ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಚರ್ಚಿಸಲ್ಪಟ್ಟ ಹಾಗೂ ಜನಪ್ರಿಯತೆಯನ್ನು ಹೊಂದಿರುವ ಬರಾಕ್ ಒಬಾಮ ಅವರನ್ನು ಭಾರತದ ಜನರು ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ.
ಪೌರತ್ವ ಕಾನೂನು ಪ್ರತಿಭಟನೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ದೆಹಲಿಯ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಇಂದು ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿದ್ದಾರೆ ಮತ್ತು "ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಬೇಕೆಂದು ಅವರು ಬಯಸುತ್ತಾರೆ" ಎಂದು ಹೇಳಿದರು.
ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ರಿಪಬ್ಲಿಕನ್ ಪಕ್ಷ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ. ಟ್ರಂಪ್ ಇಂದು ಬೆಳಗ್ಗೆ 11:40 ಕ್ಕೆ ಅಹಮದಾಬಾದ್ ತಲುಪಲಿದ್ದಾರೆ. ಡೊನಾಲ್ಡ್ ಟ್ರಂಪ್ಗಿಂತ ಮೊದಲು ಯಾವ ಅಮೆರಿಕದ ಅಧ್ಯಕ್ಷರು ತಾಜ್ ಮಹಲ್ ಅನ್ನು ನೋಡಿದ್ದಾರೆಂದು ತಿಳಿಯೋಣ.
ಭಾರತದ ಪ್ರವಾಸಕ್ಕೂ ಮುನ್ನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಬಾಹುಬಲಿ 2: ದಿ ಕನ್ಕ್ಲೂಷನ್" ಚಿತ್ರದ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಚಿತ್ರದ ನಟನ ಮುಖದ ಮೇಲೆ ಟ್ರಂಪ್ ಮುಖ ಮಾರ್ಪಡಿಸಿದಂತೆ ತೋರಿಸುತ್ತದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಧಾರ್ಮಿಕ ಸ್ವಾತಂತ್ರ್ಯದ ವಿಷಯವನ್ನು ಎತ್ತಲಿದ್ದಾರೆ ಎಂದು ಶ್ವೇತಭವನ ಶುಕ್ರವಾರ ಹೇಳಿದೆ, ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಂಸ್ಥೆಗಳ ಬಗ್ಗೆ ಅಮೆರಿಕಕ್ಕೆ ಹೆಚ್ಚಿನ ಗೌರವವಿದೆ ಎನ್ನುವುದನ್ನು ಒತ್ತಿ ಹೇಳಲಿದೆ ಎನ್ನಲಾಗಿದೆ.
ದೇ ತಿಂಗಳ 24ರಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವಿಶೇಷ ಅತಿಥಿಯ ಸ್ವಾಗತಕ್ಕಾಗಿ ಭಾರತದಲ್ಲಿಯೂ ಕೂಡ ವ್ಯಾಪಕ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ತಿಂಗಳು ಯೆಮನ್ ನಲ್ಲಿ ಅಮೆರಿಕಾದ ಸೇನೆ ನಡೆಸಿರುವ ಆಪರೇಷನ್ ನಲ್ಲಿ ಕುಖ್ಯಾತ ಉಗ್ರಸಂಘಟನೆಯಾಗಿರುವ ಅಲ್ ಕೈದಾ ಮುಖ್ಯಸ್ಥ ಕಾಸೀಮ್ ಅಲ್ ರೀಮೀಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಬಾರಿ ಅವರು ಗುಜರಾತ್ನ ಅತಿಥಿಯಾಗಲಿದ್ದಾರೆ. ದೆಹಲಿಯಲ್ಲಿ ನಡೆದ ರ್ಯಾಲಿಯ ಸಂದರ್ಭದಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿ ಈ ವಿಷಯ ತಿಳಿಸಿದರು.
ಬರಾಕ್ ಒಬಾಮಾ ಎರಡು ಬಾರಿಗೆ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಪತ್ನಿ ಮಿಚೆಲ್ ಒಬಾಮಾ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ಈಗ ಹರಿದಾಡುತ್ತಿವೆ.
ಮಾಜಿ ಯುಎಸ್ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರು 94 ನೇ ವಯಸ್ಸಿನಲ್ಲಿ ಶನಿವಾರ ನಿಧನವಾಗಿದ್ದಾರೆ.ಅಮೆರಿಕಾದ 41 ನೇ ಅಧ್ಯಕ್ಷರಾಗಿದ್ದ ಅವರು ತಮ್ಮ ಹಿಂದಿನ ಅಧ್ಯಕ್ಷರಿಗಿಂತಲೂ ಅಧಿಕ ಅವಧಿಗಳ ಕಾಲ ಜೀವಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.