Alert! WhatsApp ಮೇಲೆ ಈ KBC ಸಂದೇಶ ನಿಮಗೂ ಬಂದಿದೆಯೇ, ತಕ್ಷಣ ಎಚ್ಚೆತ್ತುಕೊಳ್ಳಿ ಇಲ್ದಿದ್ರೆ ...?

WhatsApp Latest News - ಮೆಸೇಜಿಂಗ್ ಆಪ್ WhatsApp ನಲ್ಲಿ WhatsApp KBC Scam ಎಂಬ ಹೊಸ ಹಗರಣವು ಪತ್ತೆಯಾಗಿದೆ. ಇದರಲ್ಲಿ ಬಳಕೆದಾರರು ಕೌನ್ ಬನೇಗಾ ಕರೋಡ್ಪತಿಯ ತಂಡದಿಂದ (KBC Team) ಸಂದೇಶವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ  ಅದೊಂದು ರೀತಿಯ ವಂಚನೆಯ ಸಂದೇಶವಾಗಿದ್ದು, ಟ್ರ್ಯಾಪ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಲಾಗುತ್ತಿದೆ.

Written by - Nitin Tabib | Last Updated : Dec 20, 2021, 02:27 PM IST
  • Whatsapp ನಲ್ಲಿ ಹೊಸ KBC ಸ್ಕ್ಯಾಮ್.
  • ಕೆಬಿಸಿ ಹೆಸರಿನಲ್ಲಿ ಬರುತ್ತಿವೆ ವಂಚಕರ ಸಂದೇಶಗಳು
  • ಬ್ಯಾಂಕ್‌ನಿಂದ ಲಕ್ಷಾಂತರ ರೂ. ಲಪಟಾಯಿಸಲಾಗುತ್ತಿದೆ.
Alert! WhatsApp ಮೇಲೆ ಈ KBC ಸಂದೇಶ ನಿಮಗೂ ಬಂದಿದೆಯೇ, ತಕ್ಷಣ ಎಚ್ಚೆತ್ತುಕೊಳ್ಳಿ ಇಲ್ದಿದ್ರೆ ...? title=
WhatsApp Latest News (File Photo)

ನವದೆಹಲಿ: WhatsApp KBC Scam - ಇತ್ತೀಚೆಗೆ, ಸಾಮಾಜಿಕ ಜಾಲತಾಣ ಮತ್ತು ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ WhatsApp ವಿಶ್ವದ ಅತ್ಯಂತ ಜನಪ್ರಿಯ ವೇದಿಕೆಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಎಷ್ಟು ಅನುಕೂಲಕರವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಂ (Cyber Scrime) ಪ್ರಕರಣಗಳ ಕುರಿತು ಅಧ್ಯಯನ ನಡೆಸಲಾಗಿ, ಬಹುತೇಕ ವಂಚಕರು ವಾಟ್ಸಾಪ್ ಅನ್ನು ಸೈಬರ್ ಕಳ್ಳತನದ (Cyber Security) ಸಾಧನವನ್ನಾಗಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದೆ ಹಿನ್ನೆಲೆ ಇತ್ತೀಚೆಗೆ, ಹೊಸ ವಾಟ್ಸಾಪ್ ಕೆಬಿಸಿ ಹಗರಣವೊಂದು ಬೆಳಕಿಗೆ ಬಂದಿದೆ, ಇದರಲ್ಲಿ ಕಳ್ಳರು ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ (KBC Message) ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ ಮತ್ತು ಅವರ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

WhatsApp ನ KBC ಹಗರಣ ಎಂದರೇನು?
ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಹಗರಣ ಹೆಸರಿನಡಿ WhatsApp ನಲ್ಲಿ ಹೊಸ ಹಗರಣ ನಡೆಯುತ್ತಿದೆ. ಈ ಹಗರಣದಲ್ಲಿ, ವಾಟ್ಸಾಪ್ ಬಳಕೆದಾರರು 'ಕೆಬಿಸಿ' ತಂಡದಿಂದ ಸಂದೇಶವನ್ನು ಪಡೆಯುತ್ತಾರೆ, ಸಂದೇಶದ ಪ್ರಕಾರ ಅವರು ಲಕ್ಕಿ ಡ್ರಾದಲ್ಲಿ 25 ಲಕ್ಷ ರೂಪಾಯಿಗಳ ಬಹುಮಾನವನ್ನು ಗೆದ್ದಿದ್ದಾರೆ. ಸಂದೇಶದಲ್ಲಿ ಲಿಂಕ್ ಅನ್ನು ಸಹ ನೀಡಲಾಗಿದೆ ಮತ್ತು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಬಳಕೆದಾರರು ನೇರವಾಗಿ ಕೆಬಿಸಿ ಕಚೇರಿಗೆ ಸಂಪರ್ಕಿಸಲು ಮತ್ತು ನಂತರ ಅವರ ಬಹುಮಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.

ನಿಮಗೂ ಈ ಸಂದೇಶ ಬಂದಿದೆಯಾ?
ಯಾವ ರೀತಿಯ ಸಂದೇಶ ನಿಮಗೆ ಬರುತ್ತದೆ ಎಂದು ನೀವೂ ಯೋಚಿಸುತ್ತಿರುವಿರಾ? ಹಾಗಾದರೆ ಕೇಳಿ, ನಿಮ್ಮ ವಾಟ್ಸ್ ಆಪ್ ಖಾತೆಗೆ 'ಕೆಬಿಸಿ ತಂಡ' ಎಂದು ಹೇಳಿಕೊಳ್ಳುವ ಖಾತೆಯಿಂದ ಸಂದೇಶ ಬರಲಿದೆ. ಅದು "ಹಲೋ, ನಾನು ಕೌನ್ ಬನೇಗಾ ಕರೋಡ್ಪತಿ, ಮುಂಬೈನಿಂದ ವಿಜಯ್ ಕುಮಾರ್ ಮಾತನಾಡುತ್ತಿದ್ದೇನೆ. ಕೆಬಿಸಿಯ ಸಿಮ್ ಕಾರ್ಡ್ ಲಕ್ಕಿ ಡ್ರಾ ಸ್ಪರ್ಧೆ 2021 ರಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡಿದೆ ಮತ್ತು ನೀವು ರೂ.25 ಲಕ್ಷಗಳ ನಗದು ಬಹುಮಾನವನ್ನು ಗಿದ್ದಿರುವಿರಿ. ಈ ಸಂದೇಶದಲ್ಲಿ, ಲಿಂಕ್ ಅನ್ನು ಕೊನೆಯಲ್ಲಿ ನೀಡಲಾಗಿದೆ, ಇದಕ್ಕಾಗಿ ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನೀವು ನೇರವಾಗಿ ಕೆಬಿಸಿ ಕಚೇರಿಯೊಂದಿಗೆ ಮಾತನಾಡಲು ಮತ್ತು ನಿಮ್ಮ ನಗದು ಬಹುಮಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಬರೆಯಲಾಗಿರುತ್ತದೆ. 

ಇದನ್ನೂ ಓದಿ-Xiaomi Christmas Sale: ಕೇವಲ 899 ರೂ.ಗೆ 5G ಫೋನ್ ಖರೀದಿಸಿ; ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್‌ಗಳ ಮೇಲೂ ಭಾರಿ ರಿಯಾಯಿತಿ

ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಏನಾಗುತ್ತದೆ
ನಿಮಗೂ ಕೂಡ ಈ ರೀತಿಯ ಸಂದೇಶ ಬಂದಿದ್ದು ಮತ್ತು ಅದರಲ್ಲಿ ನೀಡಲಾದ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿ, ನೀವು ಯಾರೊಂದಿಗಾದರೂ ಮಾತನಾಡಿದರೆ, ಆ ವ್ಯಕ್ತಿಗಳು, ನಿಜವಾಗಿ ವಂಚಕರಾಗಿದ್ದು, ನಿಮಗೆ ಕೆಲವು ತಪ್ಪು ನಿಯಮಗಳನ್ನು ವಿವರಿಸಿ ನಿಮ್ಮ ಖಾತೆಯ ವಿವರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಆ ವಿವರಗಳನ್ನು ನಿಮ್ಮ ಖಾತೆಯಿಂದ ಹಣ ಲಪಟಾಯಿಸಲು ಬಳಸುತ್ತಾರೆ.

ಇದನ್ನೂ ಓದಿ-Amazon Prime vs Disney+ Hotstar vs Netflix: ಮನರಂಜನೆಗಾಗಿ ಯಾವ ಯೋಜನೆ ಬೆಸ್ಟ್, ಇಲ್ಲಿದೆ ಮಾಹಿತಿ

ಸೈಬರ್ ಸೆಲ್ ಕೂಡ ಇಂತಹ ಸಂದೇಶಗಳು ಕೇವಲ ನೆಪಗಳಾಗಿದ್ದು, ಇವುಗಳಿಗೆ ಸಿಕ್ಕಿಹಾಕಿಕೊಳ್ಳಬೇಡಿ ಮತ್ತು ಅಂತಹ ಯಾವುದೇ ಸಂದೇಶ ಬಂದರೆ ಎರಡು ಬಾರಿ ಯೋಚಿಸಿ ನಂತರವೇ ಯಾವುದೇ ಕ್ರಮ ಕೈಗೊಳ್ಳಿ ಎಂದು ಜನರಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ-ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು: ಕೇವಲ 50 ಪೈಸೆಗೆ 1 ಕೀಮಿ ಮೈಲೇಜ್ ನೀಡುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News