ಗೀಸರ್ ನ ಗ್ಯಾಸ್ ಸಾವಿಗೆ ಕಾರಣವಾದೀತು.! ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ .!

Death from Geyser Gas :ಬಾತ್ ರೂಂನಲ್ಲಿದ್ದ ಗೀಸರ್ ತೆರೆದುಕೊಂಡಿದ್ದು, ಇದರಿಂದ ಬಾತ್ ರೂಂ ಪೂರ್ತಿ ಗ್ಯಾಸ್ ತುಂಬಿಕೊಂಡಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ರುಚಾ ಸಾವನ್ನಪ್ಪಿದ್ದಾನೆ. 

Written by - Ranjitha R K | Last Updated : Nov 18, 2022, 12:56 PM IST
  • ಸ್ನಾನದ ಮನೆಯಲ್ಲಿ ಉಸಿರುಗಟ್ಟಿ ಮಹಿಳೆ ಸಾವು
  • ಗೀಸರ್ ಗ್ಯಾಸ್ ನಿಂದ ಮಹಿಳೆ ಸಾವು
  • ಗೀಸರ್ ಖರೀದಿಸುವ ಮೊದಲು ಈ ವಿಷಯಗಳನ್ನು ತಿಳಿದಿರಬೇಕು
ಗೀಸರ್ ನ ಗ್ಯಾಸ್ ಸಾವಿಗೆ ಕಾರಣವಾದೀತು.! ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ .! title=
Water Heater Safety Tips

Death from Geyser Gas : ಹರಿಯಾಣದ ಫರಿದಾಬಾದ್‌ ಹೋಟೆಲ್ ವೊಂದರ ಜನರಲ್ ಮ್ಯಾನೇಜರ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ನಾನಕ್ಕೆಂದು ಹೋದವರು ಬಹಲ್ ಹೊತ್ತಾದರೂ ಹೊರ ಬರಲೇ ಇಲ್ಲ. ಹೊರಗಿನಿನದ ಎಷ್ಟು ಕೂಗಿ ಕರೆದರೂ ಸ್ಪಂದಿಸಲಿಲ್ಲ. ನಂತರ ಅನುಮಾನಗೊಂಡ ಮನೆಯವರು ಸ್ನಾನದ ಮನೆಯ ಬಾಗಿಲು ಮುರಿದಿದ್ದಾರೆ. ಈ ವೇಳೆ, ರುಚಾ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. 

ಬಾತ್ ರೂಂನಲ್ಲಿದ್ದ ಗೀಸರ್ ತೆರೆದುಕೊಂಡಿದ್ದು, ಇದರಿಂದ ಬಾತ್ ರೂಂ ಪೂರ್ತಿ ಗ್ಯಾಸ್ ತುಂಬಿಕೊಂಡಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ರುಚಾ ಸಾವನ್ನಪ್ಪಿದ್ದಾನೆ. ಈ ಘಟನೆ ಯಾರೊಂದಿಗೆ ಬೇಕಾದರೂ ಘಟಿಸಬಹುದು. ಒಂದು ವೇಳೆ ನೀವು ಈ ಸ್ಥಿತಿಯಲ್ಲಿ ಸಿಲುಕಿಕೊಂಡರೆ,   ಅಪಾಯದಿನದ್ ತಪ್ಪಿಸಿಕೊಳ್ಳುವ ಮಾರ್ಗವೂ ತಿಳಿದಿರಬೇಕು. 

ಇದನ್ನೂ ಓದಿ : ಎಲೋನ್ ಟ್ವೀಟ್ ಬೆನ್ನಲ್ಲೇ ಟ್ರೆಂಡಿಂಗ್ ಆಯ್ತು ‘RIP Twitter’ ಹ್ಯಾಷ್ ಟ್ಯಾಗ್: ಏನಿದು ಹೊಸ ವಿವಾದ?

ಗೀಸರ್ ಖರೀದಿಸುವ ಮೊದಲು ಈ ವಿಷಯಗಳನ್ನು ತಿಳಿದಿರಬೇಕು :
1. ಮನೆಯ ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಅಳವಡಿಸಿದರೆ ಗಾಳಿಯ ಚಲನೆಗೆ ಸಾಕಷ್ಟು ವ್ಯವಸ್ಥೆ ಇರಬೇಕು ಎನ್ನುತ್ತಾರೆ ತಜ್ಞರು. ISI ಗುರುತು ಹೊಂದಿರುವ ಪ್ರತಿಷ್ಠಿತ ಕಂಪನಿಯ ದೊಡ್ಡ ಅಥವಾ ಚಿಕ್ಕ ಗೀಸರ್ ಅನ್ನು ಮಾತ್ರ ಬಳಸಿ. 

2. ಗೀಸರ್ ಅನ್ನು ಹೆಚ್ಚು ಹೊತ್ತು ಆನ್ ಇಡಬೇಡಿ. ಗ್ಯಾಸ್ ಗೀಸರ್  ಆಗಿದ್ದರೆ ಅದರಲ್ಲಿ ಎಲ್.ಪಿ.ಜಿ. ಬಳಸಲಾಗುತ್ತದೆ. ಈ ಗೀಸರ್‌ಗಳು ಅಪಾಯಕಾರಿ ಇಂಗಾಲದ ಮಾನಾಕ್ಸೈಡ್ ಮತ್ತು ನೈಟ್ರೋ ಆಕ್ಸೈಡ್ ಅನ್ನು ಉತ್ಪಾದಿಸುತ್ತವೆ. ಈ ಅನಿಲದ ಪ್ರಮಾಣ ಹೆಚ್ಚಾದರೆ, ಜನ  ಮೂರ್ಛೆ ಹೋಗಬಹುದು. ಇಂಥ ಪರುಇಸ್ಥಿತಿಯಲ್ಲಿ ಸ್ನಾನದ ಮನೆಯ ಬಾಗಿಲು ಮುಚ್ಚಿದ್ದು, ಗೀಸರ್ ದೀರ್ಘಕಾಲದವರೆಗೆ  ಆನ್ ಆಗಿದ್ದರೆ, ಅದು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. 

ಇದನ್ನೂ ಓದಿ : ಒಮ್ಮೆ ರೀಚಾರ್ಜ್ ಮಾಡಿದರೆ 84 ದಿನಗಳವರೆಗೆ ಚಿಂತೆ ಇಲ್ಲ.! ಏರ್ಟೆಲ್ ತಂದಿದೆ 84 Days Plan

ಗ್ಯಾಸ್ ಗೀಸರ್ ಇದ್ದರೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ : 
1. ಗ್ಯಾಸ್ ಗೀಸರ್ ಅಳವಡಿಸಿದ್ದರೆ, ಗೀಸರ್ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಸ್ನಾನದ ಮನೆಯ ಹೊರಗೆ ಇರಿಸಿ. 
2.  ಸ್ನಾನದ ಮನೆಯ ಬಾಗಿಲು ಹಾಕುವ ಮುನ್ನ ಬಕೆಟ್ ಅನ್ನು ಬಿಸಿ ನೀರಿನಿಂದ ತುಂಬಿಕೊಳ್ಳಿ. 
3. ಬಾತ್ರೂಮ್ನಲ್ಲಿ ಗಾಳಿಯ ಚಲನೆಯ ವ್ಯವಸ್ಥೆ ಇರಬೇಕು.
4. ಸ್ನಾನ ಮಾಡಿದ ನಂತರ ಸ್ವಲ್ಪ ಸಮಯದವರೆಗೆ ಬಾತ್ರೂಮ್ ಬಾಗಿಲು ತೆರೆದಿಡಿ. 
5. ಅನೇಕ ಜನರು ಒಬ್ಬರ ನಂತರ ಒಬ್ಬರು ಸ್ನಾನ ಮಾಡುವುದರಿಂದ ಬಾತ್ರೂಮಿನಲ್ಲಿ ಕಾರ್ಬನ್ ಮಾನಾಕ್ಸೈಡ್ ಶೇಖರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕಾರ್ಬನ್ ಮಾನಾಕ್ಸೈಡ್ ಏಕೆ ಅಪಾಯಕಾರಿ? :
ಈ ಅನಿಲವು ವ್ಯಕ್ತಿಯನ್ನು ಪ್ರಜ್ಞಾಹೀನರನ್ನಾಗಿ ಮಾಡುತ್ತದೆ ಮತ್ತು ಮನಸ್ಸು ಕೋಮಾದಂತಹ ಸ್ಥಿತಿಗೆ ಹೋಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಅನಿಲವು ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕೆಂಪು ರಕ್ತ ಕಣಗಳ ಮೇಲೆ ದಾಳಿ ಮಾಡುತ್ತದೆ. ನಾವು ಉಸಿರಾಡುವಾಗ, ಹಿಮೋಗ್ಲೋಬಿನ್ ಆಮ್ಲಜನಕದೊಂದಿಗೆ ಬೆರೆಯುತ್ತದೆ. ಇದರ ಸಹಾಯದಿಂದ, ಆಮ್ಲಜನಕವು ಶ್ವಾಸಕೋಶದ ಮೂಲಕ ದೇಹದ ಉಳಿದ ಭಾಗಗಳಿಗೆ ಹಾದುಹೋಗುತ್ತದೆ. ಆಮ್ಲಜನಕ ಪೂರೈಕೆ ವ್ಯವಸ್ಥೆಯ ಮೇಲೆ  ಪರಿಣಾಮ ಬೀರಿದಾಗ, ಹೃದಯ ಬಡಿತದಲ್ಲಿ ಹೆಚ್ಚಳ, ಕಡಿಮೆ ದೇಹದ ಉಷ್ಣತೆ, ವಾಂತಿ, ಕಡಿಮೆ ರಕ್ತದೊತ್ತಡ, ವಾಕರಿಕೆ, ಹೆದರಿಕೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಎದುರಾಗುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News