಂಭೀರ್ ಹಾರೈಸಿದ್ದಾರೆ. "ಆತ ಅನುಭವದಿಂದ ಕಲಿಯುತ್ತಾನೆ ಎಂದು ಆಶಿಸುತ್ತೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿದಿನ ಪ್ರದರ್ಶನವನ್ನು ಸುಧಾರಿಸಿಕೊಳ್ಳಬೇಕು. ಅನೇಕ ಬಾರಿ ನೀವು ನೇರವಾಗಿ ಮೈದಾನಕ್ಕೆ ಬಂದ ನಂತರ ಮೊದಲ ಎಸೆತದಲ್ಲಿ ಸ್ಟ್ರೋಕ್‌ಗಳನ್ನು ಹೊಡೆಯಲು ಸಾಧ್ಯವಿಲ್ಲ. ಮುಖ್ಯವಾಗಿ ರೆಡ್ ಬಾಲ್ ಕ್ರಿಕೆಟ್ ಅನ್ನು ಗೌರವಿಸಬೇಕು ಮತ್ತು ಅನುಭವಗಳಿಂದ ಕಲಿಯಬೇಕು. ಹೀಗೆಯೇ ಸ್ಯಾಮ್‌ ಕಾಮ್‌ಸ್ಟಾಸ್‌ ಕೂಡ ಕಲಿಯುತ್ತಾನೆ ಎಂದು ಭಾವಿಸುತ್ತೇವೆ. ನೀವು ಭಾರತದಂತಹ ಉನ್ನತ ದರ್ಜೆಯ ತಂಡವನ್ನು ಎದುರಿಸುತ್ತಿರುವಾಗ, ಭವಿಷ್ಯಕ್ಕಾಗಿ ಬಹಳಷ್ಟು ಕಲಿಯುತ್ತೀರಿ. ಏನಾಯಿತು ಎಂಬುದು ಮುಖ್ಯವಲ್ಲ, ಅದನ್ನು ಉತ್ಪ್ರೇಕ್ಷೆ ಮಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಈ ಜಾಗದಲ್ಲಿ ನಡೆದಿರುವುದು ಇದೊಂದೇ ಅಲ್ಲ, ಈ ಹಿಂದೆಯೂ ಬೇಕಾದಷ್ಟು ಘಟನೆಗಳು ನಡೆದಿವೆ" ಎಂದು ಹೇಳಿದರು.

ಇದನ್ನೂ ಓದಿ: ಬಾಳೆಹಣ್ಣಿಗೆ ಇದೊಂದನ್ನು ಬೆರೆಸಿ ಹಚ್ಚಿ.. 10 ನಿಮಿಷದಲ್ಲೇ ಬಿಳಿ ಕೂದಲು ಕಪ್ಪಾಗುವುದು ಖಚಿತ..!

ಭಾನುವಾರ ಸಿಡ್ನಿ ಟೆಸ್ಟ್‌ನ ಮೂರನೇ ದಿನದಂದು ಆಸ್ಟ್ರೇಲಿಯಾ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯನ್ನು 3-1 ರಿಂದ ಗೆದ್ದುಕೊಂಡ ಆಸೀಸ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು. ಇನ್ನು ಇಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಸೋಲಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಿಂದ ಹೊರಗುಳಿದಿದೆ. ಭಾರತ ನೀಡಿದ್ದ 162 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಜಯಭೇರಿ ಬಾರಿಸಿತು. ಸುಮಾರು ಒಂದು ದಶಕದ ನಂತರ ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದೆ. ಭಾರತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ಹೊರಬಿದ್ದಿದ್ದು, ಟೀಂ ಇಂಡಿಯಾ ಈಗ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News