Call Record ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, ತಿಳಿದುಕೊಳ್ಳಲು ಸುದ್ದಿನ್ನೊಮ್ಮೆ ಓದಿ

Calling Record: ಕೇಂದ್ರ ಸರ್ಕಾರದ ಭದ್ರತಾ ಕಾರಣಗಳಿಂದ ಕರೆ ದಾಖಲೆಗಳ ನಿಯಮಗಳನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆ ಇದೀಗ ಕರೆ ರೆಕಾರ್ಡ್ ಅನ್ನು ಎರಡು ವರ್ಷಗಳವರೆಗೆ ಸುರಕ್ಷಿತವಾಗಿರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

Written by - Nitin Tabib | Last Updated : Dec 24, 2021, 10:47 AM IST
  • ಕಾಲ್ ರೆಕಾರ್ಡ್ ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರ,
  • ಭದ್ರತಾ ಏಜೆನ್ಸಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ,
  • ಇನ್ಮುಂದೆ ಕರೆ ದಾಖಲೆಗಳು ಮತ್ತು ಐಪಿ ದಾಖಲೆಗಳು ಎರಡು ವರ್ಷಗಳವರೆಗೆ ಸಂಗ್ರಹ.
Call Record ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, ತಿಳಿದುಕೊಳ್ಳಲು ಸುದ್ದಿನ್ನೊಮ್ಮೆ ಓದಿ  title=
Calling Record (File Photo)

Calling Record: ಭದ್ರತೆಯನ್ನು ಉಲ್ಲೇಖಿಸಿ ಎರಡು ವರ್ಷಗಳ ಕಾಲ ಕರೆ ದಾಖಲೆಗಳನ್ನು ಸುರಕ್ಷಿತವಾಗಿರಿಸುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ (Telecom Companies) ಸೂಚಿಸಿದೆ. ಈ ನಿಯಮದ ಅಡಿಯಲ್ಲಿ, ಇದೀಗ ದೂರಸಂಪರ್ಕ ಇಲಾಖೆಯು (DoT) ತನ್ನ ಏಕೀಕೃತ ಪರವಾನಗಿ ಒಪ್ಪಂದದಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಎಲ್ಲಾ ಬಳಕೆದಾರರ ಕರೆ ದಾಖಲೆಗಳು ಮತ್ತು IP ವಿಳಾಸಗಳನ್ನು ಇದೀಗ ಕನಿಷ್ಠ ಎರಡು ವರ್ಷಗಳವರೆಗೆ ಸಂರಕ್ಷಿಸಬೇಕು ಎಂದು ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶಿಸಿದೆ.  

ಇದುವರೆಗೆ ಕರೆ ದಾಖಲೆಗಳು (Call Record) ಮತ್ತು ಐಪಿ ವಿಳಾಸವನ್ನು (IP Adress Record) ಒಂದು ವರ್ಷದವರೆಗೆ ಮಾತ್ರ ಸಂಗ್ರಹಿಸಿ ಇಡುವುದು ಕಡ್ಡಾಯವಾಗಿತ್ತು, ಅದು ಇದೀಗ ಎರಡು ವರ್ಷಕ್ಕೆ ಬದಲಾಗಿದೆ. ಭದ್ರತಾ (Security Agencies) ಏಜೆನ್ಸಿಗಳ ಬೇಡಿಕೆ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಭದ್ರತಾ ಕಾರಣಗಳಿಂದಾಗಿ ಎರಡು ವರ್ಷಗಳ ಕಾಲ ಕಾಲ್ ರೆಕಾರ್ಡ್‌ಗಳು ಮತ್ತು ಐಪಿ ಅಡ್ರೆಸ್‌ಗಳನ್ನು ಸುರಕ್ಷಿತವಾಗಿಡಬೇಕು ಎಂದು ಭದ್ರತಾ ಏಜೆನ್ಸಿಗಳಿಂದ ಬಹಳ ಸಮಯದಿಂದ ಬೇಡಿಕೆ ಇತ್ತು.

ಇದನ್ನೂ ಓದಿ-New Year: ನ್ಯೂ ಇಯರ್ ಪಾರ್ಟಿಗೆ ಬ್ರೇಕ್..! ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕಿಲ್ಲ ಪ್ರವೇಶ

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಡಿಸೆಂಬರ್ 21 ರಂದು ಈ ಕುರಿತು ದೂರಸಂಪರ್ಕ ಇಲಾಖೆಯಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಇದರಲ್ಲಿ ಎಲ್ಲಾ ರೀತಿಯ ಸಂವಹನ ಕರೆ ದಾಖಲೆಗಳು, ವಿನಿಮಯ ವಿವರಗಳ ದಾಖಲೆಗಳು, ಐಪಿ ವಿಳಾಸದ ದಾಖಲೆಗಳನ್ನು ಈಗ ಕನಿಷ್ಠ 2 ರವರೆಗೆ ರಕ್ಷಿಸಬೇಕು ಎಂದು ಹೇಳಲಾಗಿದೆ.  ಇಂಟರ್ನೆಟ್ ಟೆಲಿಫೋನಿನ ಎಲ್ಲಾ ದಾಖಲೆಗಳನ್ನು ಸಹ ನಿರ್ವಹಿಸುವ ಅಗತ್ಯವಿದೆ ಎಂದು ಈ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಇದನ್ನೂ ಓದಿ-ಡಿಸೆಂಬರ್ 31ರ ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಿ, ಇಲ್ಲವಾದರೆ ತಪ್ಪಿದ್ದಲ್ಲ ನಷ್ಟ

ಬಹುತೇಕ ತನಿಖೆಗಳು ಪೂರ್ಣಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಸಮಯಾವಕಾಶ ತೆಗೆದುಕೊಳ್ಳುತ್ತವೆ  ಮತ್ತು ಇಂತಹ ಪರಿಸ್ಥಿತಿಯಲ್ಲಿ, ಕರೆ ರೆಕಾರ್ಡ್ ಸುರಕ್ಷಿತವಾಗಿಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ ಎಂದು ಭದ್ರತಾ ಏಜೆನ್ಸಿಗಳು ತಮ್ಮ ವಾದ ಮಂಡಿಸಿದ್ದವು. ಇದಕ್ಕಾಗಿ, ಇದೀಗ ಕರೆ ರೆಕಾರ್ಡ್ ಮತ್ತು ಐಪಿ ವಿಳಾಸವನ್ನು 2 ವರ್ಷಗಳವರೆಗೆ ಸುರಕ್ಷಿತವಾಗಿರಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-Grah Dosh: ಪ್ರತಿ ಗ್ರಹದ ಅಶುಭ ಪರಿಣಾಮವನ್ನು ನಿವಾರಿಸುತ್ತೆ ಈ ಶಕ್ತಿಯುತ ಪರಿಹಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News