Zero Electricity Bill: ಈ ಉಪಾಯ ಅನುಸರಿಸಿದರೆ ಎಸಿ, ಕೂಲರ್ ಬಳಸಿದರೂ ವಿದ್ಯುತ್ ಬಿಲ್ ಬರುತ್ತೆ ಶೂನ್ಯ

Electricity Bill will be Zero: ಮನೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸಿದ ನಂತರವೂ ನಿಮ್ಮ ವಿದ್ಯುತ್ ಬಿಲ್ ವರ್ಷಾನುಗಟ್ಟಲೆ 'ಜೀರೋ' ಆಗಿರುತ್ತದೆ.  ಹೇಗೆ ಗೊತ್ತೇ?

Written by - Yashaswini V | Last Updated : Jun 21, 2022, 12:26 PM IST
  • ಈ ಚಮತ್ಕಾರದಿಂದ ವಿದ್ಯುತ್ ಬಿಲ್ ಬರುತ್ತೆ 'ಶೂನ್ಯ'
  • ನವೀಕರಿಸಬಹುದಾದ ಇಂಧನ ಬಳಸಿ ಉಚಿತ ವಿದ್ಯುತ್ ಪಡೆಯಿರಿ
  • ಸೋಲಾರ್ ಪ್ಯಾನೆಲ್‌ನಲ್ಲಿ ಸರ್ಕಾರದ ಸಬ್ಸಿಡಿಯೊಂದಿಗೆ 100 ಪ್ರತಿಶತದಷ್ಟು ವಿದ್ಯುತ್ ಬಿಲ್‌ಗಳನ್ನು ಉಳಿಸಿ
Zero Electricity Bill: ಈ ಉಪಾಯ ಅನುಸರಿಸಿದರೆ ಎಸಿ, ಕೂಲರ್ ಬಳಸಿದರೂ ವಿದ್ಯುತ್ ಬಿಲ್ ಬರುತ್ತೆ ಶೂನ್ಯ  title=
Zero Electricity Bill

ವಿದ್ಯುತ್ ಬಿಲ್ ಉಳಿಸಲು ಸುಲಭ ಟ್ರಿಕ್:  ಬೇಸಿಗೆ ಇರಲಿ ಅಥವಾ ಚಳಿಗಾಲವಿರಲಿ ನಾವು ಮನೆಯಲ್ಲಿ ಹಲವು ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುತ್ತೇವೆ. ಇದು ನಮ್ಮ ತಿಂಗಳ ವಿದ್ಯುತ್ ಬಿಲ್ ಮೇಲೆ ನೇರ ಪರಿಣಾಮ ಬೀರುತ್ತದೆ. ನೀವು ಕೂಡ ದುಬಾರಿ ವಿದ್ಯುತ್ ಬಿಲ್ ನಿಂದ ತೊಂದರೆಗೀಡಾಗಿದ್ದರೆ, ಕೆಲವು ಟ್ರಿಕ್ ಅನುಸರಿಸುವ ಮೂಲಕ ನೀವು ವರ್ಷಾನುಗಟ್ಟಲೆ "ಶೂನ್ಯ" ವಿದ್ಯುತ್ ಬಿಲ್ ಪಡೆಯಬಹುದು. ಏನದು ಟ್ರಿಕ್ ಮುಂದೆ ಓದಿ...

ಈ ಚಮತ್ಕಾರದಿಂದ ವಿದ್ಯುತ್ ಬಿಲ್ ಬರುತ್ತೆ 'ಶೂನ್ಯ':
ಎಲ್ಲಾ ಎಲೆಕ್ಟ್ರಿಕ್ ವಸ್ತುಗಳನ್ನು ಬಳಸಿಯೂ ಶೂನ್ಯ ವಿದ್ಯುತ್ ಬಿಲ್ ಪಡೆಯುವುದು ಎಂದರೆ ನಿಮಗೆ ಅಚ್ಚರಿ ಆಗಬಹುದು. ಆದರೆ, ಸೌರಶಕ್ತಿಯನ್ನು ಬಳಸುವುದರಿಂದ ನೀವು ದುಬಾರಿ ವಿದ್ಯುತ್ ಬಿಲ್ ತೊಂದರೆಯಿಂದ ಪರಿಹಾರ ಪಡೆಯಬಹುದಾಗಿದೆ. ವಾಸ್ತವವಾಗಿ, ಮನೆಯಲ್ಲಿ ಸೌರ ಫಲಕಗಳನ್ನು ಬಳಸಿದರೆ, ನಿಮಗೆ ಸರ್ಕಾರದಿಂದ  ಆರ್ಥಿಕ ಸಹಾಯ ಸಿಗುತ್ತದೆ. ಸೌರಶಕ್ತಿಯ ಸಹಾಯದಿಂದ ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸಬಹುದು ಮತ್ತು ದುಬಾರಿ ವಿದ್ಯುತ್ ಬಿಲ್‌ಗಳಿಂದ ಮುಕ್ತರಾಗಬಹುದು. 

ಸೋಲಾರ್ ಪ್ಯಾನಲ್‌ನಲ್ಲಿ ಸರ್ಕಾರದ ಸಬ್ಸಿಡಿ:
ಸೌರ ಫಲಕಗಳನ್ನು ಸ್ಥಾಪಿಸುವಾಗ, ನೀವು ಸರ್ಕಾರದಿಂದ ಸಬ್ಸಿಡಿಯನ್ನು ಸಹ ಪಡೆಯುತ್ತೀರಿ. ಸೌರ ಫಲಕವನ್ನು ಸ್ಥಾಪಿಸುವ ವೆಚ್ಚವು ಒಂದು ಬಾರಿ ಹೂಡಿಕೆಯಾಗಿದೆ, ನಂತರ ನೀವು ಆ ಫಲಕವನ್ನು ವರ್ಷಗಳವರೆಗೆ ವಿದ್ಯುತ್ ಬಳಕೆಗಾಗಿ ಬಳಸಬಹುದು. ಸೌರ ಫಲಕದ ಜೀವನವು ಸುಮಾರು 25 ವರ್ಷಗಳು , ಅಂದರೆ 25 ವರ್ಷಗಳವರೆಗೆ ನೀವು ವಿದ್ಯುತ್ ಬಿಲ್‌ನಿಂದ ಪರಿಹಾರ ಪಡೆಯಬಹುದು. ಜೊತೆಗೆ ಯಾವುದೇ ತೊಂದರೆ ಇಲ್ಲದೆ ವಿದ್ಯುತ್ ಅನ್ನು ಬಳಸಲೂ ಸಹ ಸಾಧ್ಯವಾಗುತ್ತದೆ. 

ಇದನ್ನೂ ಓದಿ- ಐಫೋನ್ ಫುಲ್ ಚಾರ್ಜ್ ಮಾಡಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ ಗೊತ್ತಾ?

ಇಂದಿನ ಸಮಯದಲ್ಲಿ ಸರ್ಕಾರವು ಸೌರಶಕ್ತಿಯನ್ನು ಉತ್ತೇಜಿಸುವಲ್ಲಿ ತೊಡಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಹೊಸ ಸೌರ ಮೇಲ್ಛಾವಣಿ ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ 3 kW ವರೆಗೆ ಸೌರ ಫಲಕಗಳನ್ನು ಸ್ಥಾಪಿಸಲು 40 ಪ್ರತಿಶತದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ.

ಉದಾಹರಣೆಗೆ, ನೀವು 2 kW ಸೌರ ಫಲಕಗಳನ್ನು ಸ್ಥಾಪಿಸಿದರೆ, ನೀವು ಸುಮಾರು 1.2 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಶೇ.40ರಷ್ಟು ಅಂದರೆ ಸುಮಾರು 48 ಸಾವಿರ ರೂ.ಗಳ ಸಹಾಯಧನ ಪಡೆಯುವುದರಿಂದ ನಿಮಗೆ 72 ಸಾವಿರ ರೂ.ಗಳ ಖರ್ಚು ತಗುಲುತ್ತದೆ.  

ಇದನ್ನೂ ಓದಿ- ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ !

ಸೌರ ಫಲಕಗಳನ್ನು ಅಳವಡಿಸುವ ಮೊದಲು, ನಿಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಬಳಸಲಾಗಿದೆ ಎಂಬುದನ್ನು ನೋಡಿ ಮತ್ತು ಅದಕ್ಕೆ ಅನುಗುಣವಾಗಿ ಫಲಕಗಳನ್ನು ಅಳವಡಿಸಿ. ಅಲ್ಲದೆ, ನೀವು ಸರ್ಕಾರದ ಅಧಿಕೃತ ವೆಬ್‌ಸೈಟ್ https://solarrooftop.gov.in/ ನಲ್ಲಿ ಸೌರ ಮೇಲ್ಛಾವಣಿಯನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News