ಒಮ್ಮೆ ರೀಚಾರ್ಜ್ ಮಾಡಿದರೆ 84 ದಿನಗಳವರೆಗೆ ಚಿಂತೆ ಇಲ್ಲ.! ಏರ್ಟೆಲ್ ತಂದಿದೆ 84 Days Plan

Airtel 84 Days Plan:ಪ್ರಿಪೇಯ್ಡ್ ಪ್ಲಾನ್ ಅನ್ನು ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ಸಮಸ್ಯೆಯಾಗುತ್ತಿದ್ದರೆ, ಇದೀಗ ಏರ್‌ಟೆಲ್‌ ಹೊಸ ಪ್ಲಾನ್ ಅನ್ನು ಪರುಚಯಿಸಿದೆ. 

Written by - Ranjitha R K | Last Updated : Nov 18, 2022, 12:21 PM IST
  • ಏರ್‌ಟೆಲ್‌ ಪರಿಚಯಿಸಿದೆ ಹೊಸ ಪ್ಲಾನ್
  • ಒಮ್ಮೆ ರೀಚಾರ್ಜ್ ಮಾಡಿದರೆ ಮೂರೂ ತಿಂಗಳವರೆಗೆ ವ್ಯಾಲಿಡಿಟಿ
  • ಏರ್‌ಟೆಲ್‌ನ ಹೊಸ ಪ್ರಿಪೇಯ್ಡ್ ಯೋಜನೆ ನೀಡುತ್ತಿದೆ ಈ ಪ್ರಯೋಜನ
ಒಮ್ಮೆ ರೀಚಾರ್ಜ್ ಮಾಡಿದರೆ 84  ದಿನಗಳವರೆಗೆ ಚಿಂತೆ ಇಲ್ಲ.! ಏರ್ಟೆಲ್ ತಂದಿದೆ  84 Days Plan title=
Airtel 84 Days Plan

Airtel 84 Days Plan : ಏರ್‌ಟೆಲ್‌ನ ಪ್ರಿಪೇಯ್ಡ್ ಪ್ಲಾನ್‌ಗಳು  ಅಗ್ಗದ ಬೆಲೆಗೆ ಲಭ್ಯವಾಗುತ್ತಿದ್ದು, ಬಳಕೆದಾರರ ಅಗತ್ಯತೆಗಳನ್ನು ಕೂಡಾ  ಪೂರೈಸುತ್ತದೆ. ಪ್ರಿಪೇಯ್ಡ್ ಪ್ಲಾನ್ ಅನ್ನು ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ಸಮಸ್ಯೆಯಾಗುತ್ತಿದ್ದರೆ, ಇದೀಗ ಏರ್‌ಟೆಲ್‌ ಹೊಸ ಪ್ಲಾನ್ ಅನ್ನು ಪರುಚಯಿಸಿದೆ. ಈ ಪ್ಲಾನ್ ಪ್ರಕಾರ ಒಮ್ಮೆ ರೀಚಾರ್ಜ್ ಮಾಡಿದರೆ ಮೂರೂ ತಿಂಗಳವರೆಗೆ ಯೋಚನೆ ಇಲ್ಲದೆ ಇರಬಹುದು. 

ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಯೋಜನೆ :
ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲಾನ್ 839 ರೂಪಾಯಿ. ಆದರೆ ಇದರಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡಲಾಗಿದೆ.  ಮತರವಲ್ಲ, ಗ್ರಾಹಕರು ಪ್ರತಿ ತಿಂಗಳು  300 ರಿಂದ 400 ರೂಪಾಯಿವರೆಗೆ ರೀಚಾರ್ಜ್ ಮಾಡುವ ಬದಲು,  ಒಮ್ಮೆ 839 ರೂಪಾಯಿಗಳ ರೀಚಾರ್ಜ್ ಮಾಡಿದರೆ, 84 ದಿನಗಳ ವ್ಯಾಲಿಡಿಟಿ  ಪಡೆಯಬಹುದು. 

ಇದನ್ನೂ ಓದಿ : iPhone 14 Plusನಲ್ಲಿ ಸಿಗುತ್ತಿದೆ ಇದುವರೆಗಿನ ಅತಿದೊಡ್ಡ ಡಿಸ್ಕೌಂಟ್

ಯಾವ ಪ್ರಯೋಜನಗಳನ್ನು ಪಡೆಯಬಹುದು  :
ಈ ಯೋಜನೆಯಲ್ಲಿ ಗ್ರಾಹಕರಿಗೆ  ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡಲಾಗುತ್ತದೆ. ಈ ಪ್ಲಾನ್ ಅಡಿಯಲ್ಲಿ  ದೇಶದ ಯಾವ ಮೂಲೆಗೆ ಬೇಕಾದರೂ ಕರೆ ಮಾಡುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಹೆಚ್ಚಿನ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಇಷ್ಟು ಮಾತ್ರವಲ್ಲದೆ, ಈ ಯೋಜನೆಯಲ್ಲಿ ಹಲವು ಉತ್ತಮ ಪ್ರಯೋಜನಗಳನ್ನು ಸಹ ಸೇರಿಸಲಾಗಿದೆ. ಇದರಲ್ಲಿ 3 ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್  ಚಂದಾದಾರಿಕೆಯನ್ನು ನೀಡಲಾಗುತ್ತದೆ. 

ಈ ಪ್ರಯೋಜನಗಳನ್ನು ಸಹ ಸೇರಿಸಲಾಗಿದೆ  :
ಇಷ್ಟು ಮಾತ್ರವಲ್ಲದೆ,  Airtelextrem ನ ಮೊಬೈಲ್ ಪ್ಯಾಕ್ ಅನ್ನು ಸಹ ಯಾದರಲ್ಲಿ ಸೇರಿಸಲಾಗಿದೆ.  Rewardz ಮಿನಿ ಚಂದಾದಾರಿಕೆ, Apollo 24/7 ಸರ್ಕಲ್,   Wynk ಮ್ಯೂಸಿಕ್ ಚಂದಾದಾರಿಕೆ ಮತ್ತು ಉಚಿತ Hello Tunes ಗೆ ಚಂದಾದಾರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ : ನವೆಂಬರ್ 30 ರೊಳಗೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿ.! ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News