Tax Saving Tips: ಆದಾಯ ತೆರಿಗೆ ಉಳಿಸಲು ಇದು ಸಕಾಲ. ಏಕೆಂದರೆ ವರ್ಷದ ಶುರುವಿನಲ್ಲಿ ತೆರಿಗೆ ಯೋಜನೆ ಆರಂಭಿಸಿದರೆ ಹಲವು ರೀತಿಯ ಲಾಭಗಳಿವೆ. ಮುಖ್ಯವಾಗಿ ತಿಂಗಳಿಗೆ 1 ಲಕ್ಷ ರೂಪಾಯಿ ಗಳಿಸಿದರೂ ಅಂದರೆ ವಾರ್ಷಿಕ 12 ಲಕ್ಷ ಆದಾಯ ಮಾಡಿದರೂ ಸರಿಯಾಗಿ ಪ್ಲಾನ್ ಮಾಡಿದರೆ 100% ತೆರಿಗೆ ಉಳಿಸಬಹುದು. ನಿಮ್ಮ ಸಂಬಳ ಅಥವಾ ಆದಾಯದ ಮೇಲಿನ ತೆರಿಗೆ ಶೂನ್ಯವಾಗಿರುತ್ತದೆ.
ವರ್ಷಕ್ಕೆ 12 ಲಕ್ಷ ರೂಪಾಯಿ ಗಳಿಸಿ ಶೂನ್ಯ ಆದಾಯ ತೆರಿಗೆ ಪಾವತಿಸುವಂತೆ ಆಗಬೇಕು ಎಂದರೆ ನಿಮ್ಮ ಎಲ್ಲಾ ವಿನಾಯಿತಿಗಳು ಮತ್ತು ಕಡಿತಗಳನ್ನು ಸರಿಯಾಗಿ ಬಳಸಬೇಕು. ಇದಕ್ಕಾಗಿ ತೆರಿಗೆ ವ್ಯಾಪ್ತಿ ಮೀರದಂತೆ ನಿಮ್ಮ ಆದಾಯದ ರಚನೆಯನ್ನು ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ವರ್ಷದ ಆರಂಭದಲ್ಲಿ ಸಂಬಳ ಅಥವಾ ಆದಾಯದ ಸ್ವರೂಪವನ್ನು ಬದಲಿಸಿಕೊಳ್ಳಬಹುದಾದ ಆಯ್ಕೆಗಳು ಇರುತ್ತವೆ. ಅವುಗಳನ್ನು ಅಳವಡಿಸಿಕೊಳ್ಳಬೇಕು.
ಖರ್ಚುಗಳಲ್ಲೇ ಲಾಭ ಮಾಡಿಕೊಳ್ಳಿ:
ಆದಾಯ ತೆರಿಗೆ ಮರುಪಾವತಿಯಲ್ಲಿ (ITR) ವೇಳೆ LTA, ಆಹಾರಗಳ ಕೂಪನ್, ಮನರಂಜನೆ, ಇಂಟರ್ನೆಟ್, ಫೋನ್ ಬಿಲ್, ಪೆಟ್ರೋಲ್ ಖರ್ಚು ಮುಂತಾದ ಆಯ್ಕೆಗಳಿರುತ್ತವೆ. ಅವುಗಳ ಸಂಪೂರ್ಣ ಲಾಭ ಪಡೆಯಬೇಕು. ಜೊತೆಗೆ ತೆರಿಗೆ ಉಳಿತಾಯಕ್ಕೆ HRA ಕೂಡ ಒಂದು ಆಯ್ಕೆ. HRA ಮೂಲಕ ಹೇಗೆಲ್ಲಾ ತೆರಿಗೆ ಉಳಿಸಬಹುದು ಎನ್ನುವುದನ್ನು ಮುಂದೆ ನೋಡಿ.
ಇದನ್ನೂ ಓದಿ- ನಿಜಕ್ಕೂ 5,000 ರೂ. ಬೆಲೆಯ ನೋಟುಗಳು ಬರಲಿವೆಯಾ? RBI ಹೇಳಿದ್ದೇನು?
ತೆರಿಗೆ ಉಳಿತಾಯಕ್ಕೆ HRA ಕೂಡ ಅತ್ಯುತ್ತಮ ಆಯ್ಕೆ:
HRA ಮೂಲಕ ಹೇಗೆ ತೆರಿಗೆ ಉಳಿಸಲು ಮೂರು ಪ್ರಮುಖ ವಿಧಾನಗಳಲ್ಲಿ ನಿಮಗೆ ಯಾವುದು ಸೂಕ್ತವೋ ಅದನ್ನು ಅಳವಡಿಸಿಕೊಳ್ಳಿ...
* ನಿಮ್ಮ ಕಂಪನಿ ಅಥವಾ ಸಂಸ್ಥೆಗಳಲ್ಲಿ ನೀಡುವ ಸಂಬಳದಲ್ಲಿ HRA ಕ್ಲೈಮ್ ಮಾಡಬಹುದು.
* ನೀವು ಮೆಟ್ರೋ ನಗರಗಳಲ್ಲಿದ್ದರೆ ಮೂಲ ವೇತನದ 50% ಹಾಗೂ ಮೆಟ್ರೋ ಅಲ್ಲದ ನಗರಗಲ್ಲಿದ್ದರೆ ಮೂಲ ವೇತನದ 40% ವರೆಗೆ HRA ಕ್ಲೇಮ್ ಮಾಡಬಹುದು.
* ನಿಮ್ಮ ಒಟ್ಟು ಬಾಡಿಗೆಯಿಂದ ಮೂಲ ವೇತನದ 10% ಹಣವನ್ನು ಕಡಿತಗೊಳಿಸಿದ ನಂತರ ಉಳಿದಿರುವ ಮೊತ್ತಕ್ಕೆ HRA ಕ್ಲೇಮ್ ಮಾಡಬಹುದು.
ನಿಮ್ಮ ವಾರ್ಷಿಕ ಸಂಬಳ 12 ಲಕ್ಷ ರೂಪಾಯಿ ಆಗಿದ್ದರೆ 3.60 ಲಕ್ಷ HRA, 10,000 ರೂಪಾಯಿ LTA, 6,000 ರೂಪಾಯಿ ಟೆಲಿಫೋನ್ ಬಿಲ್ ಆಗಿದ್ದರೆ ಈ ರೀತಿ ಲಾಭವನ್ನು ಪಡೆಯಬಹುದು.
ಇದನ್ನೂ ಓದಿ- Income Tax ಕಟ್ಟಿದ್ರೂ ಬೀಳುತ್ತೆ ದಂಡ, ರೀಫಂಡ್ ಕೂಡ ವಾಪಸ್ ಹೋಗಬಹುದು, ಯಾಕ್ ಗೊತ್ತಾ...?
ಆದಾಯ ತೆರಿಗೆ ಉಳಿತಾಯಕ್ಕೆ ಸಲಹೆ:
>> ಸೆಕ್ಷನ್ 16ರ ಅಡಿಯಲ್ಲಿ ಪ್ರಮಾಣಿತ ಕಡಿತ 50,000 ರೂಪಾಯಿ
>> ವೃತ್ತಿಪರ ತೆರಿಗೆಯಿಂದ ವಿನಾಯಿತಿ 2,500 ರೂಪಾಯಿ
>> ವಿಭಾಗ 10 (13A) ಅಡಿಯಲ್ಲಿ HRA 3.60 ಲಕ್ಷ ರೂಪಾಯಿ
ವಿಭಾಗ 10(5) ಅಡಿಯಲ್ಲಿ LTA 10,000 ರೂಪಾಯಿ
ಈ ಮೇಲಿನ ಎಲ್ಲವೂ ಸೇರಿದರೆ ನಿಮ್ಮ ತೆರಿಗೆ ವ್ಯಾಪ್ತಿಯ ಆದಾಯ 7,71,500 ರೂಪಾಯಿ ಆಗಿರುತ್ತದೆ.
>> ನಂತರ ಸೆಕ್ಷನ್ 80C ಅಡಿಯಲ್ಲಿ (LIC, PF, PPF, ಮಕ್ಕಳ ಬೋಧನಾ ಶುಲ್ಕ ಇತ್ಯಾದಿ ಸೇರಿ 1.50 ಲಕ್ಷ ರೂಪಾಯಿಯನ್ನು ಕ್ಲೇಮ್ ಮಾಡಬಹುದು.
>> ಐಟಿ ಸೆಕ್ಷನ್ 80CCD ಅಡಿಯಲ್ಲಿ, ಶ್ರೇಣಿ 1ರ ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS) 50,000 ರೂಪಾಯಿಗಳನ್ನು ಕ್ಲೇಮ್ ಮಾಡಬಹುದು.
>> ಐಟಿ ಸೆಕ್ಷನ್ 80D ಅಡಿಯಲ್ಲಿ, ಸ್ವಯಂ, ಹೆಂಡತಿ ಮತ್ತು ಮಕ್ಕಳ ಆರೋಗ್ಯ ವಿಮೆಗೆ 25,000 ರೂಪಾಯಿಗಳನ್ನು ಕ್ಲೇಮ್ ಮಾಡಬಹುದು.
>> ಪೋಷಕರ (ಹಿರಿಯ ನಾಗರಿಕರು) ಹೆಲ್ತ್ ಪಾಲಿಸಿ ಮೇಲೆ 50,000 ರೂಪಾಯಿಗಳನ್ನು ಕ್ಲೇಮ್ ಮಾಡಬಹುದು.
>> ಇಷ್ಟೆಲ್ಲಾ ಮಾಡಿದರೆ ನಿಮ್ಮ ವೇತನ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆಗುತ್ತದೆ. ನಿಮ್ಮ ವೇತನ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಸಹಜವಾಗಿ 87A ಅಡಿಯಲ್ಲಿ ನಿಮಗೆ ತೆರಿಗೆ ವಿನಾಯಿತಿ ಇರುತ್ತದೆ. ಆಗ ನೀವು ಶೂನ್ಯ ತೆರಿಗೆ ಪಾವತಿದಾರರಾಗುತ್ತೀರಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.