Child Security:ಈ Smart School Bag ನಿಂದ ಪೋಷಕರು ತಮ್ಮ ಮನೆಯಿಂದಲೇ ಮಕ್ಕಳ ಮೇಲೆ ನಿಗಾವಹಿಸಬಹುದು

Child Security: ಇದು ಸಾಮಾನ್ಯ ಬ್ಯಾಗ್ ಅಲ್ಲ, Huawei ನಿಂದ ಪರಿಚಯಿಸಲ್ಪಟ್ಟ ಈ ಬ್ಯಾಗ್ ಅಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿದೆ.

Written by - Nitin Tabib | Last Updated : Jan 18, 2022, 12:08 PM IST
  • ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಈ ಸ್ಮಾರ್ಟ್ ಸ್ಕೂಲ್ ಬ್ಯಾಗ್
  • ಈ ಬ್ಯಾಗ್ ಸಹಾಯದಿಂದ ಪೋಷಕರು ತಮ್ಮ ಮಗುವಿನ ರಿಯಲ್ ಟೈಮ್ ಲೋಕೇಶನ್ ತಿಳಿಯಬಹುದು.
  • ಏನಿದು ಸ್ಮಾರ್ಟ್ ಸ್ಕೂಲ್ ಬ್ಯಾಗ್, ವಿಶೇಷತೆ ಏನು ತಿಳಿದುಕೊಳ್ಳೋಣ ಬನ್ನಿ.
Child Security:ಈ Smart School Bag ನಿಂದ ಪೋಷಕರು ತಮ್ಮ ಮನೆಯಿಂದಲೇ ಮಕ್ಕಳ ಮೇಲೆ ನಿಗಾವಹಿಸಬಹುದು title=
Smart School Bag (File Photo)

ನವದೆಹಲಿ: Smart School Bag - ಸ್ಮಾರ್ಟ್‌ನೆಸ್‌ನ ಮಾರುಕಟ್ಟೆಯಲ್ಲಿ ಇದೀಗ ಸ್ಕೂಲ್ ಬ್ಯಾಗ್‌ (School Bag) ಕೂಡ ಕದ ತಟ್ಟಿವೆ. ಹೌದು, Huawei ಶೀಘ್ರದಲ್ಲೇ ಮಕ್ಕಳಿಗಾಗಿ ಹೊಸ  ಸ್ಮಾರ್ಟ್ (Smart School Bag) ಶಾಲಾ ಬ್ಯಾಗ್ ಬಿಡುಗಡೆ ಮಾಡಲಿದೆ, ಇದು ಹಲವು ಸುಧಾರಿತ ವೈಶಿಷ್ಟ್ಯಗಳನ್ನು (Smart School Bag Features) ಹೊಂದಿದೆ. ಈ ಬ್ಯಾಗ್‌ಗೆ Huawei 9µm ಸ್ಮಾರ್ಟ್ ಪೊಸಿಷನಿಂಗ್ ಚಿಲ್ಡ್ರನ್ಸ್ ಸ್ಕೂಲ್‌ಬ್ಯಾಗ್ (Huawei 9µm Smart Positioning Children's Schoolbag) ಎಂದು ಹೆಸರಿಸಲಾಗಿದೆ.

ಇದು ಸಾಮಾನ್ಯ ಬ್ಯಾಗ್ ಅಲ್ಲ. Huawei ನಿಂದ ಪರಿಚಯಿಸಲ್ಪಟ್ಟ ಈ ವಿಶೇಷ ಬ್ಯಾಗ್ ಕೆಲ ಅಸಾಧಾರಣ ವೈಶಿಷ್ಟ್ಯಗಳನ್ನು ಹೊಂದಿದೆ. ಬ್ಯಾಗ್ ನಲ್ಲಿ ಸ್ಮಾರ್ಟ್ ಪೊಸಿಷನಿಂಗ್ ಫಂಕ್ಷನ್  ನೀಡಲಾಗಿದೆ, ಇದರ ಸಹಾಯದಿಂದ ಪೋಷಕರು ತಮ್ಮ ಮಕ್ಕಳ ರಿಯಲ್ ಟೈಮ್ ಲೋಕೇಶನ್ ಗಮನಿಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ, ಬೀಡೌ ಮತ್ತು 5CEP ನಿಖರತೆಯೊಂದಿಗೆ GPS ನಂತಹ ಕಾರ್ಯಗಳಿವೆ(Technology News In Kannada).

ಇದನ್ನೂ ಓದಿ-Flipkart Sale: ಫ್ಲಿಪ್‌ಕಾರ್ಟ್‌ನಲ್ಲಿ OPPO 5G ಸ್ಮಾರ್ಟ್‌ಫೋನ್ ಅನ್ನು ಕೇವಲ 300 ರೂ.ಗೆ ಖರೀದಿಸಲು ಸುವರ್ಣಾವಕಾಶ

ಆದರೆ ಈ ಉತ್ಪನ್ನವು ಶೀಘ್ರದಲ್ಲೇ ಲಭ್ಯವಿರುವುದಿಲ್ಲ. ಏಕೆಂದರೆ ಈ ಬ್ಯಾಗ್ ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಪ್ರಸ್ತುತ, ಇದನ್ನು Vmall ನಲ್ಲಿ ಪರೀಕ್ಷೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಈ ಬ್ಯಾಗ್ ಬೆಲೆ 699 ಯುವಾನ್ ಅಂದರೆ ಸುಮಾರು 8000 ರೂಪಾಯಿಗಳು ನಿಗದಿಪಡಿಸಲಾಗಿದೆ. ಈ ಬೆಲೆಯು ಪರೀಕ್ಷಾ ರೂಪಾಂತರವಾಗಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಅದರ ಬೆಲೆ ಸ್ವಲ್ಪ ಹೆಚ್ಚಾಗಬಹುದು. ಇದೇ ವೇಳೆ ಕಂಪನಿಯು ಈ ಬ್ಯಾಗ್ ನ  ಅಧಿಕೃತ ಬಿಡುಗಡೆ ಕುರಿತು ಯಾವುದೇ ಮಾಹಿತಿ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ-Offer! iPhone 12 Mini ಮೇಲೆ ಭಾರೀ ರಿಯಾಯಿತಿ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಮೊಬೈಲ್

ಈ ಸ್ಕೂಲ್ ಬ್ಯಾಗ್, ಅಪ್ಲಿಕೇಶನ್ ನಿಯಂತ್ರಣಗಳು ಮತ್ತು HarmonyOS ಕನೆಕ್ಟ್ ಬೆಂಬಲದೊಂದಿಗೆ ಬರುತ್ತದೆ. ಈ ಬ್ಯಾಗ್ ಅನ್ನು 'ಸ್ಮಾರ್ಟ್ ಲೈಫ್' ಅಪ್ಲಿಕೇಶನ್‌ನೊಂದಿಗೆ ಫೋನ್‌ಗೆ ಸಂಪರ್ಕಿಸಬಹುದು. ಒಮ್ಮೆ ಅಪ್ಲಿಕೇಶನ್‌ಗೆ ಸಂಪರ್ಕಗೊಂಡ ನಂತರ, ಪೋಷಕರು ಮನೆ/ಶಾಲೆ/ಇತರ ಸ್ಥಳಗಳನ್ನು ಒಳಗೊಂಡಿರುವ ಮೂರು ಕಾವಲು ಪ್ರದೇಶಗಳನ್ನು ಹೊಂದಿಸಬಹುದು. ಮಗುವು ಈ ಬ್ಯಾಗ್‌ನೊಂದಿಗೆ ನಿಗದಿತ ಸ್ಥಳವನ್ನು ತಲುಪಿದ ತಕ್ಷಣ, ಅದರ ಬಗ್ಗೆ ಮಾಹಿತಿಯು ಆ್ಯಪ್ ಮೂಲಕ ಪೋಷಕರಿಗೆ ಮಾಹಿತಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳು ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳನ್ನು ಕೊಂಡೊಯ್ಯಲು ಅನುಮತಿಸದ ಸ್ಥಳಗಳಲ್ಲಿ ಈ ಬ್ಯಾಗ್ ಉಪಯುಕ್ತವಾಗಿದೆ.

ಇದನ್ನೂ ಓದಿ-Omicron ಹಾಗೂ Delta Corona ರೂಪಾಂತರಿಗಳನ್ನು ಪ್ರತ್ಯೇಕಿಸುವ ಸುಲಭ ವಿಧಾನ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News