ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಬಳಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ

Mobile Banking: ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರ ಬಹುತೇಕ ಕೆಲಸಗಳನ್ನು ಸರಾಗಗೊಳಿಸಿದೆ. ಇದೇ ವೇಳೆ, ಆನ್ಲೈನ್ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಸಹ ವಂಚನೆಗೆ ಬಲಿಯಾಗುವ ಸಾಧ್ಯತೆಯೂ ಇದೆ. ಇದನ್ನು ತಪ್ಪಿಸಲು ಎಚ್‌ಡಿ‌ಎಫ್‌ಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದೆ. 

Written by - Yashaswini V | Last Updated : Apr 8, 2024, 03:26 PM IST
  • ಪ್ರತಿ ವಿಷಯದಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದ್ದೇ ಇರುತ್ತದೆ.
  • ಮೊಬೈಲ್ ಬ್ಯಾಂಕಿಂಗ್ ಇದಕ್ಕೆ ಹೊರತಾಗಿಲ್ಲ.
  • ಮೊಬೈಲ್ ಬ್ಯಾಂಕಿಂಗ್‌ನ ಪ್ರಯೋಜನಗಳ ಹೊರತಾಗಿಯೂ, ಇದರಲ್ಲಿ ಕೆಲವು ಅಪಾಯವೂ ಇದೆ.
ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಬಳಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ  title=

Mobile Banking: ಈ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬ್ಯಾಂಕಿಂಗ್ ಗ್ರಾಹಕರ ಬಹುತೇಕ ಬ್ಯಾಂಕಿಂಗ್ ಕೆಲಸಗಳನ್ನು ತಾವು ಇರುವಲ್ಲಿಯೇ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮೊಬೈಲ್ ಬ್ಯಾಂಕಿಂಗ್ (Mobile Banking) ಬಹಳ ಜನಪ್ರಿಯವಾಗಿದೆ. 

ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ನಿಂದ (Smartphone) ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಸುಲಭವಾಗಿ, ವೇಗವಾಗಿ ಪೂರ್ಣಗೊಳಿಸಬಹುದು. ಅರ್ಥಾತ್, ಈಗ ಗ್ರಾಹಕರು ಬ್ಯಾಲೆನ್ಸ್ ಪರಿಶೀಲನೆ (Balance Check), ಹಣ ವರ್ಗಾವಣೆ (Money Transfer), ಬ್ಯಾಂಕ್ ಸ್ಟೇಟ್ಮೆಂಟ್ (Bank Statement), ಬಿಲ್‌ಗಳನ್ನು ಪಾವತಿಗಳಂತಹ ಕೆಲಸಗಳಿಗಾಗಿ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ. ಫೋನ್‌ನಿಂದಲೇ ಕ್ಷಣಾರ್ಧದಲ್ಲಿ ಈ ಎಲ್ಲಾ ಕೆಲಸಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಬಹುದು. 

ಇದನ್ನೂ ಓದಿ- ನೈಟ್ ಲ್ಯಾಂಪ್‌ನಂತೆ ಕಾರ್ಯನಿರ್ವಹಿಸುತ್ತದೆ ಈ ಯುಎಸ್‌ಬಿ ಲೈಟ್..! ಬೆಲೆ ಕೇಳಿದ್ರೆ ಯಾರೂ ಬೇಕಾದರೂ ಖರೀದಿಸಬಹುದು..!

ಆದಾಗ್ಯೂ, ಪ್ರತಿ ವಿಷಯದಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದ್ದೇ ಇರುತ್ತದೆ. ಮೊಬೈಲ್ ಬ್ಯಾಂಕಿಂಗ್ ಇದಕ್ಕೆ ಹೊರತಾಗಿಲ್ಲ. ಮೊಬೈಲ್ ಬ್ಯಾಂಕಿಂಗ್‌ನ ಪ್ರಯೋಜನಗಳ (Mobile Banking Benefits) ಹೊರತಾಗಿಯೂ, ಇದರಲ್ಲಿ ಕೆಲವು ಅಪಾಯವೂ ಇದೆ. ವಿಶೇಷವಾಗಿ ಮೊಬೈಲ್ ಬ್ಯಾಂಕಿಂಗ್ ಆನ್ಲೈನ್ ವಂಚನೆಯ (Online Fraud) ಅಪಾಯವನ್ನು ಹೊಂದಿದೆ. ಗ್ರಾಹಕರು, ಮೊಬೈಲ್ ಬ್ಯಾಂಕಿಂಗ್ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ  ವಂಚನೆಗೆ ಬಲಿಯಾಗಬಹುದು. ಈ ಕುರಿತಂತೆ ಎಚ್ಚರಿಸಿರುವ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್‌ಗಾಗಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದು, ಈ ಸಲಹೆಗಳನ್ನು ಅನುಸರಿಸುವ ಮೂಲಕ ಗ್ರಾಹಕರು ವಂಚನೆಯನ್ನು ತಪ್ಪಿಸಬಹುದು ಎಂದು ಹೇಳಿದೆ. 

ಇದನ್ನೂ ಓದಿ- ಶೀಘ್ರದಲ್ಲೇ WhatsApp ನಿಂದ ಜಬರ್ದಸ್ತ ವೈಶಿಷ್ಟ್ಯ ಬಿಡುಗಡೆ! ವಿಡಿಯೋ ನೋಡುತ್ತಾ ಕೂಡ ಈ ಕೆಲಸ ಮಾಡಬಹುದು

ಮೊಬೈಲ್ ಬ್ಯಾಂಕಿಂಗ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಯಾವ ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು:-
>> ನಿಮ್ಮ ಪಿನ್ ಅಥವಾ ಯಾವುದೇ ಗೌಪ್ಯ ಮಾಹಿತಿಯನ್ನು ಫೋನ್ ಅಥವಾ ಇಂಟರ್ನೆಟ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ.  
>> ಬ್ಯಾಂಕ್‌ಗಳು ಎಂದು ಹೇಳಿಕೊಳ್ಳುವ ಮೂಲಕ ನಿಮ್ಮನ್ನು ಸಂಪರ್ಕಿಸುವ ಇಮೇಲ್‌ಗಳು ಅಥವಾ ಸಾಮಾಜಿಕ ಮಾಧ್ಯಮ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
>> ನೀವು ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣವನ್ನು ವರ್ಗಾಯಿಸುತ್ತಿದ್ದರೆ, ಅದನ್ನು ಸರಿಯಾದ ವ್ಯಕ್ತಿಗೆ ಕಳುಹಿಸುತ್ತಿರುವಿರಾ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಿ. ಇಲ್ಲದಿದ್ದರೆ, ಆ ಹಣವನ್ನು ಮರಳಿ ಪಡೆಯಲು ತೊಂದರೆ ಎದುರಿಸಬೇಕಾಗಬಹುದು. 
>> ನಿಮ್ಮ ಫೋನ್‌ನಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ, ಮೊಬೈಲ್ ಬ್ಯಾಂಕಿಂಗ್ ಪಾಸ್‌ವರ್ಡ್ ಮತ್ತು ಬಳಕೆದಾರ ಐಡಿಯಂತಹ ಯಾವುದೇ ಪ್ರಮುಖ ಮಾಹಿತಿಗಳನ್ನು ಸೇವ್ ಮಾಡಬೇಡಿ. 
>> ಒಂದೊಮ್ಮೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದರೆ ಮೊದಲು ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ ಕೆವೈಸಿ ಪೂರ್ಣಗೊಳಿಸಿ, ಇದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯಣ್ಣು ಬದಲಾಯಿಸಿ. 
> ನಿಮ್ಮ ಪಿನ್ ಅನ್ನು ಯಾರಿಗೂ ಹೇಳಬೇಡಿ ಅಥವಾ ಅದನ್ನು ಬರೆದಿಟ್ಟುಕೊಳ್ಳಬೇಡಿ. ಬ್ಯಾಂಕ್‌ನಿಂದ ಪಡೆದ ಪಿನ್ ಅಥವಾ ಪಾಸ್‌ವರ್ಡ್‌ಗೆ ಸಂಬಂಧಿಸಿದ ಇಮೇಲ್‌ಗಳು ಅಥವಾ ದಾಖಲೆಗಳನ್ನು ಸಂರಕ್ಷಿಸಬೇಡಿ.
>> ಅಪರಿಚಿತ ಸಂಖ್ಯೆಗಳಿಂದ ಬರುವ ರಿಂಗ್‌ಟೋನ್‌ಗಳು ಅಥವಾ ಇಮೇಲ್ ಲಗತ್ತುಗಳ ಬಗ್ಗೆ ಜಾಗರೂಕರಾಗಿರಿ. 
>> ಸಾರ್ವಜನಿಕ ಸ್ಥಳಗಳಲ್ಲಿ ಬ್ಲೂಟೂತ್ ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ, ಯಾರಾದರೂ ನಿಮ್ಮ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು. 
>> ಸುರಕ್ಷಿತವಲ್ಲದ ವೆಬ್‌ಸೈಟ್‌ಗಳಿಂದ ಏನನ್ನೂ ಡೌನ್‌ಲೋಡ್ ಮಾಡಬೇಡಿ.
>> ಗೌಪ್ಯ ಮಾಹಿತಿಯನ್ನು ಎಸ್ಎಂಎಸ್, ವಾಟ್ಸಾಪ್ ಅಥವಾ ಇನ್ನಾವುದೇ ರೀತಿಯಲ್ಲಿ ಯಾರೊಂದಿಗೂ ಹಂಚಿಕೊಳ್ಳಬೇಡಿ.
>> ಬ್ಯಾಂಕಿಂಗ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಡಿ ಅಥವಾ ಸಾರ್ವಜನಿಕ ಅಥವಾ ಅಸುರಕ್ಷಿತ ವೈ-ಫೈ ಬಳಸಿ ವಹಿವಾಟು ನಡೆಸುವ ತಪ್ಪನ್ನು ಎಂದಿಗೂ ಮಾಡಬೇಡಿ. 
>> ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಬಳಸುವಾಗ, ಅಪ್ಲಿಕೇಶನ್ ಅನ್ನು ಬಲವಂತವಾಗಿ ಮುಚ್ಚಬೇಡಿ, ಬದಲಿಗೆ ಲಾಗ್ಔಟ್ ಮಾಡಿ ಮತ್ತು ನಂತರವಷ್ಟೇ ಅಪ್ಲಿಕೇಶನ್ ಅನ್ನು ಮುಚ್ಚುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News