ಕೇವಲ ಐದು ಕಪ್ ನೀರು ಬಳಸಿ 80 ಸೆಕೆಂಡ್ ಗಳಲ್ಲಿ ಬಟ್ಟೆಗೆ ಹೊಳಪು ನೀಡುತ್ತದೆ ಈ ವಾಷಿಂಗ್ ಮೆಷಿನ್

ಈ  ವಾಷಿಂಗ್ ಮೆಷಿನ್ ಬಟ್ಟೆಯಲ್ಲಿನ ಕಲೆಗಳು, ಧೂಳು ಮತ್ತು ಬಣ್ಣವನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ಡ್ರೈ ಸ್ಕೀಮ್ ಜನರೇಟರ್ ಅನ್ನು ಬಳಸಲಾಗುತ್ತದೆ. 

Written by - Ranjitha R K | Last Updated : Jul 25, 2022, 09:17 AM IST
  • ಬಟ್ಟೆ ಒಗೆಯುವಾಗ ನೂರಾರು ಲೀಟರ್ ನೀರು ವ್ಯರ್ಥವಾಗುತ್ತದೆ
  • ಈ ವಾಷಿಂಗ್ ಮೆಷಿನ್ 80 ಸೆಕೆಂಡುಗಳಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತದೆ
  • ಅರ್ಧ ಕಪ್ ನೀರಿನಲ್ಲಿ 5 ಬಟ್ಟೆಗಳನ್ನು ತೊಳೆಯಲಾಗುತ್ತದೆ
 ಕೇವಲ ಐದು ಕಪ್ ನೀರು ಬಳಸಿ 80 ಸೆಕೆಂಡ್ ಗಳಲ್ಲಿ ಬಟ್ಟೆಗೆ ಹೊಳಪು ನೀಡುತ್ತದೆ ಈ  ವಾಷಿಂಗ್ ಮೆಷಿನ್  title=
80 Wash Washing Machine

ಬೆಂಗಳೂರು : ಮಹಿಳೆಯರಿಗೆ ಬಟ್ಟೆಗಳನ್ನು ಒಗೆಯುವುದು ಅತ್ಯಂತ ಕಷ್ಟಕರ ಕೆಲಸ ಎಂದೇ ಹೇಳಲಾಗುತ್ತದೆ. ವಿಶೇಷವಾಗಿ ಮನೆಯಲ್ಲಿ  ವಾಷಿಂಗ್ ಮೆಷಿನ್ ಇಲ್ಲದಿದ್ದಾಗ ಮತ್ತು ಬಟ್ಟೆಗಳ ಗಾಢ ಕಲೆಗಳನ್ನು ತೆಗೆದುಹಾಕುವುದು ಸುಲಭವಲ್ಲ. ಕೈಯಿಂದ ಉಜ್ಜಿ ಉಜ್ಜಿ ಕೈ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ವಾಷಿಂಗ್ ಮೆಷಿನ್ ಇದ್ದರೂ ಈ ಯಂತ್ರಗಳು  ಹೆಚ್ಚು ನೀರು ಮತ್ತು  ಡಿಟರ್ಜೆಂಟ್ ಬಳಸುತ್ತವೆ. ಬಟ್ಟೆ ಒಗೆಯುವಾಗ  ನೂರಾರು ಲೀಟರ್ ನೀರು ವ್ಯರ್ಥವಾಗುತ್ತದೆ. ಇನ್ನು ಡಿಟರ್ಜೆಂಟ್‌ಗಳು  ಚರ್ಮಕ್ಕೆ ಒಳ್ಳೆಯದಲ್ಲ, ಜೊತೆಗೆ ಬಟ್ಟೆಯನ್ನು ಕೂಡಾ ಬೇಗ ಹಾಳುಮಾಡುತ್ತವೆ. ಈ ಹಿನ್ನೆಲೆಯಲ್ಲಿ ಸ್ಟಾರ್ಟಪ್ ಕಂಪನಿಯೊಂದು 80 ಸೆಕೆಂಡುಗಳಲ್ಲಿ ಬಟ್ಟೆಗಳಿಗೆ ಬೆರಗುಗೊಳಿಸುವ ಸ್ವಚ್ಚತೆ ನೀಡುವ ಪರಿಹಾರವನ್ನು ಕಂಡುಹಿಡಿದಿದೆ. ಇದರಲ್ಲಿ ಹೆಚ್ಚು ನೀರು ಅಥವಾ ಡಿಟರ್ಜೆಂಟ್ ಅನ್ನು ಬಳಸಲಾಗುವುದಿಲ್ಲ. 

ಈ  ವಾಷಿಂಗ್  ಮೆಷಿನ್ 80 ಸೆಕೆಂಡುಗಳಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತದೆ :
ಚಂಡೀಗಢ ಮೂಲದ ಸ್ಟಾರ್ಟ್ ಅಪ್ ಕಂಪನಿ 80 ವಾಶ್, ಎರಡು ದೊಡ್ಡ ಸಮಸ್ಯೆಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಒಂದು ಆಟೋಮ್ಯಾಟಿಕ್. ಇನ್ನೊಂದು ಮೆಷಿನ್ ನಲ್ಲಿ ಡಿಟರ್ಜೆಂಟ್ ಹೆಸರಿನಲ್ಲಿ ಬಳಸುವ ರಾಸಾಯನಿಕಗಳು ಮತ್ತು ಹೆಚ್ಚು ನೀರಿನ ಬಗ್ಗೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ  80 ವಾಶ್ ಕಂಪನಿಯನ್ನು ಪ್ರಾರಂಭಿಸಲಾಗಿದೆ. ರುಬಲ್ ಗುಪ್ತಾ, ನಿತಿನ್ ಕುಮಾರ್ ಸಲೂಜಾ ಮತ್ತು ವೀರೇಂದ್ರ ಸಿಂಗ್ ಎಂಬವರು ಸೇರಿ ಈ  ಮೆಷಿನ್ ಕಂಡು ಹಿಡಿದಿದ್ದಾರೆ. ಈ ವಾಷಿಂಗ್ ಮೆಷಿನ್ 80 ಸೆಕೆಂಡ್ ಗಳಲ್ಲಿ ಬಟ್ಟೆಗಳನ್ನು ಕ್ಲೀನ್ ಮಾಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Flipkart Big Saving Days: ಕೇವಲ 700 ರೂ.ಗೆ Nokia ಸ್ಮಾರ್ಟ್ ಟಿವಿ ಖರೀದಿಸಿ!

PPE ಕಿಟ್‌ಗಳನ್ನು ಕೂಡಾ ತೊಳೆಯಬಹುದು :  
ಈ ಯಂತ್ರವು ISP ಸ್ಟೀಮ್ ತಂತ್ರಜ್ಞಾನದಲ್ಲಿ ಉತ್ತಮವಾಗಿದೆ. ಇದು ಲೋ ರೇಡಿಯೊ ಫ್ರಿಕ್ವೆನ್ಸಿಯಲ್ಲಿ ಉತ್ತಮ ಮೈಕ್ರೋವೇವ್ ಸಹಾಯದಿಂದ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ವಿಶೇಷವೆಂದರೆ ಇದರಲ್ಲಿ ಲೋಹದ  ವಸ್ತುಗಳು ಮತ್ತು ಪಿಪಿಇ ಕಿಟ್ ಅನ್ನು ಸಹ ಸ್ವಚ್ಛಗೊಳಿಸಬಹುದು. ಆದರೆ ಇದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  

ಅರ್ಧ ಕಪ್ ನೀರಿನಲ್ಲಿ 5 ಬಟ್ಟೆಗಳನ್ನು ತೊಳೆಯಲಾಗುತ್ತದೆ :
ಈ  ವಾಷಿಂಗ್ ಮೆಷಿನ್ ಬಟ್ಟೆಯಲ್ಲಿನ ಕಲೆಗಳು, ಧೂಳು ಮತ್ತು ಬಣ್ಣವನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ಡ್ರೈ ಸ್ಕೀಮ್ ಜನರೇಟರ್ ಅನ್ನು ಬಳಸಲಾಗುತ್ತದೆ. 5 ಬಟ್ಟೆಗಳನ್ನು ತೊಳೆಯಲು 80 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಅದು ಕೂಡಾ ಕೇವಲ ಅರ್ಧ ಕಪ್ ನೀರು ಬಳಸಿಕೊಂಡು. 7-8KG ಮಾಡೆಲ್  ಈ ಸಾಮರ್ಥ್ಯವನ್ನು ಹೊಂದಿದೆ. 80ಕೆಜಿ  ಮಾಡೆಲ್ 50 ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ಬಳಸಲಾಗುವ ನೀರು ಕೇವಲ 5 ರಿಂದ 6 ಗ್ಲಾಸ್ ನಷ್ಟು. 

ಇದನ್ನೂ ಓದಿ : ಮೊಬೈಲ್‌ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ

ಈ ವಾಷಿಂಗ್ ಮೆಷಿನ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ :
ಈ ವಾಷಿಂಗ್ ಮೆಷಿನ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಇದು ಪೈಲಟ್ ಯೋಜನೆಯಲ್ಲಿದೆ. ಇದನ್ನು ಈಗ ಚಂಡೀಗಢ, ಪಂಚಕುಲ ಮತ್ತು ಮೊಹಾಲಿಯ ಕೆಲವು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿದೆ. ಸ್ಟಾರ್ಟಪ್ ಪಂಜಾಬ್ ಮತ್ತು ಹರಿಯಾಣ ಸರ್ಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News