Flipkart Big Billion Days Sale offer: 5ಜಿ ಐಫೋನ್ ಅನ್ನು 13ಸಾವಿರ ರೂ.ಗಳಿಗೆ ಖರೀದಿಸುವ ಅವಕಾಶ

iPhone Under 13k: ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಐಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶವಿದೆ. ಐಫೋನ್ ಎಸ್‌ಇ ಅನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕೇವಲ 13 ಸಾವಿರ ರೂ.ಗಳಿಗೆ ಖರೀದಿಸಬಹುದಾಗಿದೆ. ಏನಿದು ಆಫರ್ ಎಂದು ತಿಳಿಯೋಣ...

Written by - Yashaswini V | Last Updated : Sep 29, 2022, 07:27 AM IST
  • 5ಜಿ ಐಫೋನ್ 13 ಸಾವಿರ ರೂ.ಗೆ ಲಭ್ಯ
  • ಏನಿದು ಆಫರ್!
  • ಸ್ಟಾಕ್ ಮುಗಿಯುವ ಮುನ್ನ ಬುಕ್ ಮಾಡಿ
Flipkart Big Billion Days Sale offer: 5ಜಿ ಐಫೋನ್ ಅನ್ನು 13ಸಾವಿರ ರೂ.ಗಳಿಗೆ ಖರೀದಿಸುವ ಅವಕಾಶ  title=
Flipkart big billion sale

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌: ಐಫೋನ್ ಅನ್ನು 14 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ಸತ್ಯ.  ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನೀವು ಐಫೋನ್ ಎಸ್‌ಇ ಅನ್ನು  ಕಡಿಮೆ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶವಿದೆ. ನೀವೂ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ iPhone SE 2 ಅನ್ನು  ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಬಹುದು.  ಈ ದೊಡ್ಡ ರಿಯಾಯಿತಿಯ ಹೊರತಾಗಿ, ಇಕಾಮರ್ಸ್ ವೆಬ್‌ಸೈಟ್ ಸ್ಮಾರ್ಟ್‌ಫೋನ್‌ನಲ್ಲಿ ವಿನಿಮಯ ಮತ್ತು ಬ್ಯಾಂಕ್ ಕೊಡುಗೆಗಳನ್ನು ಸಹ ನೀಡುತ್ತಿದೆ. ಅದರ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ iPhone SE 2 ಮೇಲೆ ಲಭ್ಯವಿರುವ ಡಿಸ್ಕೌಂಟ್ ಮತ್ತು ಕೊಡುಗೆಗಳು:
ಫ್ಲಿಪ್‌ಕಾರ್ಟ್‌ನಲ್ಲಿ iPhone SE 2 ನ 64GB ರೂಪಾಂತರದ ಮೂಲ ಬೆಲೆ 39,900 ರೂ. ಆಗಿದೆ. ಆದಾಗ್ಯೂ, ಬಿಗ್ ಬಿಲಿಯನ್ ಡೇಸ್ ಮಾರಾಟದ ಭಾಗವಾಗಿ ಫ್ಲಿಪ್‌ಕಾರ್ಟ್  ಈ ಐಫೋನ್ ಅನ್ನು 9,910 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ ಈ ಐಫೋನ್ 29,990 ರೂ.ಗೆ ಲಭ್ಯಾವಾಗಲಿದೆ. ಫ್ಲಿಪ್‌ಕಾರ್ಟ್ ಒದಗಿಸುತ್ತಿರುವ ಹಲವಾರು ಇತರ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ನೀವು iPhone SE 2 ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. 

ಇದನ್ನೂ ಓದಿ- ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್: ಅರ್ಧದಷ್ಟು ಬೆಲೆಗೆ ಐಫೋನ್ 12 ಖರೀದಿಸುವ ಸುವರ್ಣಾವಕಾಶ

iPhone SE 2: ಫ್ಲಿಪ್‌ಕಾರ್ಟ್‌ನಲ್ಲಿ ವಿನಿಮಯ ಕೊಡುಗೆ:
ಐಫೋನ್ SE 2 ಸಹ ಫ್ಲಿಪ್‌ಕಾರ್ಟ್‌ನಲ್ಲಿ ವಿನಿಮಯ ಕೊಡುಗೆಯ ಮೂಲಕ ತುಂಬಾ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.  ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು 16900 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಆದಾಗ್ಯೂ, ನೀವು ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಬೇಕು ಮತ್ತು ನಿಮ್ಮ ಸ್ಥಳದಲ್ಲಿ ವಿನಿಮಯ ಕೊಡುಗೆ ಲಭ್ಯವಿದೆಯೇ ಎಂದು ಪರಿಶೀಲಿಸಬೇಕು. ಅಲ್ಲದೆ, ವಿನಿಮಯ ರಿಯಾಯಿತಿಯು ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ನ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ  ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ  iPhone SE 2 ಬೆಲೆ ಕೇವಲ 13,090 ರೂ.ಗೆ ಲಭ್ಯವಾಗಲಿದೆ.

ಇದನ್ನೂ ಓದಿ- 15,000 ರೂ.ಗಿಂತ ಕಡಿಮೆ ಬೆಲೆಗೆ iPhone 14 ಖರೀದಿಸಿ! ಆಫರ್‌ನ ಮಾಹಿತಿ ಇಲ್ಲಿದೆ ನೋಡಿ

iPhone SE 2: ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಕೊಡುಗೆಗಳು:
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್ ಖರೀದಿಗಾಗಿ ಹಲವು ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇಎಂಐ ಮತ್ತು ಇಎಂಐ ಅಲ್ಲದ ವಹಿವಾಟುಗಳ ಮೇಲೆ ರೂ.1250 ರಿಯಾಯಿತಿಯನ್ನು ಪಡೆಯಬಹುದು. ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಹೊಂದಿರುವವರು 1000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News