ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!

Google: ಟೆಕ್ ದೈತ್ಯ ಗೂಗಲ್ ತನ್ನ ಫೋನ್ ಅಪ್ಲಿಕೇಶನ್‌ನಲ್ಲಿ "ಆಡಿಯೋ ಎಮೋಜಿ" ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಫೋನ್ ಕರೆಗಳು ಇನ್ನಷ್ಟು ಮೋಜು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. 

Written by - Yashaswini V | Last Updated : May 2, 2024, 10:57 AM IST
  • ಆಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಹೊಸ "ಆಡಿಯೋ ಎಮೋಜಿ" ಅನ್ನು ಪರಿಚಯಿಸುತ್ತಿದೆ.
  • ಇದರ ಸಹಾಯದಿಂಡ್ ಆಂಡ್ರಾಯ್ಡ್ ಬಳಕೆದಾರರು ಫೋನ್ ಕರೆ ಸಮಯದಲ್ಲಿ ಆರು ರೀತಿಯ ಧ್ವನಿಗಳನ್ನು ಪ್ಲೇ ಮಾಡಬಹುದು.
  • ಈ ಶಬ್ದಗಳು ದುಃಖ, ಚಪ್ಪಾಳೆ, ಸಂಭ್ರಮಾಚರಣೆ, ನಗು, ಡ್ರಮ್ ರೋಲ್ ಮತ್ತು ಪೂಪ್ ರೀತಿ ಇರುತ್ತದೆ ಎಂದು ತಿಳಿಸಿದೆ.
ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ! title=

Google Update: ಎಷ್ಟೇ ದೂರದಲ್ಲಿದ್ದರೂ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧನವಾಗಿ ಫೋನ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಫೋನ್ ಸಂಭಾಷಣೆಯನ್ನು ಮತ್ತಷ್ಟು ಆನಂದದಾಯಕವಾಗಿಸಲು ಗೂಗಲ್ ತನ್ನ ಫೋನ್ ಅಪ್ಲಿಕೇಶನ್‌ನಲ್ಲಿ "ಆಡಿಯೋ ಎಮೋಜಿ" ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ.

ಈ ಕುರಿತಂತೆ 9to5Google ವರದಿ ಮಾಡಿದ್ದು,  ಆಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ (Google) ಹೊಸ "ಆಡಿಯೋ ಎಮೋಜಿ" ಅನ್ನು ಪರಿಚಯಿಸುತ್ತಿದೆ. ಇದರ ಸಹಾಯದಿಂಡ್ ಆಂಡ್ರಾಯ್ಡ್ ಬಳಕೆದಾರರು ಫೋನ್ ಕರೆ ಸಮಯದಲ್ಲಿ ಆರು ರೀತಿಯ ಧ್ವನಿಗಳನ್ನು ಪ್ಲೇ ಮಾಡಬಹುದು. ಈ ಶಬ್ದಗಳು ದುಃಖ, ಚಪ್ಪಾಳೆ, ಸಂಭ್ರಮಾಚರಣೆ, ನಗು, ಡ್ರಮ್ ರೋಲ್ ಮತ್ತು ಪೂಪ್ ರೀತಿ ಇರುತ್ತದೆ ಎಂದು ತಿಳಿಸಿದೆ. 

ಗಮನಾರ್ಹವಾಗಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ "ಆಡಿಯೋ ಎಮೋಜಿ" (Audio Emoji) ವೈಶಿಷ್ಟ್ಯವನ್ನು ಮೊದಮೊದಲು  "ಸೌಂಡ್ ರಿಯಾಕ್ಷನ್" ಎಂದು ಕರೆಯಲಾಗುತ್ತಿತ್ತು. 

ಇದನ್ನೂ ಓದಿ- ಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದು

ಲಭ್ಯವಿರುವ ಮಾಹಿತಿಯ ಪ್ರಕಾರ, ಇದೀಗ ಗೂಗಲ್ ಹೊಸ ವೈಶಿಷ್ಟ್ಯವು ಗೂಗಲ್ ಫೋನ್ ಅಪ್ಲಿಕೇಶನ್‌ನ (Google Phone App) ಪರೀಕ್ಷಾ ಆವೃತ್ತಿಯಲ್ಲಿ (ಆವೃತ್ತಿ 128) ಚಾಲನೆಯಲ್ಲಿದೆ. ಶೀಘ್ರದಲ್ಲೇ, ಬಳಕೆದಾರರಿಗೆ ಈ ವೈಶಿಷ್ಟ್ಯ ಲಾಭವಾಗುವ ಸಾಧ್ಯತೆ ಇದೆ. ಇದರಲ್ಲಿ ಬಳಕೆದಾರರು ಯಾವುದೇ ಧ್ವನಿ ಎಮೋಜಿಯನ್ನು ಪ್ಲೇ ಮಾಡಿದಾಗ, ಪರದೆಯ ಮೇಲೆ ಸಣ್ಣ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಈ ಅನಿಮೇಷನ್ ಅನ್ನು ಕರೆ ಮಾಡುವವರು ಮತ್ತು ಕೇಳುವವರು ಇಬ್ಬರೂ ನೋಡಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದಾಗ್ಯೂ, ಧ್ವನಿ ಕರೆಯನ್ನು ಕರೆ ಮಾಡುವವರು ಮತ್ತು ಕರೆ ಸ್ವೀಕರಿಸುವವರಿಬ್ಬರೂ ಆನಂದಿಸಬಹುದು ಎಂದು ತಿಳಿದುಬಂದಿದೆ. 

ಆಡಿಯೊ ಎಮೋಜಿಯನ್ನು ಹೇಗೆ ಬಳಸುವುದು? 
ಈ ವೈಶಿಷ್ಟ್ಯವು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು ಪ್ರಾಯೋಗಿಕ ಬಳಕೆದಾರರಿಗಷ್ಟೇ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಿ.... 
* ಮೊದಲಿಗೆ ಫೋನ್ ಸೆಟ್ಟಿಂಗ್‌ಗಳನ್ನು ತೆರೆಯಿರಿ.
* ಸ್ಕ್ರಾಲ್ ಡೌನ್ ಮಾಡಿ ಇದರಲ್ಲಿಸಾಮಾನ್ಯ ವಿಭಾಗಕ್ಕೆ ಹೋಗಿ. 
* ಇದರಲ್ಲಿ ಕಾಣುವ  "ಆಡಿಯೋ ಎಮೋಜಿಗಳು" ಮೇಲೆ ಟ್ಯಾಪ್ ಮಾಡಿ.
*  "ಆಡಿಯೋ ಎಮೋಜಿಗಳ" ವೈಶಿಷ್ಟ್ಯವನ್ನು ಬಳಸಲು ಸ್ವಿಚ್ ಆನ್ ಆಯ್ಕೆಯನ್ನು ಆರಿಸಿ. 

ಇದನ್ನೂ ಓದಿ- ಬಿರು ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಇಂದೇ ತನ್ನಿ ಕೂಲರ್ ಫ್ಯಾನ್

ಒಮ್ಮೆ "ಆಡಿಯೋ ಎಮೋಜಿಗಳ" ವೈಶಿಷ್ಟ್ಯವನ್ನು ಆನ್ ಮಾಡಿದ ಬಳಿಕ ನೀವು ಕರೆ ಮಾಡುವಾಗ ಪರದೆಯ ಮೇಲೆ ತೇಲುವ ಬಟನ್ ಕಾಣಿಸಿಕೊಳ್ಳುತ್ತದೆ. ಅದು ನಿಮಗೆ ಧ್ವನಿ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. 

ಇದರಲ್ಲಿ 'ಆಡಿಯೋ ಎಮೋಜಿಯನ್ನು ಪ್ರಯತ್ನಿಸಿ' ಎಂಬ ಆಯ್ಕೆಯನ್ನು ಆರಿಸಿ ಅದರಲ್ಲಿ ಗೋಚರಿಸುವ ಯಾವುದೇ ಎಮೋಜಿಗಳನ್ನು ಆಯ್ಕೆ ಮಾಡಿ. ಈ ವೈಶಿಷ್ಟ್ಯವು ಸ್ಪೀಕರ್ ಮೋಡ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News