Maruti, Hyundai ಬೆವರಿಳಿಸಿದ ಟಾಟಾ ! ಈ ಕಾರಿನ ಬುಕಿಂಗ್ ಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು

Tata vs Maruti vs Hyundai:ಮಾರುತಿ ಸುಜುಕಿ ಬ್ರೆಝಾ ಕಳೆದ 2 ತಿಂಗಳುಗಳಿಂದ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಇದೀಗ  ಆ ಸ್ಥಾನಕ್ಕೆ ಟಾಟಾ ಏರಿದೆ. 2023 ರಲ್ಲಿ, ಈ ಟಾಟಾದ ಈ SUVಯನ್ನೇ ಜನರು ಹೆಚ್ಚು ಖರೀದಿಸಿದ್ದು. 

Written by - Ranjitha R K | Last Updated : Apr 19, 2023, 10:29 AM IST
  • ಭಾರತೀಯ ಮಾರುಕಟ್ಟೆಯಲ್ಲಿ SUV ಕಾರುಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ.
  • ವರ್ಷಪೂರ್ತಿ ಪ್ರಾಬಲ್ಯ ಸಾಧಿಸಿದ ಕಾರು
  • ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳು ಏನು ಗೊತ್ತಾ
Maruti, Hyundai ಬೆವರಿಳಿಸಿದ ಟಾಟಾ !  ಈ ಕಾರಿನ ಬುಕಿಂಗ್ ಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು   title=

Tata vs Maruti vs Hyundai : ಭಾರತೀಯ ಮಾರುಕಟ್ಟೆಯಲ್ಲಿ SUV ಕಾರುಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ.   ಮಾರುತಿ ಸುಜುಕಿಯಿಂದ ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈನಂತಹ ಕಂಪನಿಗಳು ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ ನಿರತವಾಗಿವೆ. ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ SUV ಬಗ್ಗೆ ಹೇಳುವುದಾದರೆ,  ಪ್ರಸ್ತುತ ಟಾಟಾ ಮೋಟಾರ್ಸ್‌ನ ವಾಹನವು ಭರ್ಜರಿಯಾಗಿ ಮಾರಾಟವಾಗುತ್ತಿದೆ.  ಈ ನಿಟ್ಟಿನಲ್ಲಿ ಇತರ ಕಂಪನಿಗಳ ನಿದ್ದೆಗೆಡಿಸಿದೆ ಎಂದರೆ ತಪ್ಪಲ್ಲ.  ಮಾರುತಿ ಸುಜುಕಿ ಬ್ರೆಝಾ ಕಳೆದ 2 ತಿಂಗಳುಗಳಿಂದ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಇದೀಗ  ಆ ಸ್ಥಾನಕ್ಕೆ ಟಾಟಾ ಏರಿದೆ. 2023 ರಲ್ಲಿ, ಈ ಟಾಟಾದ ಈ SUVಯನ್ನೇ ಜನರು ಹೆಚ್ಚು ಖರೀದಿಸಿದ್ದು. 

ವರ್ಷಪೂರ್ತಿ ಪ್ರಾಬಲ್ಯ ಸಾಧಿಸಿದ ಕಾರು : 
ಟಾಟಾ ನೆಕ್ಸಾನ್ SUV FY23 ರಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ. ಇಡೀ ವರ್ಷದಲ್ಲಿ 172,139 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ರೀತಿಯಾಗಿ, ಮಾರಾಟದ ವಿಚಾರದಲ್ಲಿ ನೆಕ್ಸಾನ್ 38.68% ರಷ್ಟು ಏರಿಕೆ ದಾಖಲಿಸಿದೆ. ಹ್ಯುಂಡೈ ಕ್ರೆಟಾ ಇಡೀ ಹಣಕಾಸು ವರ್ಷದಲ್ಲಿ 150,372 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಮಾರುತಿ ಸುಜುಕಿ ಬ್ರೆಝಾ 145,665 ಯುನಿಟ್‌ಗಳ ಮಾರಾಟದೊಂದಿಗೆ   ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ : TATA: ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಿದೆ TATAದ ಹೊಸ 7 ಸೀಟರ್ ಕಾರು: ಇದರ ವೈಶಿಷ್ಟ್ಯ ಅದ್ಭುತವೋ ಅದ್ಭುತ

ಬೆಲೆ ಮತ್ತು ವೈಶಿಷ್ಟ್ಯಗಳು :
ಟಾಟಾ ನೆಕ್ಸಾನ್ ಎಸ್‌ಯುವಿ ಬೆಲೆಯು 7.79 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಟಾಪ್ ಮಾಡೆಲ್‌ ಬೆಲೆ 14.35 ಲಕ್ಷಕ್ಕೆ ಏರುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಹಲವಾರು ರೂಪಾಂತರಗಳಲ್ಲಿ ಲಭ್ಯವಿದೆ. ಪೆಟ್ರೋಲ್ ರೂಪಾಂತರವು 1.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಇದು 118bhp ಪವರ್ ಮತ್ತು 170Nm ಟಾರ್ಕ್ ಅನ್ನು  ಜನರೇಟ್ ಮಾಡುತ್ತದೆ. ಇದರ ಡೀಸೆಲ್ ರೂಪಾಂತರವು 1.5 ಲೀಟರ್ ಎಂಜಿನ್ ಅನ್ನು ಹೊಂದಿದೆ. ಇದು 108bhp ಪವರ್ ಮತ್ತು 260Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಇದರೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡಲಾಗಿದೆ. 

ವಾಹನವು ಹೊಸ ಸ್ಟೀರಿಂಗ್ ವ್ಹೀಲ್ ನೊಂದಿಗೆ ಬರುತ್ತದೆ. ಮಲ್ಟಿಮೀಡಿಯಾ ಮತ್ತು ಕ್ರೂಸ್ ಕಂಟ್ರೋಲ್ ಬಟನ್ ಜೊತೆಗೆ ಸಣ್ಣ ಹಾರ್ನ್ ಪ್ಯಾಡ್ ಅನ್ನು ಹೊಂದಿದೆ. ಇದಲ್ಲದೆ, ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಕೂಡಾ ಹೊಂದಿದೆ. ಕಾರು 6 ವಿವಿಧ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದ್ದು, ಫೈವ್ ಸೀಟರ್ ಸಾಮರ್ಥ್ಯವನ್ನು ಹೊಂದಿದೆ. 

ಇದನ್ನೂ ಓದಿ : Apple Store: ದೇಶದ ಮೊದಲ ಆ್ಯಪಲ್ ಸ್ಟೋರ್ ಮುಂಬೈಯಲ್ಲಿ ಆರಂಭ - ಇದರ ವಿಶೇಷತೇನು ನೋಡೋಣ ..!

ಮಾರ್ಚ್ ತಿಂಗಳಲ್ಲಿ ಟಾಟಾ ನೆಕ್ಸಾನ್ 14,769 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಅತಿ ಹೆಚ್ಚು ಮಾರಾಟವಾದ SUV ಆಗಿದೆ. ಆದರೆ 16,227 ಯುನಿಟ್‌ಗಳನ್ನು ಮಾರಾಟ ಮಾಡುವ ಮಾರುತಿ ಬ್ರೆಝಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 14026 ಯುನಿಟ್‌ಗಳನ್ನು ಮಾರಾಟ ಮಾಡಿದ ಹುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News