Health benefits of ragi: ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಾಗಿಯನ್ನು ಗಂಜಿ ಮತ್ತು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಮಧುಮೇಹಕ್ಕೆ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ.
Health benefits of ragi: ನಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನ ಒದಗಿಸುವ ಪ್ರಮುಖ ಧಾನ್ಯಗಳಲ್ಲಿ ರಾಗಿ ಸಹ ಒಂದು. ರಾಗಿಯನ್ನು ವಿವಿಧ ರೀತಿಯಲ್ಲಿ ಸೇವಿಸಲಾಗುತ್ತದೆ. ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಗಂಜಿ, ರಾಗಿ ಅಂಬಲಿ ಹೀಗೆ ವಿವಿಧ ರೀತಿಯಲ್ಲಿ ರಾಗಿಯನ್ನು ಸೇವಿಸಲಾಗುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮಕ್ಕಳ ಸರಿಯಾದ ಬೆಳವಣಿಗೆಗೆ ಸಹ ರಾಗಿ ಉಪಯುಕ್ತವಾಗಿದೆ. ವಯಸ್ಸಾದವರು ಮತ್ತು ಮಹಿಳೆಯರ ಎಲುಬಿನ ಬಲಕ್ಕಾಗಿ ರಾಗಿ ಮಾಲ್ಟ್ ಸೇವಿಸಬೇಕು. ರಾಗಿಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೂಳೆಗಳ ಬಲಕ್ಕಾಗಿ ಖನಿಜಗಳ ರಚನೆಗೆ ರಾಗಿ ಮಾಲ್ಟ್ ಉತ್ತಮ ಕೊಡುಗೆ ನೀಡುತ್ತದೆ. ರಾಗಿ ಮಾಲ್ಟ್ ಕುಡಿದರೆ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ. ರಾಗಿಯಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಪ್ರೋಟೀನ್ಗಳು, A, B, C ಜೀವಸತ್ವಗಳು ಮತ್ತು ಖನಿಜಗಳು ನಮ್ಮ ದೇಹಕ್ಕೆ ಬಲ ನೀಡುತ್ತವೆ. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ.
ರಾಗಿಯಲ್ಲಿರುವ ಅಮೈನೋ ಆಮ್ಲಗಳು ಟ್ರಿಪ್ಟೊಫಾನ್ ಆಗಿದ್ದು, ಹಸಿವನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ತೂಕವನ್ನು ನಿಯಂತ್ರಣದಲ್ಲಿರುತ್ತದೆ. ರಾಗಿ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ರಾಗಿಯು ಹೃದಯದ ದೌರ್ಬಲ್ಯ ಮತ್ತು ಅಸ್ತಮಾವನ್ನು ಕಡಿಮೆ ಮಾಡುತ್ತದೆ.
ರಾಗಿಯಿಂದ ಮಾಡಿದ ಆಹಾರ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ದೇಹಕ್ಕೆ ಶಕ್ತಿಯನ್ನು ದೊರೆಯುತ್ತದೆ. ನಿಯಮಿತವಾಗಿ ರಾಗಿ ಆಹಾರ ಸೇವಿಸುವುದರಿಂದ ದೇಹಕ್ಕೆ ಉತ್ತಮ ಶಕ್ತಿ ದೊರೆಯುತ್ತದೆ. ರಾಗಿಯ ಸೇವನೆಯಿಂದ ಚರ್ಮವು ಹೊಳಪು ಮತ್ತು ಮೃದುವಾಗಿರುತ್ತದೆ ಮತ್ತು ನೀವು ಯಾವಾಗಲೂ ಯಂಗ್ ಆಗಿ ಕಾಣುತ್ತೀರಿ.
ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಾಗಿಯನ್ನು ಗಂಜಿ ಮತ್ತು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಮಧುಮೇಹಕ್ಕೆ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ.
ರಾಗಿ ಫೈಟೊಕೆಮಿಕಲ್ಸ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಇತರ ಪರಿಧಮನಿಯ ಕಾಯಿಲೆಗಳಿಂದ ಬಳಲುತ್ತಿದ್ದರೆ ಫೈಬರ್ನಲ್ಲಿ ಸಮೃದ್ಧವಾಗಿರುವ ರಾಗಿ ತುಂಬಾ ಸಹಕಾರಿಯಾಗಿದೆ.