ಮಧುಮೇಹಕ್ಕೆ ಸಂಜೀವಿನಿ ಈ ಎಲೆ! ಬೆಳಗಿನ ಜಾವ ಮೂರು ಎಸಳು ತಿಂದ್ರೆ ಮತ್ತೇ ಯಾವತ್ತೂ ಹೆಚ್ಚಾಗಲ್ಲ ಶುಗರ್!!‌

Neem Leaves Control High Blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ರೋಗವು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಕಷ್ಟ.

1 /6

ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಆದರೆ ಬೇವಿನ ಸೊಪ್ಪಿನ ಸೇವನೆಯಿಂದ ಮಧುಮೇಹವನ್ನು ಹತೋಟಿಯಲ್ಲಿಡಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.  

2 /6

ಬೇವಿನ ಸೊಪ್ಪಿನ ಸೇವನೆಯಿಂದ ಅನೇಕ ರೋಗಗಳು ಗುಣವಾಗುತ್ತವೆ. ಬೇವಿನ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.. ಮಧುಮೇಹಿಗಳು ಬೇವು ಹೇಗೆ ತಿನ್ನಬೇಕು..ಎಷ್ಟು ತಿನ್ನಬೇಕು.. ಈಗ ತಿಳಿಯಿರಿ.  

3 /6

ಮಧುಮೇಹಿಗಳು ಬೇವಿನ ಎಲೆಗಳನ್ನು ಬೆಳಿಗ್ಗೆ ತೆಗೆದುಕೊಳ್ಳಬೇಕು. ಮೊದಲು 6 ಎಲೆಗಳನ್ನು ತೆಗೆದುಕೊಂಡು ತೊಳೆಯಿರಿ. ನಂತರ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಅಗಿಯಿರಿ. ಹೀಗೆ ಮಾಡುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.   

4 /6

ಬೇವಿನ ಸೊಪ್ಪನ್ನು ಕುದಿಸಿ ಕುಡಿಯುವುದರಿಂದ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಮೊದಲು ಒಂದು ಲೋಟ ನೀರಿನಲ್ಲಿ ಬೇವಿನ ಎಲೆಗಳನ್ನು ಕುದಿಸಿ. ನೀರು ಅರ್ಧ ಆದಾಗ ಸೋಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ದೇಹವೂ ಆರೋಗ್ಯಕರವಾಗಿರುತ್ತದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.  

5 /6

ಮಧುಮೇಹ ನಿಯಂತ್ರಣಕ್ಕೆ.. 6 ಬೇವಿನ ಎಲೆಗಳನ್ನು ಪುಡಿಮಾಡಿ ಈ ಎಲೆಗಳ ರಸವನ್ನು ತೆಗೆದುಕೊಳ್ಳಿ. ಈ ಜ್ಯೂಸ್ ಕುಡಿಯುವುದರಿಂದ ಶುಗರ್ ಲೆವೆಲ್ ನಿಯಂತ್ರಣದಲ್ಲಿರುತ್ತದೆ. ಅನೇಕ ರೋಗಗಳನ್ನು ಗುಣಪಡಿಸಬಹುದು.   

6 /6

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.