MS Dhoni- ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಅಭಿಮಾನಿಗಳನ್ನು ಆಗಾಗ್ಗೆ ಅಚ್ಚರಿಗೊಳಿಸುತ್ತಾರೆ, ಈಗ ಅವರು ತಮ್ಮ ಹಳೆಯ ಪಾಲುದಾರ ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ಎಲ್ಲರಿಗೂ ಆಶ್ಚರ್ಯವಾಗಿದ್ದಾರೆ.
2011 ರಲ್ಲಿನ ವಿಶ್ವಕಪ್ ಫೈನಲ್ ಪಂದ್ಯವು ಮ್ಯಾಚ್ ಫಿಕ್ಸಿಂಗ್ ಆಗಿತ್ತು ಎಂದು ಆರೋಪ ಮಾಡಿದ್ದ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಾ ಅವರಿಗೆ ಮಾಜಿ ನಾಯಕ ಮಹೇಲಾ ಜಯವರ್ಧನೆ ತಿರುಗೇಟು ನೀಡಿದ್ದಾರೆ.ಆದರೆ ಈ ಆರೋಪದಲ್ಲಿ ಮಾಜಿ ಸಚಿವರು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖಿಸಿಲ್ಲ, ಇನ್ನೊಂದೆಡೆಗೆ ಈ ಆರೋಪಕ್ಕೆ ಕುಮಾರ್ ಸಂಗಕ್ಕಾರ ಪುರಾವೆ ಕೇಳಿದ್ದಾರೆ.
ಭಾರತದ ಮಾಜಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರು 2011 ರ ವಿಶ್ವಕಪ್ ಗೆಲುವನ್ನು ತಮ್ಮ ಕ್ರಿಕೆಟ್ ವೃತ್ತಿಜೀವನದ ಅತಿದೊಡ್ಡ ಮತ್ತು ಭಾವನಾತ್ಮಕ ಕ್ಷಣ ಎಂದು ಯಾವಾಗಲೂ ಬಣ್ಣಿಸಿದ್ದಾರೆ. ಭಾರತವು 28 ವರ್ಷಗಳ ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ತುಂಬಿದ ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವಕಪ್ ಅನ್ನು ಗೆದ್ದುಕೊಂಡಿತು.
ಮಾರ್ಚ್ 30, 2011 ರಂದು, ಮೊಹಾಲಿ ಮೈದಾನದಲ್ಲಿ, ಟೀಮ್ ಇಂಡಿಯಾ 2011 ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಪಾಕಿಸ್ತಾನವನ್ನು 29 ರನ್ಗಳಿಂದ ಸೋಲಿಸಿತು, ಸಚಿನ್ 'ಪಂದ್ಯಶ್ರೇಷ್ಠ' ಎನಿಸಿಕೊಂಡರು.
World Cup Final 2011: ಅಂತಿಮ ಪಂದ್ಯದಲ್ಲಿ ಗೌತಮ್ ಗಂಭೀರ್ ಕೇವಲ ಮೂರು ರನ್ಗಳಿಂದ ತಮ್ಮ ಶತಕವನ್ನು ಕಳೆದುಕೊಂಡರು. ಗಂಭೀರ್ ಅದರ ಬಗ್ಗೆ ಮಾತನಾಡುವಾಗ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೇಳಿದ ಒಂದು ವಿಷಯದಿಂದಾಗಿ ಇದು ಸಂಭವಿಸಿದೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.