ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವು

Jio Affordable Recharge Plan: ನೀವು ಜಿಯೋ ಗ್ರಾಹಕರಾಗಿದ್ದು ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರು ಮೂರು ಅಗ್ಗದ ರಿಚಾರ್ಜ್ ಯೋಜನೆಗಳ ಬಗೆಗಿನ ಮಾಹಿತಿ. 

Written by - Yashaswini V | Last Updated : Sep 20, 2024, 08:22 AM IST
  • ರಿಲಯನ್ಸ್ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್
  • ಅಗ್ಗದ ಮೂರು ರಿಚಾರ್ಜ್ ಪ್ಲಾನ್ ಪರಿಚಯಿಸಿರುವ ಜಿಯೋ
  • 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಆ ಯೋಜನೆಗಳ ಬಗ್ಗೆ ಇಲ್ಲಿದೆ ವಿವರ
ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವು  title=

Jio Cheapest Recharge Plan: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಜುಲೈ ತಿಂಗಳಿನಲ್ಲಿ ತನ್ನ ರಿಚಾರ್ಜ್ ಮೌಲ್ಯಗಳನ್ನು ಹೆಚ್ಚಿಸಿದ ಬಳಿಕ ಇದೀಗ ಗ್ರಾಹಕರ ಹಿತದೃಷ್ಟಿಯಿಂದ ಹಲವು ಅಗ್ಗದ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 

200 ರೂ.ಗಿಂತಲೂ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ಸ್ (Recharge plans below Rs.200): 
ಜಿಯೋ ಗ್ರಾಹಕರಿಗಾಗಿ ಬಜೆಟ್ ಸ್ನೇಹಿ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿರುವ ಜಿಯೋ 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಮೂರು ಪ್ರಿಪೇಯ್ಡ್ ಪ್ಲಾನ್ಸ್ ನೀಡುತ್ತಿದೆ. 

ಇದನ್ನೂ ಓದಿ- ಈ ಐಫೋನ್‌ಗಳಲ್ಲಿ iOS 18 ಅಪ್‌ಡೇಟ್ ಲಭ್ಯ: ಇಲ್ಲಿದೆ ಡೌನ್‌ಲೋಡ್ ಮಾಡುವ ಸುಲಭ ವಿಧಾನ

122 ರೂ. ರೀಚಾರ್ಜ್ ಯೋಜನೆ (Rs.122 Recharge plan) : 
ರಿಲಯನ್ಸ್ ಜಿಯೋದಲ್ಲಿ ಅಗ್ಗದ ರೀಚಾರ್ಜ್ ಯೋಜನೆ ಬೆಲೆ 122 ರೂ. ಆಗಿದೆ. 28 ದಿನಗಳವರೆಗೆ ಮಾನ್ಯತೆಯೊಂದಿಗೆ ಬರುವ ಈ ರಿಚಾರ್ಜ್ ಯೋಜನೆಯಲ್ಲಿ ದಿನಕ್ಕೆ 1ಜಿಬಿ, ಎಂದರೆ ಒಟ್ಟು 28 ಜಿಬಿ ಡೇಟಾ ಲಭ್ಯವಾಗಲಿದೆ. ಇದು ಕೇವಲ ಡೇಟಾ ಯೋಜನೆಯಾಗಿದ್ದು ಹೆಚ್ಚು ಇಂಟರ್ನೆಟ್ ಬಳಸುವ ಬಳಕೆದಾರರಿಗೆ ಈ ಪ್ರಿಪೇಯ್ಡ್ ಯೋಜನೆ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. 

186 ರೂ. ರೀಚಾರ್ಜ್ ಯೋಜನೆ (Rs. 186 Recharge Plan): 
ರಿಲಯನ್ಸ್ ಜಿಯೋದ ಮತ್ತೊಂದು ಅಗ್ಗದ ಪ್ರಿಪೇಯ್ಡ್ ಯೋಜನೆ ಎಂದರೆ 186 ರೂ. ಪ್ಲಾನ್. ಇದೂ ಕೂಡ 28 ದಿನಗಳ ಮಾನ್ಯತೆಯೊಂದಿಗೆ ಲಭ್ಯವಾಗಲಿದ್ದು, ಇದರಲ್ಲಿ ಗ್ರಾಹಕರು ಅನಿಯಮಿತ ಕರೆ, ತಿಂಗಳಿಗೆ 28 ಜಿಬಿ ಡೇಟಾ ಪ್ರಯೋಜನ ಲಭ್ಯವಿದೆ.  

ಇದನ್ನೂ ಓದಿ- ಫೋನ್ ಚಾರ್ಜ್ ಮಾಡುವಾಗ ಮರೆತೂ ಸಹ ಈ ತಪ್ಪುಗಳನ್ನು ಮಾಡ್ಬೇಡಿ, ಬ್ಯಾಟರಿ ಅಷ್ಟೇ ಅಲ್ಲ, ಜೀವಕ್ಕೂ ಅಪಾಯ
 
189 ರೂ.ರೀಚಾರ್ಜ್ ಯೋಜನೆ (Rs.189 Recharge Plan): 

ಇದೂ ಸಹ ಜಿಯೋದ ತಿಂಗಳ ಯೋಜನೆಯಾಗಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ, 2ಜಿಬಿ ಡೇಟಾ, 300 ಉಚಿತ ಎಸ್ಎಂಎಸ್ ಜೊತೆಗೆ ಜಿಯೋ ಅಪ್ಲಿಕೇಶನ್ ಚಂದಾದಾರಿಗೆಗಳೂ ಕೂಡ ಲಭ್ಯವಿದೆ. 

ಗಮನಾರ್ಹವಾಗಿ, 186 ರೂ.  ರೀಚಾರ್ಜ್ ಪ್ಲಾನ್ ಜಿಯೋ ಫೋನ್ ಬಳಕೆದಾರರಿಗಷ್ಟೇ ಲಭ್ಯವಿದ್ದು, 189 ರೂ.ರೀಚಾರ್ಜ್ ಪ್ಲಾನ್ ಜಿಯೋ ಸಿಮ್ ಬಳಸುವ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಕೂಡ ಲಭ್ಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News