ಮಾರುಕಟ್ಟೆಗೆ ಕಾಲಿಟ್ಟಿದೆ 7 ಸಾವಿರ ರೂಪಾಯಿ ಬೆಲೆಯ ವಾಷಿಂಗ್ ಮೆಷಿನ್ .! ವೈಶಿಷ್ಟ್ಯಗಳು ಕೂಡಾ ಸೂಪರ್ !

ಡಿಸೆಂಬರ್ 23 ರಂದು ಅಂದರೆ ನಾಳೆ ಫ್ಲಿಪ್‌ಕಾರ್ಟ್‌ನಲ್ಲಿ 3 ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್‌ಗಳನ್ನು ಮಾರಾಟಕ್ಕೆ ಬಿಡಲಿದೆ.  

Written by - Ranjitha R K | Last Updated : Dec 22, 2022, 03:16 PM IST
  • ಅಗ್ಗದ ಬೆಲೆಯ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ
  • 3 ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್
  • ನಾಳೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ
ಮಾರುಕಟ್ಟೆಗೆ ಕಾಲಿಟ್ಟಿದೆ 7 ಸಾವಿರ ರೂಪಾಯಿ ಬೆಲೆಯ ವಾಷಿಂಗ್ ಮೆಷಿನ್ .! ವೈಶಿಷ್ಟ್ಯಗಳು ಕೂಡಾ ಸೂಪರ್ ! title=
White Westinghouse Semi-Automatic Washing Machines

ಬೆಂಗಳೂರು : ಚಳಿಗಾಲದಲ್ಲಿ ತಣ್ಣೀರಿಗೆ ಕೈ ಹಾಕಿ ಕೆಲಸ ಮಾಡುವುದು ಸ್ವಲ್ಪ ಕಷ್ಟವೇ. ಹೀಗಿರುವಾಗ ಬಟ್ಟೆಯನ್ನು ಕೈಯ್ಯಲ್ಲಿ ತೊಳೆಯುವುದು ಕೂಡಾ ಬಲು ಕಷ್ಟ. ವಾಷಿಂಗ್ ಮೆಷಿನ್ ಇದ್ದರೆ ಈ ಚಿಂತೆ ಇರುವುದಿಲ್ಲ. ಆದರೆ ಎಲ್ಲರ ಮನೆಯಲ್ಲಿ ವಾಷಿಂಗ್ ಮೆಷಿನ್ ಇರಬೇಕಲ್ಲ. ಈಗ ಪ್ರತಿಯೊಂದು ಮನೆಯೂ ವಾಷಿಂಗ್ ಮೆಷಿನ್ ಹೊಂದುವುದು ಸಾಧ್ಯ. ಯಾಕೆಂದರೆ ಅಗ್ಗದ ಬೆಲೆಯ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಉನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮೆಷಿನ್ ಮಾರುಕಟ್ಟೆಯಲ್ಲಿದೆ. ಅಮೆರಿಕದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ವೈಟ್ ವೆಸ್ಟಿಂಗ್‌ಹೌಸ್ ವಾಷಿಂಗ್ ಮೆಷಿನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಡಿಸೆಂಬರ್ 23 ರಂದು ಅಂದರೆ ನಾಳೆ ಫ್ಲಿಪ್‌ಕಾರ್ಟ್‌ನಲ್ಲಿ 3 ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್‌ಗಳನ್ನು ಮಾರಾಟಕ್ಕೆ ಬಿಡಲಿದೆ.  

ವೈಟ್ ವೆಸ್ಟಿಂಗ್‌ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಬೆಲೆ :
ವೈಟ್ ವೆಸ್ಟಿಂಗ್‌ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್‌ನ ಮೂರು ಮಾದರಿಗಳಲ್ಲಿ  (6KG, 8.5KG ಮತ್ತು 9.5KG) ಲಭ್ಯವಿರಲಿದೆ. ಅವುಗಳ ಬೆಲೆ ಕ್ರಮವಾಗಿ 7190, 8999 ಮತ್ತು 10499 ರೂ. ವಾಷಿಂಗ್ ಮೆಷಿನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಎಲ್ಲಾ ಮೂರು ಮಾದರಿಗಳು ಡಿಸೆಂಬರ್ 23 ರಿಂದ ಲಭ್ಯವಿರುತ್ತವೆ. 

ಇದನ್ನೂ ಓದಿ : Jio Cheapest Plan: 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ!

ವೈಟ್ ವೆಸ್ಟಿಂಗ್‌ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ವೈಶಿಷ್ಟ್ಯಗಳು :
ವೈಟ್ ವೆಸ್ಟಿಂಗ್‌ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್‌ನಲ್ಲಿ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳು ಲಭ್ಯವಿರಲಿವೆ. ಡಬಲ್ ಇನ್ಲೆಟ್, ಡಬಲ್ ವಾಟರ್ ಫಾಲ್,  ಮ್ಯಾಜಿಕ್ ಫಿಲ್ಟರ್, ಕಾಲರ್ ಸ್ಕ್ರಬ್ಬರ್ ಮತ್ತು ಏರ್-ಡ್ರೈ ಫೀಚರ್‌ನಂತಹ ವೈಶಿಷ್ಟ್ಯಗಳೊಂದಿಗೆ ಈ ಮೆಷಿನ್ ಅನ್ನು ಸಿದ್ದಗೊಳಿಸಲಾಗಿದೆ. ಈ ಮೆಷಿನ್  ರಸ್ಟ್ ಫ್ರೀ ಪ್ಲಾಸ್ಟಿಕ್ ಬಾಡಿ ಮತ್ತು ಶಕ್ತಿಯುತ ಇನ್ಸುಲೇಟೆಡ್ ಮೋಟಾರ್‌ನೊಂದಿಗೆ ಬರುತ್ತವೆ.

ಇದನ್ನೂ ಓದಿ : 4 ಲಕ್ಷದೊಳಗಿನ ಆಟೋಮ್ಯಾಟಿಕ್ ಕಾರುಗಳು.! ಖರೀದಿಗೆ ಇರುವುದು ಕೆಲವೇ ಸಮಯಾವಕಾಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News