Alert:30 ದಿನಗಳ ನಂತರ ಈ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ WhatsApp!ನಿಮ್ಮ ಬಳಿ ಇರುವ ಫೋನ್ ಯಾವುದು ?

ಈ ಸ್ಮಾರ್ಟ್‌ಫೋನ್‌ಗಳಿಗೆ  ಸಪೋರ್ಟ್ ಮಾಡುವುದನ್ನು ನಿಲ್ಲಿಸುವುದಾಗಿ WhatsApp ಇತ್ತೀಚೆಗೆ ಘೋಷಿಸಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುಡು ಸಾಧ್ಯವಾಗುವುದಿಲ್ಲ. 

Written by - Ranjitha R K | Last Updated : Sep 25, 2023, 02:01 PM IST
  • ಹೊಸ ಅಪ್ಡೇಟ್ ಗಳನ್ನು ತರುತ್ತಿರುವ ವಾಟ್ಸಾಪ್
  • ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ WhatsApp ಸಪೋರ್ಟ್ ಮಾಡುವುದಿಲ್ಲ
  • ಈ Android ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ
Alert:30 ದಿನಗಳ ನಂತರ ಈ ಫೋನ್ ಗಳಲ್ಲಿ  ಕಾರ್ಯ ನಿರ್ವಹಿಸುವುದಿಲ್ಲ WhatsApp!ನಿಮ್ಮ ಬಳಿ ಇರುವ ಫೋನ್ ಯಾವುದು ?  title=

ಬೆಂಗಳೂರು : ಬಳಕೆದಾರರ ಅನುಭವ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು WhatsApp ಹೊಸ ಅಪ್ಡೇಟ್ ಗಳನ್ನು ತರುತ್ತಿದೆ. Android, iOS ಮತ್ತು Web ಸೇರಿದಂತೆ ಎಲ್ಲಾ WhatsApp ಆವೃತ್ತಿಗಳು ಬಹುತೇಕ ಪ್ರತಿ ತಿಂಗಳು ಹೊಸ ಸಿಸ್ಟಮ್ ಅಪ್ಡೇಟ್ ಗಳನ್ನೂ ಸ್ವೀಕರಿಸುತ್ತವೆ. ಹೀಗಾದಾಗ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ WhatsApp ಸಪೋರ್ಟ್ ಮಾಡುವುದಿಲ್ಲ. 

ಇದು ಕಂಪನಿಯು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಳಕೆದಾರರಿಗೆ ಅತ್ಯಂತ ಸುರಕ್ಷಿತ ಮತ್ತು ನವೀಕೃತ ಅನುಭವವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ ಓಎಸ್ ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಿಗೆ  ಸಪೋರ್ಟ್ ಮಾಡುವುದನ್ನು ನಿಲ್ಲಿಸುವುದಾಗಿ WhatsApp ಇತ್ತೀಚೆಗೆ ಘೋಷಿಸಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಮತ್ತೆ ಬಂತು ಮೆಗಾ ಡಿಸ್ಕೌಂಟ್ ಸೇಲ್ ! ಸಿಗುವುದು 80 ಶೇ. ಡಿಸ್ಕೌಂಟ್ ! iPhone,laptop, ಫೋನ್ ಎಲ್ಲವೂ ಇಲ್ಲಿ ಅಗ್ಗ!

ಈ Android ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ : 
Nexus 7  (upgradable to Android 4.2)
Samsung Galaxy Note 2
HTC One
Sony Xperia Z
LG Optimus G Pro Samsung
Galaxy S2
Samsung Galaxy Nexus
HTC Sensation
Motorola Droid Razr
Sony Xperia S2
Motorola Xoom
Samsung Galaxy Tab 10.1 
Asia Samsung Galaxy Tab 10.1
Asus Eee Pad Transformer
Acer Iconia Tab A5003
Samsung Galaxy S
HTC Desire HD
LG Optimus 2X
Sony Ericsson Xperia Arc3

ನಿಮ್ಮ ಬಳಿ ಕೂಡಾ ಮೇಲೆ ಪಟ್ಟಿಯಲ್ಲಿ ಹೇಳಲಾದ ಫೋನ್ ಇದ್ದಲ್ಲಿ ಅದನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಹಳೆಯ ಫೋನ್‌ಗಳು ಸಾಮಾನ್ಯವಾಗಿ ಹೊಸ ಅಪ್ಲಿಕೇಶನ್‌ಗಳು ಮತ್ತು ಸೆಕ್ಯೂರಿಟಿ ಅಪ್ಡೇಟ್ ಗಳಿಗೆ ಸಪೋರ್ಟ್ ಮಾಡುವುದಿಲ್ಲ. ಹೀಗಾಗಿ ಫೋನ್ ಸುರಕ್ಷಿತವಾಗಿ ಇರುವುದಿಲ್ಲ ಮಾತ್ರವಲ್ಲ ಬಳಸಲು ಹೆಚ್ಚು ಅನುಕೂಲಕರವಾಗಿರುವುದಿಲ್ಲ. 

ಇದನ್ನೂ ಓದಿ : ಶುಕ್ರ ಗ್ರಹದ ರಹಸ್ಯಗಳನ್ನು ಅನಾವರಣಗೊಳಿಸಲಿದೆ ಇಸ್ರೋದ ಮಹತ್ವಾಕಾಂಕ್ಷಿ ಶುಕ್ರಯಾನ-1

ಈ ರೀತಿ ಪರಿಶೀಲಿಸಿಕೊಳ್ಳಿ : 
ನಿಮ್ಮ ಸ್ಮಾರ್ಟ್‌ಫೋನ್ Android OS ಆವೃತ್ತಿ 4.1 ಮತ್ತು ಹಳೆಯದರಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂದು ನಿಮಗೆ ತಿಳಿದಿಲ್ಲವಾದರೆ ನಿಮ್ಮ ಫೋನ್ ಸೆಟ್ಟಿಂಗ್‌ಗಳ ಮೆನುಗೆ ಹೋಗುವ ಮೂಲಕ ಪರಿಶೀಲಿಸಿ ನೋಡಬಹುದು. ಸೆಟ್ಟಿಂಗ್‌ಗಳು >  ಅಬೌಟ್ ಫೋನ್  > ಸಾಫ್ಟ್‌ವೇರ್ ಮಾಹಿತಿಗೆ ಹೋಗಿ. ನಿಮ್ಮ Android ಆವೃತ್ತಿಯನ್ನು  ವರ್ಸನ್ ವರ್ಗದ ಅಡಿಯಲ್ಲಿ ಲಿಸ್ಟ್ ಮಾಡಲಾಗುತ್ತದೆ.

 ಸಪೋರ್ಟ್ ಮಾಡದೇ ಹೋದಲ್ಲಿ ಏನಾಗುತ್ತದೆ ?  : 
ಹಳೆಯ ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳಕೆದಾರರಿಗೆ WhatsApp  ಮೊದಲೇ ಸೂಚನೆ ನೀಡುತ್ತದೆ. WhatsApp ಆ ಬಳಕೆದಾರರಿಗೆ ಅಪ್‌ಗ್ರೇಡ್ ಮಾಡಲು ಹಲವಾರು ಬಾರಿ ನೆನಪಿಸುತ್ತದೆ. ಬಳಕೆದಾರರು ತಮ್ಮ ಸಾಧನವನ್ನು ನವೀಕರಿಸದಿದ್ದರೆ, WhatsApp ಅವರ ಸಾಧನದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಇದರರ್ಥ ಅವರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಅಥವಾ ಯಾವುದೇ ಇತರ WhatsApp ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಜೀ ಮೇಲ್ ಬಳಕೆದಾರರಿಗೊಂದು ಗುಡ್ ನ್ಯೂಸ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News