Koo- ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು Koo ಚಿಂತನೆ

Koo Latest News: ಮುಂದಿನ ಕೆಲವು ವರ್ಷಗಳಲ್ಲಿ, ನಾವು ಸುಮಾರು 10 ಮಿಲಿಯನ್ ಡೌನ್‌ಲೋಡ್ ಮಾಡಲು ಬಯಸುತ್ತೇವೆ ಎಂದು ಕಂಪನಿ ಹೇಳಿದೆ. ಸುಮಾರು  20 ಪಟ್ಟು ಬಳಕೆದಾರರ ಹೆಚ್ಚಳ ಸಾಧ್ಯ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

Written by - Yashaswini V | Last Updated : May 10, 2021, 08:05 AM IST
  • ಒಂದು ವರ್ಷದಲ್ಲಿ 6 ಮಿಲಿಯನ್ ಬಳಕೆದಾರರನ್ನು ಪಡೆದ ಕೂ
  • ಟ್ವಿಟರ್‌ನ ಪ್ಲಾಟ್‌ಫಾರ್ಮ್ 1.75 ಕೋಟಿ ಬಳಕೆದಾರರನ್ನು ಹೊಂದಿದೆ
  • ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್ನಂತಹ ಇಂಟರ್ನೆಟ್ ಕಂಪನಿಗಳಿಗೆ ಭಾರತ ಬಹಳ ಮುಖ್ಯ ಮಾರುಕಟ್ಟೆಯಾಗಿ ಉಳಿದಿದೆ
Koo- ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು Koo ಚಿಂತನೆ title=
Domestic microblogging platform Koo

ನವದೆಹಲಿ:  ಮುಂದಿನ ಒಂದು ವರ್ಷದಲ್ಲಿ ತನ್ನ ಉದ್ಯೋಗಿಗಳನ್ನು ದ್ವಿಗುಣಗೊಳಿಸಲು ದೇಶೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ (Koo) ಚಿಂತನೆ ನಡೆಸಿದೆ.  ಕಂಪನಿಯು ತನ್ನ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಾದೇಶಿಕ ಭಾಷೆಗಳನ್ನು ಪ್ರತ್ಯೇಕವಾಗಿ ಸೇರಿಸುವ ಮೂಲಕ ಬಳಕೆದಾರರ ಸಂಖ್ಯೆಯನ್ನು ಬಲವಾಗಿ ಹೆಚ್ಚಿಸುತ್ತಿದೆ.

ಪಿಟಿಐ ಸುದ್ದಿಯ ಪ್ರಕಾರ 'ಕೂ' (Koo) ಕಂಪನಿಯ ಸಹ ಸಂಸ್ಥಾಪಕ ಈ ವಿಷಯ ತಿಳಿಸಿದ್ದಾರೆ. ಕೂ (Koo) ಸಹ-ಸಂಸ್ಥಾಪಕ ಅಜೇಯ ರಾಘಕೃಷ್ಣ ಮಾತನಾಡಿ, ವೇದಿಕೆಯು ತನ್ನ ಅಸ್ತಿತ್ವದಲ್ಲಿರುವ 60 ಮಿಲಿಯನ್ ಬಳಕೆದಾರರ ಮೂಲದೊಂದಿಗೆ (ಕೂ ಯೂಸರ್ ಬೇಸ್) ಬೆಳವಣಿಗೆಗೆ ಸಾಕಷ್ಟು ಅವಕಾಶಗಳನ್ನು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಭಾಷೆಗಳಿಗೆ ಆದ್ಯತೆ:
ಸುದ್ದಿಯ ಪ್ರಕಾರ, ಕೂ (Koo)ನಲ್ಲಿ ವಿಭಿನ್ನ ಗುಂಪುಗಳು ಬಂದಾಗ, ಅವರು ಅವರೊಂದಿಗೆ ಸಂಬಂಧ ಹೊಂದಿರುವ ಜನರನ್ನು ಸಹ ಕರೆತರುತ್ತಾರೆ. ಆದರೆ, ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಬಾಲಿವುಡ್ ಜನರಿಲ್ಲ, ಕ್ರಿಕೆಟಿಗರು ಸಹ ಇದರಲ್ಲಿ ಹೆಚ್ಚು ತೊಡಗಿಸಿಕೊಂಡಿಲ್ಲ. ಕೂ (Koo)ಗೆ ಭೇಟಿ ನೀಡಲು ಬಯಸುವ ಅನೇಕ ರಾಜಕಾರಣಿಗಳು, ಬರಹಗಾರರು ಇದ್ದಾರೆ. ಏಕೆಂದರೆ ಇದರಲ್ಲಿ ನಾವು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುತ್ತಿದ್ದೇವೆ ಎಂದವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ - Made in India App: ವಾಟ್ಸಾಪ್, ಟ್ವಿಟರ್‌ಗೆ ಟಕ್ಕರ್ ನೀಡುತ್ತಿರುವ ಟಾಪ್ 5 ಮೇಡ್ ಇನ್ ಇಂಡಿಯಾ ಆ್ಯಪ್‌ಗಳಿವು

ಸುಮಾರು 10 ಮಿಲಿಯನ್ ಡೌನ್‌ಲೋಡ್ ಗುರಿ  (Download target around 10 million): 
ಜನರು ತಮ್ಮ ಸ್ಥಳೀಯ ಭಾಷೆಯಲ್ಲಿ (Local Language) ತಮ್ಮ ಮಾತುಗಳನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಡುವ ಕಾರಣ ಕೂ (Koo) ಬಹಳ ವೇಗವಾಗಿ ಬಳಕೆದಾರರನ್ನು ಆಕರ್ಷಿಸುತ್ತಿದೆ ಎಂದು ರಾಧಾಕೃಷ್ಣ ಹೇಳಿದರು. ಬಳಕೆದಾರರು ತಮ್ಮ ಸಮುದಾಯದ ಜನರೊಂದಿಗೆ ತಮ್ಮದೇ ಭಾಷೆಯಲ್ಲಿ ಮಾತನಾಡಲು ಬಯಸುತ್ತಾರೆ. ಕೂ ವೇದಿಕೆಯು ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ನಾವು ಸುಮಾರು 10 ಕೋಟಿ ಡೌನ್‌ಲೋಡ್ ಗುರಿಯನ್ನು ಹೊಂದಿದ್ದೇವೆ.  ಕೂಗೆ ಬರಲು ಬಯಸುವ ಅನೇಕ ಜನರಿದ್ದಾರೆ. ಹಾಗಾಗಿ 20 ಪಟ್ಟು ಹೆಚ್ಚಳ ಸಾಧ್ಯವಿದೆ. ಈ ಸಮಯದಲ್ಲಿ ಯಾವ ಘಟನೆಗಳು ಸಂಭವಿಸುತ್ತವೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ ಎಂದು ರಾಧಾಕೃಷ್ಣ ಮಾಹಿತಿ ನೀಡಿದ್ದಾರೆ.

ಸುಮಾರು ಒಂದು ವರ್ಷದಲ್ಲಿ  6 ಮಿಲಿಯನ್ ಬಳಕೆದಾರರನ್ನು ಪಡೆದ ಕೂ (Koo):
ಕೂ ಅನ್ನು ಕಳೆದ ವರ್ಷವಷ್ಟೇ ಪ್ರಾರಂಭಿಸಲಾಯಿತು. ಕಳೆದ ಕೆಲವು ತಿಂಗಳುಗಳಿಂದ ಕೇಂದ್ರ ಸಚಿವರು ಮತ್ತು ಸರ್ಕಾರಿ ಇಲಾಖೆಗಳು ಸ್ವದೇಶಿ ಮೈಕ್ರೊಬ್ಲಾಗ್ ಪ್ಲಾಟ್‌ಫಾರ್ಮ್ ಕೂಗೆ ಒಲವು ತೋರಲು ಪ್ರಾರಂಭಿಸಿದ್ದರಿಂದ ಅದರ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ - ಏನಿದು Koo..? ಕೇಂದ್ರ ಸಚಿವರೇಕೆ Twitter ತೊರೆಯುತ್ತಿದ್ದಾರೆ?

ಕೂ (Koo) ಪ್ಲಾಟ್‌ಫಾರ್ಮ್ ಪ್ರಸ್ತುತ 6 ಮಿಲಿಯನ್ ಬಳಕೆದಾರರನ್ನು ಹೊಂದಿದ್ದರೆ, ಟ್ವಿಟರ್‌ನ ಪ್ಲಾಟ್‌ಫಾರ್ಮ್ 1.75 ಕೋಟಿ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್ (Facebook, Whatsapp, Twitter)ನಂತಹ ಇಂಟರ್ನೆಟ್ ಕಂಪನಿಗಳಿಗೆ ಭಾರತ ಬಹಳ ಮುಖ್ಯ ಮಾರುಕಟ್ಟೆಯಾಗಿ ಉಳಿದಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆಯಾಗಿದೆ ಮತ್ತು ದತ್ತಾಂಶವನ್ನು ಹೆಚ್ಚು ಬಳಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News