WhatsAppನಲ್ಲಿ ಬರುವ ಈ ಲಿಂಕ್ ಅನ್ನು ಅಪ್ಪಿತಪ್ಪಿಯೂ ತೆರೆಯದಿರಿ, ಖಾಲಿಯಾಗುತ್ತೆ ಅಕೌಂಟ್

ಈ ಸಂದೇಶ ಅಮೆಜಾನ್ 30ನೇ ಆಚರಣೆಯಿಂದ (Amazon 30th Celebration) ಎಂಬ ಶೀರ್ಷಿಕೆಯೊಂದಿಗೆ ಬಂದಿದೆ. ಈ ಸಂದೇಶದಲ್ಲಿಅಭಿನಂದನೆಗಳು ಎಂದು ಬರೆಯಲಾಗಿದೆ. ಅಮೆಜಾನ್‌ನ ಹೆಸರಿನಲ್ಲಿ  ಕಳುಹಿಸಲಾದ ಈ ಸಂದೇಶದಲ್ಲಿ, ಕೆಲವೇ ನಿಮಿಷಗಳ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ನೀವು ಹುವಾವೇ ಮೇಟ್ 40 ಪ್ರೊ 5 ಜಿ ಸ್ಮಾರ್ಟ್‌ಫೋನ್ ಪಡೆಯಬಹುದು ಎಂದು ಹೇಳಲಾಗಿದೆ.

Written by - Yashaswini V | Last Updated : Mar 25, 2021, 11:55 AM IST
  • ವಾಟ್ಸಾಪ್‌ನಲ್ಲಿ ಮತ್ತೆ ನಕಲಿ ಲಿಂಕ್ ಹಾವಳಿ
  • ಅಮೆಜಾನ್ ಉಡುಗೊರೆ ಹೆಸರಿನಲ್ಲಿ ಗ್ರಾಹಕರಿಂದ ಮಾಹಿತಿ ಸಂಗ್ರಹ
  • ಅಪ್ಪಿತಪ್ಪಿ ಇಂತಹ ಲಿಂಕ್ ಕ್ಲಿಕ್ ಮಾಡಿದರೂ ಖಾಲಿಯಾಗುತ್ತೆ ಖಾತೆ
WhatsAppನಲ್ಲಿ ಬರುವ ಈ ಲಿಂಕ್ ಅನ್ನು ಅಪ್ಪಿತಪ್ಪಿಯೂ ತೆರೆಯದಿರಿ, ಖಾಲಿಯಾಗುತ್ತೆ ಅಕೌಂಟ್ title=
WhatsApp fake message

ನವದೆಹಲಿ: ಪ್ರಸಿದ್ದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಈ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ವೈಯಕ್ತಿಕ ಕೆಲಸಗಳಿಂದ ಹಿಡಿದು ಕಚೇರಿ ಕೆಲಸಗಳವರೆಗೆ ಹಲವು ಕೆಲಸಗಳಿಗೆ ಎಲ್ಲರೂ ವಾಟ್ಸಾಪ್‌ನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಈ ಮಧ್ಯೆ ನಿಮಗೆ ಒಂದು ಎಚ್ಚರಿಕೆಯ ಸಂದೇಶವೊಂದು ಬಂದಿದೆ. ಆದರಲ್ಲಿ ವಾಟ್ಸಾಪ್‌ನಲ್ಲಿ ಇತ್ತೀಚಿಗೆ ಅಮೆಜಾನ್ ಹೆಸರಿನಲ್ಲಿ ಲಿಂಕ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನೋಡಲು ಬಹಳ ಆಕರ್ಷಕವಾಗಿದೆ. ಆದರೆ ಅದರ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಂಬ ಆತಂಕಕಾರಿ ಮಾಹಿತಿ ಬಹಿರಂಗಗೊಳಿಸಲಾಗಿದೆ.

ಅಮೆಜಾನ್ ಸಮೀಕ್ಷೆಯ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ:
ಗ್ಯಾಜೆಟ್ಸ್ನೋ (gadgetsnow) ಪ್ರಕಾರ ಈ ದಿನಗಳಲ್ಲಿ ಭಾರತದಲ್ಲಿನ ವಾಟ್ಸಾಪ್ ಬಳಕೆದಾರರಿಗೆ ವಿಶೇಷ ಸಂದೇಶವನ್ನು ಕಳುಹಿಸಲಾಗುತ್ತಿದೆ. ಈ ಸಂದೇಶ ಅಮೆಜಾನ್ 30 ನೇ ಆಚರಣೆಯಿಂದ (Amazon 30th Celebration) ಎಂಬ ಶೀರ್ಷಿಕೆಯೊಂದಿಗೆ ಬಂದಿದೆ. ಈ ಸಂದೇಶದಲ್ಲಿ ಅಭಿನಂದನೆಗಳು ಎಂದು ಬರೆಯಲಾಗಿದೆ. ಅಮೆಜಾನ್‌ನ ಹೆಸರಿನಲ್ಲಿ ಕಳುಹಿಸಲಾದ ಈ ಸಂದೇಶದಲ್ಲಿ, ಕೆಲವೇ ನಿಮಿಷಗಳ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ನೀವು ಹುವಾವೇ ಮೇಟ್ 40 ಪ್ರೊ 5 ಜಿ (Huawei Mate 40 Pro 5G) ಸ್ಮಾರ್ಟ್‌ಫೋನ್ ಪಡೆಯಬಹುದು ಎಂದು ಹೇಳಲಾಗಿದೆ.
 
ಏನು ಅಪಾಯ ?

ಅಮೆಜಾನ್ ಹೆಸರಿನಲ್ಲಿ ವಾಟ್ಸಾಪ್ (WhatsApp) ಸಂದೇಶವನ್ನು ಕಳುಹಿಸುವುದರೊಂದಿಗೆ ಯುಆರ್ಎಲ್ ಲಿಂಕ್ ಸಹ ಇದೆ. ನಿಮ್ಮ ಮೊಬೈಲ್ ನಲ್ಲಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಸಮೀಕ್ಷೆ ಪುಟ ತೆರೆಯುತ್ತದೆ. ಸಮೀಕ್ಷೆಯಲ್ಲಿ ಕೆಲವು ಮಾಹಿತಿಯನ್ನು ಹುಡುಕಲಾಗುತ್ತಿದೆ. ಅದಕ್ಕಾಗಿ ಈ ಸಮೀಕ್ಷೆಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಉಡುಗೊರೆ ಪಡೆಯಿರಿ ಎಂದು ಕೇಳಲಾಗುತ್ತಿದೆ.

ಇದನ್ನೂ ಓದಿ - ನಿಮಗೆ ಗೊತ್ತಿಲ್ಲದಂತೆ ಯಾರಾದರು ನಿಮ್ಮ whatsapp DP ನೋಡುತ್ತಿದ್ದಾರಾ ಹೀಗೆ ತಿಳಿಯಿರಿ

ಅಪ್ಪಿತಪ್ಪಿಯೂ ಈ ಲಿಂಕ್‌ಗಳನ್ನು ತೆರೆಯಬೇಡಿ:
ಮಾಹಿತಿ ಭರ್ತಿ ಮಾಡಿದ ಬಳಿಕ ಲಿಂಕ್ ಒಂದನ್ನು ತೆರೆಯುವಂತೆ ಕೇಳಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಏಕೆಂದರೆ ಈ ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿವೆ. ಈ ಮಾಹಿತಿ ಒದಗಿಸುವುದರಿಂದ ನಿಮ್ಮ ಪ್ರಮುಖ ಡೇಟಾ ಅದರಿಂದ ಸೋರಿಕೆಯಾಗುವ ಅಪಾಯವಿದೆ ಎನ್ನಲಾಗಿದೆ.

ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಿರಬಹುದು:
ಈ ಸಮೀಕ್ಷೆಯಿಂದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಆನ್‌ಲೈನ್ ಹ್ಯಾಕರ್‌ಗಳು ನಿಮ್ಮ ಬ್ಯಾಂಕ್ (Bank) ಖಾತೆಗೆ ಪ್ರವೇಶಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಸಮೀಕ್ಷೆಯ ಮಾಹಿತಿಯ ಆಧಾರದ ಮೇಲೆ, ನಿಮ್ಮ ಬ್ಯಾಂಕ್ ಖಾತೆ ಹಣವನ್ನು ಹಿಂಪಡೆಯಬಹುದು ಎಂದು ಎಚ್ಚರಿಸಲಾಗಿದೆ.

ಇದನ್ನೂ ಓದಿ - WhatsApp ಮೇಲೆ Spam ಹಾಗೂ Fake ಸಂದೇಶ ತಡೆಗಟ್ಟಲು ಕೇಂದ್ರ ಸರ್ಕಾರದ ಹೊಸ ಯೋಜನೆ

ವರದಿಯ ಪ್ರಕಾರ, ಯಾವುದೇ ದೊಡ್ಡ ಕಂಪನಿಯು ಕೇವಲ ಒಂದು ಸಮೀಕ್ಷೆಗೆ ದುಬಾರಿ ಮೊಬೈಲ್‌ಗಳನ್ನು ನೀಡುವುದಿಲ್ಲ. ಇಂತಹ ಸಂದೇಶಗಳಿಂದ ಗ್ರಾಹಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News