ಬರುತ್ತಿದೆ 50 ಇಂಚಿನ OPPO Smart TV, ಇದುವರೆಗಿನ ಅಗ್ಗದ ಟಿವಿ ಇದು

OPPO ಅಗ್ಗದ 50-ಇಂಚಿನ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಲಿದೆ. 15 ಸಾವಿರದ ರೂಪಾಯಿ ಬೆಲೆಯ ಈ ಸ್ಮಾರ್ಟ್ ಟಿವಿ ಅದ್ಭುತ ವೈಶಿಷ್ಟ್ಯಗಳನ್ನು  ಹೊಂದಿದೆ. 

Written by - Ranjitha R K | Last Updated : Aug 10, 2022, 12:46 PM IST
  • 65-ಇಂಚಿನ ಸ್ಮಾರ್ಟ್ ಟಿವಿಯನ್ನು OPPO ಬಿಡುಗಡೆ ಮಾಡಿದೆ
  • ಇದಕ್ಕೆ OPPO K9x ಎಂದು ಹೆಸರಿಟ್ಟಿದೆ.
  • ಇಂದು ಬಿಡುಗಡೆಯಾಗಲಿದೆ 50 ಇಂಚಿನ ಟಿವಿ
ಬರುತ್ತಿದೆ   50 ಇಂಚಿನ OPPO Smart TV, ಇದುವರೆಗಿನ ಅಗ್ಗದ ಟಿವಿ ಇದು   title=
oppo smart tv (file photo)

ಬೆಂಗಳೂರು : OPPO ಈ ವರ್ಷದ ಏಪ್ರಿಲ್‌ನಲ್ಲಿ 65-ಇಂಚಿನ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ OPPO K9x ಎಂದು ಹೆಸರಿಟ್ಟಿದೆ. ಈ ಟಿವಿಗೆ ಸ್ಮಾರ್ಟ್ ಟಿವಿ ಯ ಬೆಲೆ 2199 ಯುವಾನ್ ಅಂದರೆ 25,849 ರೂಪಾಯಿ. ಸ್ಮಾರ್ಟ್ ಟಿವಿಯ ಸಣ್ಣ ಗಾತ್ರದ ಆವೃತ್ತಿಯನ್ನು ಇಂದು ಅಂದರೆ ಆಗಸ್ಟ್ 10 ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಕಂಪನಿಯು K9x 50-ಇಂಚಿನ ಆವೃತ್ತಿಯ ಬೆಲೆ ವಿವರಗಳನ್ನು ಬಿಡುಗಡೆ ಮಾಡಿದೆ. ಅದರ ಬೆಲೆ 15,269 ರೂಪಾಯಿ ಎಂದು ಹೇಳಲಾಗಿದೆ.  

OPPO K9x ಸ್ಮಾರ್ಟ್ ಟಿವಿ 50 ವಿಶೇಷಣಗಳು :
ವಿವರಗಳ ಪ್ರಕಾರ, OPPO K9x 50-ಇಂಚಿನ ಆವೃತ್ತಿಯು ಗಾತ್ರದಲ್ಲಿನ ವ್ಯತ್ಯಾಸ ದೊಂದಿಗೆ 65-ಇಂಚಿನ ಆವೃತ್ತಿಗೆ ಹೋಲುತ್ತದೆ. OPPO K9x ಸ್ಮಾರ್ಟ್ ಟಿವಿಯು 4k LCD ಪರದೆಯನ್ನು ಹೊಂದಿದೆ. ಇದು 3840 x 2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. 60Hz ಫ್ರೇಮ್  ರೇಟ್, 1  ಬಿಲಿಯನ್  ಬಣ್ಣಗಳು, 280 nits ಬ್ರೈಟ್‌ನೆಸ್ ಮತ್ತು Delta E2 ಇವೆಲ್ಲವೂ ಟಿವಿಯಿಂದ ಬೆಂಬಲಿತವಾಗಿದೆ.

ಇದನ್ನೂ ಓದಿ : Google Map : ಗೂಗಲ್ ಮ್ಯಾಪ್ ಅನುಸರಿಸುತ್ತ ಹೋಗಿ ಕಾಲುವೆಗೆ ಬಿದ್ದ ಕಾರು

K9x ಸ್ಮಾರ್ಟ್ ಟಿವಿ 50 ಸ್ಪೀಕರ್‌ಗಳು :
ಸ್ಮಾರ್ಟ್ ಟಿವಿಯು ಕ್ವಾಡ್-ಕೋರ್ ಮೀಡಿಯಾ ಟೆಕ್ ಸಿಪಿಯು ಮೂಲಕ 16GB  ಮತ್ತು  ಇಂಟರ್ನಲ್ ಸ್ಟೋರೇಜ್ ಸ್ಪೇಸ್ 2GB RAM ನೊಂದಿಗೆ ಜೋಡಿಸಲ್ಪಟ್ಟಿದೆ. ಡ್ಯುಯಲ್-ಬ್ಯಾಂಡ್ ವೈ-ಫೈ ಚಿಪ್‌ಸೆಟ್‌ನಿಂದ ಬೆಂಬಲಿತವಾಗಿದೆ. ಹೆಚ್ಚುವರಿಯಾಗಿ, ಟಿವಿಯು 20W ಪವರ್ ರೇಟಿಂಗ್‌ನೊಂದಿಗೆ ಎರಡು  ಬಿಲ್ಟ್ ಇನ್ ಸ್ಪೀಕರ್‌ಗಳನ್ನು ಹೊಂದಿದೆ. 

K9x ಸ್ಮಾರ್ಟ್ ಟಿವಿ 50 ಚಿತ್ರದ ಗುಣಮಟ್ಟ :
OPPO K9x ಸ್ವಯಂ-ಅಭಿವೃದ್ಧಿಪಡಿಸಿದ AI PQ ಅಲ್ಗಾರಿದಮ್ ಅನ್ನು ಹೊಂದಿದೆ. ಅದು ಎಲ್ಲಾ ದೃಶ್ಯಗಳಲ್ಲಿ ಚಿತ್ರದ ಗುಣಮಟ್ಟವನ್ನು ಫ್ರೇಮ್-ಬೈ-ಫ್ರೇಮ್  ಕಸ್ಟಮೈಸೇಶನ್  ಬೆಂಬಲಿಸುತ್ತದೆ. ಪ್ರಮುಖ ಸ್ಮಾರ್ಟ್ ಟಿವಿಗಳಂತೆಯೇ ಅದೇ ಶ್ರೇಣಿಯಲ್ಲಿ  ಡಿಸ್ಪ್ಲೇ ಲೆವೆಲ್ ಬಣ್ಣದ ನಿಖರತೆಯನ್ನು ಹೊಂದಿದೆ.

ಇದನ್ನೂ ಓದಿ ಜಿಯೋ ಭರ್ಜರಿ ಆಫರ್ : ವರ್ಷಪೂರ್ತಿ ನಿತ್ಯ 2.5GB ಡೇಟಾ , ಅನ್ಲಿಮಿಟೆಡ್ ಕಾಲಿಂಗ್ .!

K9x ಸ್ಮಾರ್ಟ್ ಟಿವಿ 50 ವೈಶಿಷ್ಟ್ಯಗಳು :
ColorOS TV ಯ ಇತ್ತೀಚಿನ ಆವೃತ್ತಿಯನ್ನು ಚಲಾಯಿಸುವ K9x ಸ್ಮಾರ್ಟ್ ಟಿವಿಯ ಪ್ರಮುಖ ವೈಶಿಷ್ಟ್ಯವೆಂದರೆ ಯಾವುದೇ ಬೂಟ್ ಜಾಹೀರಾತುಗಳಿರುವುದಿಲ್ಲ.  ಇದರ ಪರಿಣಾಮವಾಗಿ ತ್ವರಿತವಾಗಿ ಬೂಟ್ ಆಗುತ್ತದೆ. ಕನಿಷ್ಠ  ನಿರೀಕ್ಷಣೆಯೊಂದಿಗೆ  ಆಪರೇಟಿಂಗ್ ಸಿಸ್ಟಮ್ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ನಾಲ್ಕು ಮೊಬೈಲ್ ಫೋನ್‌ಗಳಿಂದ ಏಕಕಾಲದಲ್ಲಿ  ಸ್ಕ್ರೀನ್ ಪ್ರೊಜೆಕ್ಷನ್‌ ಕಾರ್ಯ ಕ್ಷಮತೆ ಹೊಂದಿದೆ. ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಟಿವಿಯಲ್ಲಿ ಮೊಬೈಲ್ ಫೋನ್ ಕರೆಗಳ ಅಲರ್ಟ್ ತೋರಿಸುವುದಿಲ್ಲ. ಟಿವಿ ಆನ್‌ಲೈನ್ ತರಗತಿಗಳು, ಮಕ್ಕಳಿಗಾಗಿ ಪ್ರೋಗ್ರಾಮಿಂಗ್, ಮಕ್ಕಳಿಗೆ ಅನುಕೂಲವಾಗುವಂಥಹ ಸೆಟ್ಟಿಂಗ್‌ಗಳು ಮತ್ತು ಇನ್ ಬಿಲ್ಟ್ AI ಫಿಟ್‌ನೆಸ್ ಸೂಚನೆಗಳನ್ನು ಬೆಂಬಲಿಸುವ ಚೈಲ್ಡ್ ಮೋಡ್ ಅನ್ನು ಟಿವಿ ಒಳಗೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News