WhatsApp ನಲ್ಲಿ ಹೊಸ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭವಾಗಿ ಖಾತೆ ಅಥವಾ ಸಂಖ್ಯೆ ಬದಲಾಯಿಸುವುದು ಹೇಗೆ?

ಒಂದು ವೇಳೆ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಮತ್ತು ನಂತರ ನಿಮ್ಮ ವಾಟ್ಸಾಪ್ ಖಾತೆಯನ್ನು ಸಹ ಹೊಸ ಸಂಖ್ಯೆಗೆ ಬದಲಾಯಿಸಲು ಬಯಸಿದರೆ, ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.

Last Updated : Sep 28, 2020, 07:12 PM IST
  • ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಪ್ರಮುಖವಾದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.
  • ವಾಟ್ಸ್ ಆಪ್ ಖಾತೆಯನ್ನು ಹೇಗೆ ಡಿಲೀಟ್ ಮಾಡಬೇಕು?
  • ವಾಟ್ಸ್ ಆಪ್ ಸಂಖ್ಯೆಯನ್ನು ಹೇಗೆ ಬದಲಾಯಿಸಬೇಕು?
WhatsApp ನಲ್ಲಿ ಹೊಸ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭವಾಗಿ ಖಾತೆ ಅಥವಾ ಸಂಖ್ಯೆ ಬದಲಾಯಿಸುವುದು ಹೇಗೆ? title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ (WhatsApp) ಪ್ರಮುಖವಾದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಜನರು ಸಂವಹನಕ್ಕಾಗಿ ವಾಟ್ಸಾಪ್ ಅನ್ನು ಹೆಚ್ಚು ಬಳಸುತ್ತಿದ್ದಾರೆ. ಆದರೆ ಕೆಲವೊಮ್ಮೆ, ನಾವು ಫೋನ್ ಸಂಖ್ಯೆಯನ್ನು ಬದಲಾಯಿಸುತ್ತೇವೆ ಮತ್ತು ಖಂಡಿತವಾಗಿಯೂ ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸಲು ಬಯಸುತ್ತೇವೆ. ಫೋನ್ ಸಂಖ್ಯೆಯನ್ನು ಬದಲಾಯಿಸಿದ ನಂತರವೂ ಕೂಡ  ವಾಟ್ಸಾಪ್ ಹಳೆಯ ಸಂಖ್ಯೆಯನ್ನು ಬಳಸಬಹುದಾಗಿದೆ. ಆದರೆ ನೀವು ವಾಟ್ಸಾಪ್ ಅನ್ನು ಹೊಸ ಸಂಖ್ಯೆಗೆ ಬದಲಾಯಿಸಲು ಬಯಸಿದರೆ ಅಥವಾ ಕೆಲವು ಕಾರಣಗಳಿಂದಾಗಿ ವಾಟ್ಸಾಪ್ ಖಾತೆಯನ್ನು ಅಳಿಸಲು ಬಯಸಿದರೆ, ಅದನ್ನು ಸರಳ ಹಂತಗಳಲ್ಲಿ ಮಾಡಬಹುದಾಗಿದೆ.

ಇದನ್ನು ಓದಿ- ಈ ಮೋಜಿನ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್ನಲ್ಲಿ ಸಿಗುತ್ತಿದೆ ಹೊಸ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್

ವಾಟ್ಸ್ ಆಪ್ ಸಂಖ್ಯೆಯನ್ನು ಹೇಗೆ ಬದಲಾಯಿಸಬೇಕು?
- ವಾಟ್ಸ್ ಆಪ್ ಸೆಟ್ಟಿಂಗ್ಸ್ ನಲ್ಲಿ ಹೋಗಿ, ಅಕೌಂಟ್ಸ್ ಮೇಲೆ ಕ್ಲಿಕ್ಕಿಸಿ. ನಂತರ ಚೇಂಜ್ ನಂಬರ್ ಮೇಲೆ ಕ್ಲಿಕ್ಕಿಸಿ.

- ಇದಾದ ಬಳಿಕ ನೀವು ನಿಮ್ಮ ಹಳೆ ಸಂಖ್ಯೆಯನ್ನು ನಮೂದಿಸಬೇಕು. ಜೊತೆಗೆ ನೀವು ಸ್ವಿಚ್ ಮಾಡಲು ಬಯಸುವ ಹೊಸ ಸಂಖ್ಯೆಯನ್ನೂ ಕೂಡ ನಮೂದಿಸಬೇಕು.

-ನಂಬರ್ ಬದಲಾವಣೆ ಮಾಡುವ ಮೊದಲು ನಿಮ್ಮ ಹೊಸ ನಂಬರ್ ಸಕ್ರೀಯವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಹೊಸ ನಂಬರ್ ಗೆ ಸಂದೇಶ ಹಾಗೂ ಕರೆಗಳು ಬರುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

- ಇದಾದ ಬಳಿಕ ನೋಟಿಫೈ ಕಾಂಟ್ಯಾಕ್ಟ್ಸ್ ಆಪ್ಶನ್ ಅನ್ನು ಸಕ್ರೀಯಗೊಳಿಸಿ. ಇದರಿಂದ ನಿಮ್ಮ ಎಲ್ಲ ಕಾಂಟಾಕ್ಟ್ ನಲ್ಲಿರುವ ಎಲ್ಲರಿಗೂ ಕೂಡ ನಿಮ್ಮ ಹೊಸ ನಂಬರ್ ಬಗ್ಗೆ ಸಂದೇಶ ರವಾನೆಯಾಗಲಿದೆ. ನೀವು ಖುದ್ದಾಗಿ ಕೂಡ ನಿಮ್ಮ ಕಾಂಟಾಕ್ಟ್ ನಲ್ಲಿರುವವರಿಗೆ ನಂಬರ್ ಬದಲಾವಣೆಯ ಕುರಿತು ಮಾಹಿತಿ ನೀಡಬಹುದಾಗಿದೆ.

- ಫೋನ್ ನಂಬರ್ ಚೇಂಜ್ ಮಾಡುವ ಆಪ್ಶನ್ ನಿಮಗೆ ಡಿಲೀಟ್ ಮೈ ಅಕೌಂಟ್ ನಲ್ಲಿ ಕೂಡ ಕಾಣಿಸಲಿದೆ.

-ಸೆಟ್ಟಿಂಗ್ಸ್ ನಲ್ಲಿ ಡಿಲೀಟ್ ಮೈ ಅಕೌಂಟ್ ಸೆಕ್ಷನ್ ಗೆ ಭೇಟಿ ನೀಡಿದಾಗ, ಡಿಲೀಟ್ ಮೈ ಅಕೌಂಟ್ ಬದಲಿಗೆ ಚೇಂಜ್ ಯುವರ್ ನಂಬರ್ ಒಪ್ಶನ್ ಮೇಲೂ ಕೂಡ ಕ್ಲಿಕ್ಕ ಮಾಡಬಹುದು ಹಾಗೂ ಇದರಿಂದಲೂ ಕೂಡ ನಿಮ್ಮ ನಂಬರ್ ಚೇಂಜ್ ಆಗುತ್ತದೆ.

ಇದನ್ನು ಓದಿ- ಮೊಬೈಲ್ ನಂಬರ್ ಇಲ್ಲದೆ WhatsApp ನಿರ್ವಹಿಸುವುದು ಹೇಗೆ, ಇಲ್ಲಿದೆ ವಿಧಾನ

ವಾಟ್ಸ್ ಆಪ್ ನಂಬರ್ ಹೇಗೆ ಡಿಲೀಟ್ ಮಾಡಬೇಕು?
ಒಂದು ವೇಳೆ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ವಾಟ್ಸ್ ಆಪ್ ಖಾತೆಗಳಿದ್ದು, ಹಳೆ ಖಾತೆಯನ್ನು ನೀವು ಬಂದ್ ಮಾಡಲು ಬಯಸುತ್ತಿದ್ದರೆ, ಇದಕ್ಕಾಗಿ ಸಿಂಪಲ್ ಸ್ಟೆಪ್ಸ್ ಅನುಸರಿಸಿ. ಹಲವು ಬಾರಿ ಕೆಲವರು ವಾಟ್ಸ್ ಆಪ್ ನಿಂದ ಸ್ವಲ್ಪ ಬಿಡುವು ಕೂಡ ಪಡೆಯಲು ಬಯಸುತ್ತಾರೆ. ಈ ವೇಳೆ ಅವರು ತಮ್ಮ ವಾಟ್ಸ್ ಆಪ್ ಖಾತೆ ಡಿಲೀಟ್ ಮಾಡುತ್ತಾರೆ. ವಾಟ್ಸ್ ಆಪ್ ಖಾತೆ ಡಿಲೀಟ್ ಮಾಡಲು ಒಂದು ಸುಲಭ ಉಪಾಯವಿದೆ. ಅದೇನೆಂದರೆ ಆಪ್ ಅನ್ನು ಡಿಲೀಟ್ ಮಾಡಿ.

- ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ ವಿಭಾಗದಲ್ಲಿನ ಅಕೌಂಟ್ಸ್ ಸೆಕ್ಷನ್ ಗೆ ಭೇಟಿ ನೀಡಿ. 

- ಇದಾದ ಬಳಿಕ ಡಿಲೀಟ್ ಮೈ ಅಕೌಂಟ್ ಮೇಲೆ ಕ್ಲಿಕ್ಕ ಮಾಡಿ.

- ಇದಾದ ಬಳಿಕ ನೀವು ನಿಮ್ಮ ವಾಟ್ಸ್ ಆಪ್ ಹೊಂದಿರುವ ಸಂಖ್ಯೆಯನ್ನು ನಮೂದಿಸಬೇಕು.

ಇದನ್ನು ಓದಿ- Bank ಗ್ರಾಹಕರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, WhatsApp ಮೂಲಕ ಮನೆಬಾಗಿಲಿಗೆ ಬರಲಿದೆ ಈ ಸೇವೆ

- ಬಳಿಕ ಡಿಲೀಟ್ ಮೈ ಅಕೌಂಟ್ ಮೇಲೆ ಕ್ಲಿಕ್ ಮಾಡಿ

- ಇದಾದ ಬಳಿಕ ನಿಮ್ಮ ವಾಟ್ಸ್ ಆಪ್ ಖಾತೆಯ ಇನ್ಫಾರ್ಮಶನ್ ಹಾಗೂ ಪ್ರೋವೈಲ್ ಡಿಲೀಟ್ ಆಗಲಿದೆ.

Trending News