Google Search: ಗೂಗಲ್ ನಲ್ಲಿ ಈ 4 ಸಂಗತಿಗಳ ಹುಡುಕಾಟ ನಡೆಸಿದರೆ ಕಂಬಿ ಎಣಿಸಬೇಕಾಗುತ್ತದೆ.. ಎಚ್ಚರ!

Google Rules for Users: ಮೈ ಮರೆತು ಗೂಗಲ್ ಬಳಸುವಾಗ ಸರ್ಚ ಮಾಡಬಾರದ್ದನ್ನು ನೀವು ಸರ್ಚ್ ಮಾಡಿದರೆ, ಅದು ನಿಮ್ಮನ್ನು ಜೈಲಿಗಟ್ಟಬಹುದು ಎಂಬುದನ್ನು ನೆನಪಿನಲ್ಲಿಡಿ.  

Written by - Nitin Tabib | Last Updated : Jul 15, 2022, 10:06 PM IST
  • ಗೂಗಲ್ ನಲ್ಲಿ ಅಪ್ಪಿತಪ್ಪಿಯೂ ಕೂಡ ಈ ಸಂಗತಿಗಳ ಹುಡುಕಾಟ ಬೇಡ
  • ಇಲ್ಲದೆ ಹೋದರೆ ಅದು ನಿಮ್ಮನ್ನು ಜೈಲಿಗೂ ಕೂಡ ಕಳುಹಿಸಬಹುದು.
  • ಯಾವ ಸಂಗತಿಗಳನ್ನು ಗೂಗಲ್ ನಲ್ಲಿ ಹುಡುಕಾಟ ನಡೆಸಬಾರದು ತಿಳಿಯೋಣ ಬನ್ನಿ
Google Search: ಗೂಗಲ್ ನಲ್ಲಿ ಈ 4 ಸಂಗತಿಗಳ ಹುಡುಕಾಟ ನಡೆಸಿದರೆ ಕಂಬಿ ಎಣಿಸಬೇಕಾಗುತ್ತದೆ.. ಎಚ್ಚರ! title=
Google Search

Google Can Be Dandgerous If Not Used Carefully: ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆಯಾಗುವ ಸರ್ಚ್ ಇಂಜಿನ್ ನಲ್ಲಿ ಗೂಗಲ್ ಮೊದಲ ಸ್ಥಾನದಲ್ಲಿದೆ. ನೀವು Google ನಿಂದ ನೀವು ಯಾವುದೇ ಮಾಹಿತಿಯನ್ನು ಚಿಟಿಕೆ ಹೊದೆಯೋದ್ರಲ್ಲಿ ಪಡೆಯಬಹುದು. ನೀವು ಮಾಡಬೇಕಾಗಿರುವುದು ಗೂಗಲ್ ಸರ್ಚ್‌ಗೆ ಹೋಗಿ ಅಲ್ಲಿ ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡಬಹುದು ಅಥವಾ ಕೇಳಬಹುದು. ಕಣ್ಣು ಮಿಟುಕಿಸುವುದರಲ್ಲಿ ನೀವು ಪ್ರಶ್ನೆಗೆ ಉತ್ತರವನ್ನು ನಿಮ್ಮ ಮುಂದಿರುತ್ತದೆ. ಗೂಗಲ್ ನಿಮಗೆ ಉತ್ತಮ ವೇಗದೊಂದಿಗೆ ಆಳವಾದ ವಿವರಗಳ ಮಾಹಿತಿ ಒದಗಿಸುತ್ತದೆ. ಆದರೆ, ಕೆಲವು ಜನರು ತಪ್ಪಾದ ಮಾಹಿತಿ ಪಡೆಯಲು Google ಅನ್ನು ಬಳಸುತ್ತಾರೆ. ಈ ರೀತಿ ಮಾಡಿದರೆ ನೀವು ಜೈಲಿಗೆ ಸೇರಬೇಕಾಗುವ ಪ್ರಸಂಗ ಬರಬಹುದು. ಆದರೆ, ಅದು ಬರುವುದಿಲ್ಲ. ಏಕೆಂದರೆ ಇಂದು ನಾವು ನಿಮಗೆ ಗೂಗಲ್ ಸರ್ಚ್ ನಲ್ಲಿ ಯಾವ ಸಂಗತಿಗಳ ಹುಡುಕಾಟ ಜೈಲು ಶಿಕ್ಷೆಗೆ ಕಾರಣವಾಗುತ್ತದೆ ಎಂಬುದನ್ನು ಹೇಳಲಿದ್ದೇವೆ. 

ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಮಾಹಿತಿ
ಚೈಲ್ಡ್ ಪ್ರೋನೋಗ್ರಫಿ ಒಂದು ತುಂಬಾ ಗಂಭೀರವಾದ ಸಮಸ್ಯೆಯಾಗಿದ್ದು, ನೀವು Google ನಲ್ಲಿ ಅದರ ಬಗ್ಗೆ ಹುಡುಕಾಟ ನಡೆಸಿದರೆ, ನಂತರ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗುವ ಸಾಧ್ಯತೆ ಇರುತ್ತದೆ. ಐಟಿ ಕಾಯಿದೆಯಲ್ಲಿ ಅಂತಹ ಹುಡುಕಾಟಕ್ಕೆ ಸಂಪೂರ್ಣ ನಿಷೇಧವಿದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ನೀವು ಅಂತಹ ಯಾವುದೇ ವಿಷಯವನ್ನು ಹುಡುಕಿದರೆ, ನೀವು ಜೈಲಿನಲ್ಲಿ ಕಂಬಿ ಎಣಿಸಬೇಕಾಗಬಹುದು. 

ಸ್ಫೋಟಕಗಳನ್ನು ತಯಾರಿಸುವ ಮಾಹಿತಿ
ಗೂಗಲ್‌ನಲ್ಲಿ ಬಾಂಬ್ ತಯಾರಿಕೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಅನೇಕ ಬಾರಿ ಜನರು ತಮಾಷೆಯಾಗಿ ಹುಡುಕಾಟ ನಡೆಸುತ್ತಾರೆ,  ತನಿಖೆಯ ವೇಳೆ ನೀವು ಅದೇ ರೀತಿ ಮಾಡುತ್ತಿರುವುದು ಕಂಡುಬಂದರೆ, ನೀವು ಜೈಲಿಗೆ ಹೋಗಬೇಕಾಗಬಹುದು ಏಕೆಂದರೆ ಇದು ದೇಶದ ಭದ್ರತೆಗೆ ಸಂಬಂಧಿಸಿದೆ.

ಇದನ್ನೂ ಓದಿ-Uber ಚಾಲಕರು ಇನ್ನು ಕ್ಯಾನ್ಸಲ್ ಮಾಡುವಂತಿಲ್ಲ ಕ್ಯಾಬ್ , appನಲ್ಲಿ ಬಂದಿದೆ ಹೊಸ ಅಪ್ಡೇಟ್

ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ
ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿಡಿಯೊಗಳು ಮತ್ತು ಕಂಟೆಂಟ್‌ಗಳನ್ನು ಗೂಗಲ್‌ನಲ್ಲಿ ಹುಡುಕಿದರೆ ಜೈಲು ಸೇರಬೇಕಾಗುವ ಸಾಧ್ಯತೆ ಇದೆ. ಸರ್ಕಾರವು ಯಾವಾಗಲೂ ಇಂತಹ ಹುಡುಕಾಟಗಳ ಮೇಲೆ ಕಣ್ಣಿಟ್ಟಿರುತ್ತದೆ ಮತ್ತು ಒಬ್ಬ ವ್ಯಕ್ತಿಯು Google ನಲ್ಲಿ ಈ ವಿಷಯಗಳನ್ನು ಹುಡುಕಿದರೆ, ಅವನು ಜೈಲಿಗೆ ಹೋಗಬೇಕಾಗಬಹುದು.

ಇದನ್ನೂ ಓದಿ-iPhone 12 ಮೇಲೆ 27 ಸಾವಿರ ರೂಪಾಯಿ ರಿಯಾಯಿತಿ..!

ನಿರ್ಬಂಧಿತ ಸ್ಥಳದ ಬಗ್ಗೆ ಮಾಹಿತಿ
ಭಾರತದಲ್ಲಿ ನಿಷೇಧಿತ ಸ್ಥಳಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನೀವು ನಿರಂತರವಾಗಿ ಪ್ರಯತ್ನಿಸುತ್ತಿದ್ದರೆ, ನಿಮ್ಮ ವಿರುದ್ಧ ಕೆಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  ಇಂತಹ ಹುಡುಕಾಟಗಳ ಮೇಲೂ ಕೂಡ ಸರ್ಕಾರ ಕಣ್ಣಿಟ್ಟಿರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News