Flipkart ತಂದಿದೆ ಹೊಸ ಸೌಲಭ್ಯ : ಇನ್ನು ಫಾಸ್ಟ್ಯಾಗ್ ಮತ್ತು ಫೋನ್ ಬಿಲ್ ಪಾವತಿ ಬಲು ಸುಲಭ

ವಿದ್ಯುತ್ ಬಿಲ್ ಮತ್ತು ಮೊಬೈಲ್ ರೀಚಾರ್ಜ್ ಅನ್ನು ಕೂಡಾ ಫ್ಲಿಪ್ ಕಾರ್ಟ್  ಆಪ್ ಮೂಲಕ ಮಾಡಬಹುದು.ಇದಲ್ಲದೆ ಈಗ Flipkart ಅಪ್ಲಿಕೇಶನ್‌ನಲ್ಲಿ ಈ ಬಿಲ್ ಗಳನ್ನು ಕೂಡಾ ಪಾವತಿಸಬಹುದು.

Written by - Ranjitha R K | Last Updated : Jul 11, 2024, 02:22 PM IST
  • ಫ್ಲಿಪ್‌ಕಾರ್ಟ್ ಇನ್ನು ಮುಂದೆ ಕೇವಲ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆಗಿಲ್ಲ.
  • ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಹಲವಾರು ರೀತಿಯ ಬಿಲ್‌ಗಳನ್ನು ಪಾವತಿಸಬಹುದು
  • ವಿದ್ಯುತ್ ಬಿಲ್ ಮತ್ತು ಮೊಬೈಲ್ ರೀಚಾರ್ಜ್ ಕೂಡಾ ಮಾಡಬಹುದು
Flipkart ತಂದಿದೆ ಹೊಸ ಸೌಲಭ್ಯ : ಇನ್ನು ಫಾಸ್ಟ್ಯಾಗ್ ಮತ್ತು ಫೋನ್ ಬಿಲ್ ಪಾವತಿ ಬಲು ಸುಲಭ  title=

ಬೆಂಗಳೂರು : ಫ್ಲಿಪ್‌ಕಾರ್ಟ್ ಇನ್ನು ಮುಂದೆ ಕೇವಲ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆಗಿಲ್ಲ.ಈಗ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಹಲವಾರು ರೀತಿಯ ಬಿಲ್‌ಗಳನ್ನು ಪಾವತಿಸಬಹುದು, ರೀಚಾರ್ಜ್ ಮಾಡಬಹುದು. ವಿದ್ಯುತ್ ಬಿಲ್ ಮತ್ತು ಮೊಬೈಲ್ ರೀಚಾರ್ಜ್ ಅನ್ನು ಕೂಡಾ ಈ ಆಪ್ ಮೂಲಕ ಮಾಡಬಹುದು. 

ಈಗ Flipkart ಅಪ್ಲಿಕೇಶನ್‌ನಲ್ಲಿ ಈ ಬಿಲ್ ಗಳನ್ನೂ ಪಾವತಿಸಬಹುದು:
ಫಾಸ್ಟ್ಯಾಗ್ ರೀಚಾರ್ಜ್
DTH ರೀಚಾರ್ಜ್
ಲ್ಯಾಂಡ್‌ಲೈನ್ ಬಿಲ್
ಬ್ರಾಡ್‌ಬ್ಯಾಂಡ್ ಬಿಲ್
ಮೊಬೈಲ್ ಪೋಸ್ಟ್‌ಪೇಯ್ಡ್ ಬಿಲ್

ಇದನ್ನೂ ಓದಿ : ಗರ್ಭಿಣಿಯರಿಗೆ ಉಚಿತ ಆಟೋ ಸೇವೆ :ನಮ್ಮ ಅಟೋ ಆಪ್ ಮೂಲಕ ನೋಂದಣಿ ಮಾಡಿದರೆ ನೀವಿದ್ದಲ್ಲಿಗೆ ಬರುತ್ತದೆ ಆಟೋ

ಈ ಪೇಮೆಂಟ್ ಅನ್ನು ಸುಲಭವಾಗಿ ಮಾಡಲು Flipkart BillDesk ಕಂಪನಿಯ ಸಹಯೋಗ ಪಡೆದುಕೊಂಡಿದೆ. BillDesk ಭಾರತದಲ್ಲಿ ಪ್ರಸಿದ್ಧ ಪೇಮೆಂಟ್ ಕಂಪನಿಯಾಗಿದೆ.ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್) ಸಹಯೋಗದಲ್ಲಿ ಫ್ಲಿಪ್‌ಕಾರ್ಟ್ ಈ ಹೊಸ ಸೇವೆಯನ್ನು ಆರಂಭಿಸಿದೆ.

ಫ್ಲಿಪ್‌ಕಾರ್ಟ್ ಕೂಡಾ ಈ ಆಫರ್ ತಂದಿದೆ :
ಈ ಹೊಸ ಸೇವೆಗಳನ್ನು ಉತ್ತೇಜಿಸಲು ಫ್ಲಿಪ್‌ಕಾರ್ಟ್ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್ UPI ಬಳಸಿ ಪೇಮೆಂಟ್ ಮಾಡಿದರೆ  ಸೂಪರ್‌ಕಾಯಿನ್‌ಗಳೊಂದಿಗೆ ಸಂಪೂರ್ಣ ಬಿಲ್‌ನಲ್ಲಿ ನೀವು 10% ವರೆಗೆ ರಿಯಾಯಿತಿ ಪಡೆಯಬಹುದು.ಆದರೆ ನೆನಪಿರಲಿ ಈ ಆಫರ್ ಸೀಮಿತ ಅವಧಿಗೆ ಮಾತ್ರ ಇರಲಿದೆ.

ಇದನ್ನೂ ಓದಿ : ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !

ಫ್ಲಿಪ್‌ಕಾರ್ಟ್ ತನ್ನ UPI ಸೇವೆಯನ್ನು ಪ್ರಾರಂಭಿಸಿದ್ದು, ಇದು ರೀಚಾರ್ಜ್ ಮತ್ತು ಬಿಲ್ ಪಾವತಿಗಳಿಗೆ ಸುರಕ್ಷಿತ ಮತ್ತು ಸುಲಭ ಮಾರ್ಗವಾಗಿದೆ.ಗ್ರಾಹಕರು ಈ ಸೇವೆಯನ್ನು ಬಳಸಿಕೊಂಡು SuperCoins ಮತ್ತು ಕ್ಯಾಶ್‌ಬ್ಯಾಕ್ ರೂಪದಲ್ಲಿ ಬಹುಮಾನಗಳನ್ನು ಗಳಿಸಬಹುದು. ಒಂದೇ ಕ್ಲಿಕ್‌ನಲ್ಲಿ ತ್ವರಿತ ಪಾವತಿಗಳನ್ನು ಪಡೆಯಬಹುದು.ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿರಲಿ ಅಥವಾ ಬಿಲ್‌ಗಳನ್ನು ಪಾವತಿಸುತ್ತಿರಲಿ ಈ ಸೇವೆಯು ಸಂಪೂರ್ಣ ಡಿಜಿಟಲ್ ಪಾವತಿ ಅನುಭವವನ್ನು ಸುಧಾರಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News