Addiction: ಪುರುಷರಿಗಿಂತ ವಿವಾಹಿತ ಮಹಿಳೆಯರೇ ಈ ಕೆಲಸದಲ್ಲಿ ಮುಂದಂತೆ...!

Why Married Person Use Dating App: ವಿವಾಹಿತರಲ್ಲಿ ಡೇಟಿಂಗ್ ಆಪ್ ಗೀಳು ವ್ಯಾಪಕವಾಗಿ ಬೆಳೆಯುತ್ತಲಿದೆ. ಅಧ್ಯಯನವೊಂದು ಈ ಕುರಿತಾದ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ.  

Written by - Nitin Tabib | Last Updated : Oct 8, 2022, 02:26 PM IST
  • ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಗ್ಲೀಡೆನ್ ಭಾರತದ ಮಹಾನಗರಗಳಲ್ಲಿ
  • ಜನರು ತಮ್ಮ ಬಾಳಸಂಗಾತಿಗೆ ದಾಂಪತ್ಯ ದ್ರೋಹ ಎಸಗುವ ಕಾರಣಗಳನ್ನು ಕಂಡುಹಿಡಿಯಲು
  • ಸಮೀಕ್ಷೆಯೊಂದನ್ನು ನಡೆಸಿದೆ. ಕಾರಣಗಳು ಇಂತಿವೆ,
Addiction: ಪುರುಷರಿಗಿಂತ ವಿವಾಹಿತ ಮಹಿಳೆಯರೇ ಈ ಕೆಲಸದಲ್ಲಿ ಮುಂದಂತೆ...! title=
Extra Marital Affairs

Extra Marital Affairs: ಯುಎಸ್ ಮತ್ತು ಯುರೋಪಿಯನ್ ದೇಶಗಳಂತೆ, ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿಯೂ ಕೂಡ ಡೇಟಿಂಗ್ ಆಪ್ ಗಳ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ ಮತ್ತು ಇದೀಗ ಭಾರತದಲ್ಲಿಯೂ ಕೂಡ ಹೆಚ್ಚಿನ ಜನಸಂಖ್ಯೆಯು ಹೊಸ ಸಂಬಂಧಗಳನ್ನು ಬೆಳೆಸಲು ಇಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಇದನ್ನು ಒಂಟಿಯಾಗಿರುವವರು ಅಥವಾ ಅವಿವಾಹಿತರು ಮಾತ್ರ ಅವುಗಳನ್ನು ಬಳಸುತ್ತಾರೆ ಎಂದು ಇದುವರೆಗೆ ಭಾವಿಸಲಾಗಿತ್ತು. ಆದರೆ, ಇತ್ತೀಚಿನ ಅಧ್ಯಯನವೊಂದು  ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ ಮತ್ತು ವಿವಾಹಿತ ಮಹಿಳೆಯರು ಮತ್ತು ಪುರುಷರಲ್ಲಿ ಈ ಅಪ್ಲಿಕೇಶನ್‌ಗಳ ಕ್ರೇಜ್ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ.

ವಿವಾಹಿತರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಏಕೆ ಬಳಸುತ್ತಾರೆ?
ತಮ್ಮ ಜೀವನ ಸಂಗಾತಿಯಿಂದ ಬೇರ್ಪಡಲು ಇಷ್ಟಪಡದ ಅನೇಕ ಜನರಿದ್ದಾರೆ, ಆದರೆ ಏನನ್ನಾದರೂ ರೋಮಾಂಚನಗೊಳಿಸುವ ಅಥವಾ ಜೀವನದಲ್ಲಿ ಹೊಸತನವನ್ನು ಕಂಡುಕೊಳ್ಳುವ ಬಯಕೆ ಅವರಲ್ಲಿ ಇರುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ಡೇಟಿಂಗ್ ಅಪ್ಲಿಕೇಶನ್ ಅವರ ಮೊದಲ ಆಯ್ಕೆಯಾಗಿದೆ, ಆದರೆ ಒಂದೊಮ್ಮೆ ಸತ್ಯ ಬಹಿರಂಗಗೊಂಡ ಬಳಿಕ ವೈವಾಹಿಕ ಜೀವನ ಮುರಿದುಬೀಳುವ ಅಪಾಯ ಹೆಚ್ಚಾಗಿರುತ್ತದೆ.

ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಗ್ಲೀಡೆನ್ ಭಾರತದ ಮಹಾನಗರಗಳಲ್ಲಿ ಜನರು ತಮ್ಮ ಬಾಳಸಂಗಾತಿಗೆ ದಾಂಪತ್ಯ ದ್ರೋಹ ಎಸಗುವ ಕಾರಣಗಳನ್ನು ಕಂಡುಹಿಡಿಯಲು ಸಮೀಕ್ಷೆಯೊಂದನ್ನು ನಡೆಸಿದೆ. ಕಾರಣಗಳು ಇಂತಿವೆ,

1. ಜೀವನದಿಂದ ಬೇಸರ
2. ತೀವ್ರವಾದ ಲಿಬಿಡೋ
3. ವಿವಾಹಿತ ಸಂಬಂಧಗಳಲ್ಲಿ ಶುಷ್ಕತೆ
4. ಗಂಡ ಮತ್ತು ಹೆಂಡತಿಯ ನಡುವಿನ ಸಂವಹನ ಅಂತರ
5. ಕೌಟುಂಬಿಕ ಹಿಂಸೆ
6. ಹಿಂದಿನ ಜೀವನ
7. ಬಹುಪತ್ನಿತ್ವ
8. ಬಾಳಸಂಗಾತಿಯಿಂದ ಹೆಚ್ಚಿನ ನಿರೀಕ್ಷೆ
9. ಜೀವನದಲ್ಲಿ ಹೊಸದನ್ನು ಮಾಡುವ ಬಯಕೆ
10. ಡ್ರಿಫ್ಟ್ ಆಫ್ ಇವೇ ಆ ಹತ್ತು ಕಾರಣಗಳಾಗಿವೆ.

ಅಂಕಿ-ಅಂಶಗಳಲ್ಲಿ ಆಘಾತಕಾರಿ ಸಂಗತಿ ಬಹಿರಂಗ
ವಿಶ್ವಾಧ್ಯಂತ ಎಷ್ಟು ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆಂದು ಈ ಸಮೀಕ್ಷೆ ಹೇಳಿದೆ, 'ಬಿಸಿನೆಸ್ ಆಫ್ ಆಪ್ಸ್' ಪ್ರಕಾರ, ಈ ಸಂಶೋಧನೆಯು ಒಂಟಿ, ವಿವಾಹಿತ, ವಿಚ್ಛೇದಿತ ಮತ್ತು ಸಂಗಾತಿಗಳಿಂದ ಬೇರ್ಪಟ್ಟ ಜನರನ್ನು ಒಳಗೊಂಡಿದೆ.

ಇದನ್ನೂ ಓದಿ-

>> ವಿಶ್ವಾದ್ಯಂತ ಸುಮಾರು 330 ಮಿಲಿಯನ್ ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ.
>> ಇಷ್ಟೊಂದು ಪ್ರಮಾಣದ ಜನಸಂಖ್ಯೆ ವಿಶ್ವದ ಹಲವು ದೇಶಗಳಲ್ಲಿ ಇಲ್ಲ
>> ಈ ಅಪ್ಲಿಕೇಶನ್ ಬಳಕೆದಾರರಿಗೆ ದೇಶದ ಸ್ಥಾನಮಾನವನ್ನು ನೀಡಿದರೆ, ಅವರು ನಾಲ್ಕನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶವಾಗುತ್ತಾರೆ.
>> 2022 ರ ಅಂತ್ಯದ ವೇಳೆಗೆ, ಡೇಟಿಂಗ್ ಅಪ್ಲಿಕೇಶನ್‌ಗಳ ಬಳಕೆದಾರರ ಸಂಖ್ಯೆ 43 ಮಿಲಿಯನ್ ಗೆ ಏರಿಕೆಯಾಗಲಿದೆ, ಇದು ಅಮೆರಿಕದ ಜನಸಂಖ್ಯೆಗಿಂತ ಹೆಚ್ಚು.
>> ಜನಸಂಖ್ಯೆಯ ಪ್ರಕಾರ, ಇದು ಚೀನಾ ಮತ್ತು ಭಾರತದ ನಂತರ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಬಹುದು.

ಇದನ್ನೂ ಓದಿ-

ಡೇಟಿಂಗ್ ಅಪ್ಲಿಕೇಶನ್‌ನಿಂದಾಗುವ ವಿವಾಹೇತರ ಸಂಬಂಧಗಳು
ವಿಶ್ವದೆಲ್ಲೆಡೆ ವಿವಾಹೇತರ ಸಂಬಂಧಗಳ ಟ್ರೆಂಡ್ ಹೆಚ್ಚಾಗಿದ್ದು, ಇಂಟರ್ ನೆಟ್ ಮತ್ತು ಮೊಬೈಲ್ ಈ ಕೆಲಸವನ್ನು ಹಿಂದಿಗಿಂತಲೂ ಸುಲಭಗೊಳಿಸಿವೆ, ಇದೆ ಕಾರಣದಿಂದ ಮೊಬೈಲ್ ಕ್ರಾಂತಿಯು ಭಾರತೀಯ ಸಮಾಜದಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಗೃಹಜೀವನದಿಂದ ತೊಂದರೆಗೀಡಾದ ನಂತರ ತಮ್ಮ ಹುದುಗಿಕೊಂಡ ಆಸೆಗಳನ್ನು ಪೂರೈಸಿಕೊಳ್ಳುವ ವಿವಾಹಿತರಿಗೆ ಪ್ರತ್ಯೇಕ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಸಹ ರಚಿಸಲಾಗಿದೆ. ಸಾಮಾಜಿಕ ಜಾಲತಾಣದ ಆ್ಯಪ್ ಗ್ಲೀಡೆನ್ ಪ್ರಕಾರ, ವಿವಾಹಿತ ಭಾರತೀಯರಲ್ಲಿ ದಾಂಪತ್ಯ ದ್ರೋಹದ ಅಭ್ಯಾಸಗಳು ವೇಗವಾಗಿ ಹೆಚ್ಚಾಗುತ್ತಿವೆ, ಈ ಕುರಿತಾದ ಅಂಕಿಅಂಶಗಳು ಏನನ್ನು ಹೇಳುತ್ತವೆ ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News