Flipkart Diwali Sale: ಕೇವಲ 500 ರೂ.ಗಳಲ್ಲಿ ಖರೀದಿಸಿ POCOನ ಅದ್ಭುತ 5G ಸ್ಮಾರ್ಟ್‌ಫೋನ್

Flipkart Diwali Sale: ನೀವು POCO 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ನೀವು ಆಫರ್‌ಗಳ ಲಾಭವನ್ನು ಪಡೆದರೆ, POCO M3 Pro 5G ರೂ 549 ಕ್ಕೆ ನಿಮ್ಮದಾಗುತ್ತದೆ.

Written by - Yashaswini V | Last Updated : Nov 2, 2021, 11:36 AM IST
  • POCO ನ 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು

    ನೀವು POCO M3 Pro 5G ಅನ್ನು ಕೇವಲ 549 ರೂ.ಗಳಲ್ಲಿ ಖರೀದಿಸಬಹುದು
  • ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್ ನಡೆಯುತ್ತಿದೆ
Flipkart Diwali Sale: ಕೇವಲ 500 ರೂ.ಗಳಲ್ಲಿ ಖರೀದಿಸಿ POCOನ ಅದ್ಭುತ 5G ಸ್ಮಾರ್ಟ್‌ಫೋನ್   title=
Flipkart Diwali Sale; POCO M3 Pro 5G

Flipkart Diwali Sale: ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್ ನಡೆಯುತ್ತಿದೆ. ಮಾರಾಟ ಮುಗಿಯಲು ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಕೊನೆಯ ಕ್ಷಣದಲ್ಲಿ ದುಬಾರಿ ವಸ್ತುಗಳನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲದೆ, ಸ್ಮಾರ್ಟ್ ಟಿವಿಗಳು ಮತ್ತು ಇತರ ಉತ್ಪನ್ನಗಳೂ ಮಾರಾಟದಲ್ಲಿ ವಿಜೃಂಭಿಸುತ್ತಿವೆ. 5G ಸ್ಮಾರ್ಟ್‌ಫೋನ್‌ಗಳು ಸಹ ಮಾರಾಟದಲ್ಲಿ ಸಾಕಷ್ಟು ಮಾರಾಟವಾಗುತ್ತಿವೆ, ಏಕೆಂದರೆ ಕಂಪನಿಯು ಇದರ ಮೇಲೆಯೂ ಕೊಡುಗೆಗಳನ್ನು ನೀಡುತ್ತಿದೆ. ನೀವು 5G ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಅವಕಾಶ. ನೀವು POCO  5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ನೀವು ಆಫರ್‌ಗಳ ಲಾಭವನ್ನು ಪಡೆದರೆ, POCO M3 Pro 5G ಸ್ಮಾರ್ಟ್ಫೋನ್ ಕೇವಲ 549 ರೂ.ಗಳಿಗೆ ನಿಮ್ಮದಾಗುತ್ತದೆ. ಹೇಗೆಂದು ತಿಳಿಯೋಣ...

POCO M3 Pro 5G ಕೊಡುಗೆಗಳು ಮತ್ತು ರಿಯಾಯಿತಿಗಳು:
ಫ್ಲಿಪ್‌ಕಾರ್ಟ್ ದೀಪಾವಳಿ ಮಾರಾಟದಲ್ಲಿ (Flipkart Diwali Sale), POCO M3 Pro 5G ಮೇಲೆ 1500 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿದೆ. ಅಂದರೆ, ನೀವು 15,999 ರೂ.ಗಳ ಫೋನ್ ಅನ್ನು 14,499 ರೂ.ಗೆ ಖರೀದಿಸಬಹುದು. ಆದರೆ ಅದರ ನಂತರವೂ ಅನೇಕ ಕೊಡುಗೆಗಳಿವೆ, ಅದರ ಲಾಭವನ್ನು ಪಡೆದುಕೊಂಡು ಫೋನ್ ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು. 

ಇದನ್ನೂ ಓದಿ- ಸೆಪ್ಟೆಂಬರ್ ತಿಂಗಳಲ್ಲಿ 22 ಲಕ್ಷದ 9 ಸಾವಿರ ಭಾರತೀಯ ಖಾತೆಗಳನ್ನು ನಿಷೇಧಿಸಿದ Whatsapp

POCO M3 Pro 5G ನಲ್ಲಿ ವಿನಿಮಯ ಕೊಡುಗೆ: 
POCO M3 Pro 5G ನಲ್ಲಿ 13,950 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ಇನ್ನೂ ಅಗ್ಗದ ದರದಲ್ಲಿ ಫೋನ್ ಅನ್ನು ಖರೀದಿಸಬಹುದಾಗಿದೆ. ಆದರೆ ನಿಮ್ಮ ಫೋನ್‌ನ ಸ್ಥಿತಿಯು ಉತ್ತಮವಾಗಿರಬೇಕು ಮತ್ತು ಮಾದರಿಯು ಇತ್ತೀಚಿನದಾಗಿರಬೇಕು. ನೀವು ಎಲ್ಲಾ ಕೊಡುಗೆಗಳನ್ನೂ ಪಡೆಯಲು ಯಶಸ್ವಿಯಾದರೆ, POCO M3 Pro 5G ಫೋನ್ ಕೇವಲ 549 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ- ಅತ್ಯಂತ ಕಡಿಮೆ ಬೆಲೆಗೆ iPhone 12 Mini ಖರೀದಿಸಲು ಸುವರ್ಣ ಅವಕಾಶ, Flipkart ಸೇಲ್ ನಲ್ಲಿ ಸಿಗುತ್ತಿದೆ ಭಾರೀ ಡಿಸ್ಕೌಂಟ್

POCO M3 Pro 5G ನಲ್ಲಿ ಬ್ಯಾಂಕ್ ಕೊಡುಗೆಗಳು:
ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ನೀವು ಬಯಸದಿದ್ದರೆ, ನೀವು ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆಯಬಹುದು. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನೀವು 1,250 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಅಂದರೆ, ನೀವು 10,199 ರೂಪಾಯಿಗೆ ಫೋನ್ ಖರೀದಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News