chamarajaNagar: ಇಂಗ್ಲಿಷ್ ವ್ಯಾಮೋಹ, ಸಾರಿಗೆ ತೊಂದರೆಯಿಂದ ಗಡಿಜಿಲ್ಲೆ ಚಾಮರಾಜನಗರದಲ್ಲಿ 2023-24 ರಲ್ಲಿ 12 ಮತ್ತು ಈ ಸಾಲಿನಲ್ಲಿ 8 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿದೆ. ಈ ಬಗ್ಗೆ ಪಾಲಕರು ಪ್ರಿ ಕೆಜಿಗಳನ್ನು ಆರಂಭಿಸಿದರೇ, ಇಂಗ್ಲಿಷ್ ಮಾಧ್ಯಮ ಇದ್ದರೇ, ಶಾಲಾ ವಾಹನ ಸೌಲಭ್ಯ ಕಲ್ಪಿಸಿದರೇ ಸರ್ಕಾರಿ ಶಾಲೆಗೆ ಸೇರಿಸುವುದಾಗಿ ಶಿಕ್ಷಣ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ.
ಯಾವ್ಯಾವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಬಂದ್ದಾಗಿದೆ ಎಂದು ನೋಡುವುದಾದರೇ ಚಾಮರಾಜನಗರ ತಾಲೂಕಿನ ಸಾಣೇಗಾಲ, ಕಳ್ಳಿಪುರ, ಪುಟ್ಟೇಗೌಡನಹುಂಡಿ, ಹೊಸಹಳ್ಳಿ ಮತ್ತು 2024-25 ನೇ ಸಾಲಿನಲ್ಲಿ ಮೂಡ್ಲುಪುರ, ಗೆಜ್ಜಲ್ ಪಾಳ್ಯ, ಅಂಚಿತಾಳಪುರ, ಗೋವಿಂದವಾಡಿ, ಕುರುಬರಹುಂಡಿ ಸರ್ಕಾರಿ ಶಾಲೆಗಳು ಬಂದ್ದಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ 2023-24 ನೇ ಸಾಲಿನಲ್ಲಿ ಬರಗಿ ಕಾಲೋನಿ, ಮೇಲುಕಾಮನಹಳ್ಳಿ, ಮರಳಾಪುರ ಶಾಲೆ 2024-25 ನೇ ಸಾಲಿನಲ್ಲಿ ಹುತ್ತೂರು, ಕಬ್ಬಳ್ಳಿ, ಈದ್ಗಾ ಮೊಹಲ್ಲಾ, ಹಕ್ಕಲಪುರ ಶಾಲೆಗಳು ಬಂದ್ ಆಗಿವೆ.
ಇದನ್ನೂ ಓದಿ-ಬಗ್ಗಿ ಕಾರು ಹತ್ತುವಾಗ ಕೀರ್ತಿ ಸುರೇಶ್ ಜೊತೆ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿ..! ವಿಡಿಯೋ ವೈರಲ್..
ಹನೂರು ತಾಲೂಕಿನಲ್ಲಿ 2024-25 ನೇ ಸಾಲಿನಲ್ಲಿ ಚಂಗಡಿ, ಎಡಳಿದೊಡ್ಡಿ ಶಾಲೆಗಳು, ಯಳಂದೂರು ತಾಲೂಕಿನಲ್ಲಿ 2023-24 ನೇ ಸಾಲಿನಲ್ಲಿ ದಾಸನಹುಂಡಿ ಶಾಲೆ ಓರ್ವ ವಿದ್ಯಾರ್ಥಿಯೂ ದಾಖಲಾಗದ ಪರಿಣಾಮ ಶಾಲೆಗಳು ಬಂದಾಗಿದೆ. ಚಾಮರಾಜನಗರದ ಕಿರಗಸೂರು ಶಾಲೆ, ಗುಂಡ್ಲುಪೇಟೆ ತಾಲೂಕಿನ ಹೊಸಪುರ, ಉತ್ತನಗೆರೆಹುಂಡಿ ಶಾಲೆಗಳು ರೀ ಓಪನ್ ಆಗಿದ್ದು 20 ಶಾಲೆಗಳು ಬಾಗಿಲೆಳೆದುಕೊಂಡಿವೆ.
ಪಾಲಕರ ಬೇಡಿಕೆ ಏನು..?
ಇಂಗ್ಲಿಷ್ ಮೀಡಿಯಂ ಮಾಡಿದರೇ ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ, ಪ್ರೀ ಕೆಜಿಗಳನ್ನು ಆರಂಭಿಸುವ ಬೇಡಿಕೆಗಳನ್ನು ಪಾಲಕರು ಇಡುತ್ತಿದ್ದಾರೆ. ಶಾಲಾ ವಾಹನ, ಸಾರಿಗೆ ಸೌಲಭ್ಯ ಕೊಟ್ಟರೇ ಮಕ್ಕಳನ್ನು ಕಳುಹಿಸುತ್ತೇವೆ ಎಂಬುದು ಕೂಡ ಹಲವು ಪಾಲಕರ ಒತ್ತಾಯವಾಗಿದೆ.
ಇದನ್ನೂ ಓದಿ-ಬಗ್ಗಿ ಕಾರು ಹತ್ತುವಾಗ ಕೀರ್ತಿ ಸುರೇಶ್ ಜೊತೆ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿ..! ವಿಡಿಯೋ ವೈರಲ್..
ಈ ಬಗ್ಗೆ ಚಾಮರಾಜನಗರ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾತನಾಡಿ, ಪಾಲಕರ ಬೇಡಿಕೆಗಳನ್ಮು ಸರ್ಕಾರ ಸಕಾರಾತ್ಮಕವಾಗಿ ಚರ್ಚೆ ನಡೆಸಿದೆ, ಸಿಎಸ್ಆರ್ ಫಂಡ್ ನಿಂದ ಶಾಲಾ ವಾಹನ ಕಲ್ಪಿಸುವ ಮತ್ತು ದಾನಿಗಳಿಂದ ಸರ್ಕಾರಿ ಶಾಲೆಯನ್ನು ದುರಸ್ತಿ ಪಡಿಸಲು ಮುಂದಾಗಿದ್ದೇವೆ, ಪ್ರೀ ಕೆಜಿಗಳನ್ನು ಆರಂಭಿಸಿ ಸರ್ಕಾರಿ ಶಾಲೆ ಉಳಿಸುವತ್ತ ಗಮನ ಹರಿಸುತ್ತೇವೆ ಎಂದಿದ್ದಾರೆ.
ಗ್ರಾಮೀಣ ಭಾಗ, ಕಾಡಂಚಿನ ಪ್ರದೇಶಗಳಲ್ಲೇ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಬೇಸರದ ಸಂಗತಿಯಾಗಿದ್ದು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಲೆಗಳತ್ತ ಮಕ್ಕಳನ್ನು ಕರೆತರುವ ಕಾರ್ಯಕ್ರಮ ರೂಪಿಸಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್