Best Cars: 26 ಕಿಮೀ ಮೈಲೇಜ್ ಕೊಡೋ 7 ಸೀಟರ್ ಕಾರು: ಬಲು ಅಗ್ಗದ ಈ ಕಾರಿನ ಫೀಚರ್ ಮತ್ತಷ್ಟು ಸೂಪರ್

Best Mileage Car: ಈ ಎಲ್ಲಾ ಚಿಂತೆಗೆ ಫುಲ್ ಸ್ಟಾಪ್ ಇಡುತ್ತೆ ಈ ಕಾರುಗಳು. ಉತ್ತಮ ಮೈಲೇಜ್ ನೀಡುವ 7-ಸೀಟರ್ ಕಾರುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತೋರಿಸಲಿದ್ದೇವೆ. ಈ ಕಾರುಗಳಲ್ಲಿ, ನೀವು ಇಂಧನದ ಬಗ್ಗೆ ಚಿಂತಿಸದೆ ನಿಮ್ಮ ಕುಟುಂಬದೊಂದಿಗೆ ದೀರ್ಘ ಪ್ರಯಾಣವನ್ನು ಮಾಡಬಹುದು.

Written by - Bhavishya Shetty | Last Updated : Mar 27, 2023, 10:41 PM IST
    • ದೊಡ್ಡ ಕುಟುಂಬವನ್ನು ಹೊಂದಿರುವ ಜನರು 7 ಆಸನಗಳ ಕಾರುಗಳನ್ನು ಖರೀದಿಸಲು ಬಯಸುತ್ತಾರೆ.
    • ಕಾರು ಖರೀದಿಸುವ ಮುನ್ನ ಗ್ರಾಹಕರು ಕಾರಿನ ಮೈಲೇಜ್ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ.
    • ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಈ ಕಾಲದಲ್ಲಿ ದುಬಾರಿಯಾಗುತ್ತಿದೆ.
Best Cars: 26 ಕಿಮೀ ಮೈಲೇಜ್ ಕೊಡೋ 7 ಸೀಟರ್ ಕಾರು: ಬಲು ಅಗ್ಗದ ಈ ಕಾರಿನ ಫೀಚರ್ ಮತ್ತಷ್ಟು ಸೂಪರ್ title=
Best Mileage

Best Mileage Car: ಕಾರು ಖರೀದಿಸಲು ಬಂದಾಗ, ಪ್ರತಿಯೊಬ್ಬರೂ ತಮ್ಮ ಕುಟುಂಬ ಮತ್ತು ಬಳಕೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ದೊಡ್ಡ ಕುಟುಂಬವನ್ನು ಹೊಂದಿರುವ ಜನರು 7 ಆಸನಗಳ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಕಾರು ಖರೀದಿಸುವ ಮುನ್ನ ಗ್ರಾಹಕರು ಕಾರಿನ ಮೈಲೇಜ್ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಈ ಕಾಲದಲ್ಲಿ ದುಬಾರಿಯಾಗುತ್ತಿದೆ.

ಇದನ್ನೂ ಓದಿ: Hopshoots: ಕೆಜಿಗೆ 1 ಲಕ್ಷ ರೂ… ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ: ಬರೋಬ್ಬರಿ 20 ವರ್ಷ ಬದುಕುತ್ತೆ ಈ ವೆಜಿಟೇಬಲ್!!

ಈ ಎಲ್ಲಾ ಚಿಂತೆಗೆ ಫುಲ್ ಸ್ಟಾಪ್ ಇಡುತ್ತೆ ಈ ಕಾರುಗಳು. ಉತ್ತಮ ಮೈಲೇಜ್ ನೀಡುವ 7-ಸೀಟರ್ ಕಾರುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತೋರಿಸಲಿದ್ದೇವೆ. ಈ ಕಾರುಗಳಲ್ಲಿ, ನೀವು ಇಂಧನದ ಬಗ್ಗೆ ಚಿಂತಿಸದೆ ನಿಮ್ಮ ಕುಟುಂಬದೊಂದಿಗೆ ದೀರ್ಘ ಪ್ರಯಾಣವನ್ನು ಮಾಡಬಹುದು.

1. ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್‌’ನಿಂದ ನಿಯಂತ್ರಿಸಲ್ಪಡುತ್ತದೆ, ಇದು 103 PS ಮತ್ತು 137 Nm ಟಾರ್ಕ್ ಅನ್ನು ಹೊಂದಿದೆ. 5-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಗೇರ್‌ ಬಾಕ್ಸ್‌’ಗೆ ಸಂಯೋಜಿತವಾಗಿದೆ. ಇದರ ಜೊತೆಗೆ ವಾಹನವು 88 PS ಪವರ್ ಮತ್ತು 121.5 Nm ಟಾರ್ಕ್ ಅನ್ನು ಉತ್ಪಾದಿಸುವ CNG ಕಿಟ್ ಅನ್ನು ಸಹ ಹೊಂದಿದೆ. ಮಾರುತಿ ಎರ್ಟಿಗಾ ಬೆಲೆ ರೂ 8.41 ಲಕ್ಷದಿಂದ ರೂ 12.79 ಲಕ್ಷದವರೆಗೆ ಇದೆ.

ಮೈಲೇಜ್ - ಮ್ಯಾನುಯಲ್ ಟ್ರಾನ್ಸ್‌ಮಿಷನ್‌’ಗೆ 20.5 ಕಿಮೀ/ಲೀ, ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌’ಗೆ 20.3 ಕಿಮೀ/ಲೀ ಮತ್ತು ಸಿಎನ್‌’ಜಿಗೆ 26.1 ಕಿಮೀ/ಕೆಜಿ.

2. ಕಿಯಾ

ಕಿಯಾ ಕ್ಯಾರೆನ್ಸ್ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ, 1.5L ಪೆಟ್ರೋಲ್ (115 PS/114 Nm, 6-ಸ್ಪೀಡ್ ಮ್ಯಾನುವಲ್), 1.4L ಟರ್ಬೊ ಪೆಟ್ರೋಲ್ (140 PS/242 Nm, 6-ಸ್ಪೀಡ್ ಮ್ಯಾನುವಲ್/7-ಸ್ಪೀಡ್ DCT), ಮತ್ತು 1.5L ಡೀಸೆಲ್ (115 PS/250 Nm, 6-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಸ್ವಯಂಚಾಲಿತ). MPV ಮೂರು ಡ್ರೈವ್ ಮೋಡ್‌’ಗಳನ್ನು ಸಹ ಹೊಂದಿದೆ. ಅವುಗಳೆಂದರೆ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್

ಮೈಲೇಜ್ - ಪೆಟ್ರೋಲ್ ಮ್ಯಾನುವಲ್‌’ಗೆ 21.3 kmpl, ಟರ್ಬೊ ಪೆಟ್ರೋಲ್ ಮ್ಯಾನ್ಯುವಲ್‌’ಗೆ 16.2 kmpl ಮತ್ತು ಡೀಸೆಲ್ ಮ್ಯಾನ್ಯುವಲ್‌’ಗೆ 21.3 kmpl.

3. ಮಾರುತಿ ಸುಜುಕಿ XL6:

ಮಾರುತಿ ಸುಜುಕಿ XL6 ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ (103 PS/137 Nm) ನಿಂದ ನಿಯಂತ್ರಿಸಲ್ಪಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಮಾರುತಿ XL6 MPV ಬೆಲೆ 11.29 ಲಕ್ಷದಿಂದ 14.55 ಲಕ್ಷದವರೆಗೆ ಇರುತ್ತದೆ.

ಮೈಲೇಜ್ - ಮ್ಯಾನುವಲ್‌ಗೆ 20.97 kmpl ಮತ್ತು ಅಟೋಮ್ಯಾಟಿಕ್’ಗೆ 20.27 kmpl

4. ರೆನಾಲ್ಟ್ ಟ್ರೈಬರ್:

ರೆನಾಲ್ಟ್ ಟ್ರೈಬರ್ ದೇಶದ ಅತ್ಯಂತ ಅಗ್ಗದ 7 ಆಸನಗಳ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆಗಳು ರೂ 5.92 ಲಕ್ಷದಿಂದ ರೂ 8.51 ಲಕ್ಷದವರೆಗೆ ಇದೆ. ಇದು 1 ಲೀಟರ್ ನ್ಯಾಚುರಲಿ ಆಸ್ಪೈರ್ಡ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 72 PS ಪವರ್ ಮತ್ತು 96 Nm ಟಾರ್ಕ್ ಅನ್ನು ನೀಡುತ್ತದೆ. ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್‌’ನೊಂದಿಗೆ ಲಭ್ಯವಿದೆ.

ಇದನ್ನೂ ಓದಿ:  Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!

ಮೈಲೇಜ್ - ಮ್ಯಾನುವಲ್‌ಗೆ 20.0 kmpl ಮತ್ತು ಅಟೋಮ್ಯಾಟಿಕ್’ಗೆ 18.2 kmpl.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News