BSNLನ ಅದ್ಭುತ ಯೋಜನೆ, ಈಗ ಮೊಬೈಲ್ ರೀಚಾರ್ಜ್ ಆಗಲಿದೆ Free!

Paytm ನೊಂದಿಗೆ ರೀಚಾರ್ಜ್ ಮಾಡಲು ಗ್ರಾಹಕರು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಹೊಸ ಅಭಿಯಾನಕ್ಕೆ 'ಫರ್ಸ್ಟ್ ರೀಚಾರ್ಜ್ ಫ್ರೀ' (‘First Recharge Free’) ಎಂದು ಹೆಸರಿಸಲಾಗಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡುವ ಮೂಲಕ ಬಿಎಸ್‌ಎನ್‌ಎಲ್ ಮಾಹಿತಿ ಹಂಚಿಕೊಂಡಿದೆ.

Last Updated : Nov 5, 2020, 08:35 AM IST
  • ಬಿಎಸ್ಎನ್ಎಲ್ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ
  • ಈಗ ರೀಚಾರ್ಜ್ ಉಚಿತವಾಗಿರುತ್ತದೆ
  • ಹೊಸ ಯೋಜನೆ ಏನು ಎಂದು ತಿಳಿಯಿರಿ
BSNLನ ಅದ್ಭುತ ಯೋಜನೆ, ಈಗ ಮೊಬೈಲ್ ರೀಚಾರ್ಜ್ ಆಗಲಿದೆ Free! title=
File Image

ನವದೆಹಲಿ: ಬಿಎಸ್‌ಎನ್‌ಎಲ್ ಮತ್ತೊಮ್ಮೆ ಹಳೆಯ ಮೂಡ್ ಗೆ ತೆರಳುತ್ತಿದೆ. ಸರ್ಕಾರಿ ಟೆಲಿಕಾಂ ಕಂಪನಿಯಿಂದ ನೀಡಲಾಗುತ್ತಿರುವ ಒಂದಕ್ಕಿಂತ ಒಂದು ಹೊಸ ಹೊಸ ಯೋಜನೆಗಳು ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗೆ ಟಕ್ಕರ್ ನೀಡುತ್ತಿದೆ. ಈಗ ಈ ಸಂಚಿಕೆಯಲ್ಲಿ ಬಿಎಸ್ಎನ್ಎಲ್ (BSNL) ಗ್ರಾಹಕರಿಗೆ ಮೊಬೈಲ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.

Paytm ನಿಂದ ಮೊದಲ ಬಾರಿಗೆ ರೀಚಾರ್ಜ್‌ನಲ್ಲಿ 100% ಕ್ಯಾಶ್‌ಬ್ಯಾಕ್:
ಬಿಎಸ್‌ಎನ್‌ಎಲ್ ಇತ್ತೀಚೆಗೆ ಆನ್‌ಲೈನ್ ಪಾವತಿ ವೇದಿಕೆ ಪೇಟಿಎಂ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಗ್ರಾಹಕರು Paytm ನಿಂದ ಮೊದಲ ರೀಚಾರ್ಜ್‌ನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಅಂದರೆ ಗ್ರಾಹಕರು Paytm ನೊಂದಿಗೆ ರೀಚಾರ್ಜ್ ಮಾಡಲು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಹೊಸ ಅಭಿಯಾನಕ್ಕೆ 'ಫರ್ಸ್ಟ್ ರೀಚಾರ್ಜ್ ಫ್ರೀ' (‘First Recharge Free’) ಎಂದು ಹೆಸರಿಸಲಾಗಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡುವ ಮೂಲಕ ಬಿಎಸ್‌ಎನ್‌ಎಲ್ ಮಾಹಿತಿ ಹಂಚಿಕೊಂಡಿದೆ.

ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಲಭ್ಯವಿರುವ ಮಾಹಿತಿಯ ಪ್ರಕಾರ ಗ್ರಾಹಕರು ತಮ್ಮ ಬಿಎಸ್‌ಎನ್‌ಎಲ್ ಮೊಬೈಲ್ ಸಂಪರ್ಕಕ್ಕಾಗಿ ಪೇಟಿಎಂ ಮೂಲಕ ರೀಚಾರ್ಜ್ ಮಾಡಿದರೆ, ಕ್ಯಾಶ್‌ಬ್ಯಾಕ್ ಮಾತ್ರ ಲಭ್ಯವಿರುತ್ತದೆ. ಕ್ಯಾಶ್‌ಬ್ಯಾಕ್‌ನ ಗರಿಷ್ಠ ಮೊತ್ತ 50 ರೂಪಾಯಿಗಳು. ಅಂದರೆ ಗ್ರಾಹಕರು Paytm ನಿಂದ ರೀಚಾರ್ಜ್ ಮಾಡಿದಾಗ, ಈ ಮೊತ್ತವು ಅವರ Paytm ಖಾತೆಯಲ್ಲಿ ಬರುತ್ತದೆ.

BSNL ಗ್ರಾಹಕರಿಗೆ ಗುಡ್ ನ್ಯೂಸ್, ಈಗ ಡಿಸೆಂಬರ್‌ವರೆಗೆ ಸಿಗಲಿದೆ ಈ ಸೌಲಭ್ಯ

ಬಿಎಸ್‌ಎನ್‌ಎಲ್ನ 365 ರೂಪಾಯಿ ಯೋಜನೆ:
ಪ್ರಿಪೇಯ್ಡ್ ಗ್ರಾಹಕರಿಗೆ 365 ರೂ.ಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ. ಈ ಯೋಜನೆಯ ಸಿಂಧುತ್ವವು ಪೂರ್ಣ ವರ್ಷ ಅಂದರೆ 365 ದಿನಗಳು. ಈ ರೀಚಾರ್ಜ್‌ನಲ್ಲಿ, ಗ್ರಾಹಕರು ಪ್ರತಿದಿನ 250 ನಿಮಿಷಗಳ ಕಾಲ ಉಚಿತ ಕರೆ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದಲ್ಲದೆ ಗ್ರಾಹಕರು ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೇವೆಯನ್ನೂ ಪಡೆಯಬಹುದು.

Trending News