ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಚರ್ಚಿಸಲ್ಪಟ್ಟ ಹಾಗೂ ಜನಪ್ರಿಯತೆಯನ್ನು ಹೊಂದಿರುವ ಬರಾಕ್ ಒಬಾಮ (Barack Obama) ಅವರನ್ನು ಭಾರತದ ಜನರು ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ.
ಪ್ರಸ್ತುತ ಅವರು ಅಮೆರಿಕದ ಅಧ್ಯಕ್ಷ (US PRESIDENT) ರಲ್ಲದಿದ್ದರೂ, ಅವರ ಜನಪ್ರಿಯತೆ ಇನ್ನೂ ಕಡಿಮೆಯಾಗಿಲ್ಲ. ಈಗ ಒಬಾಮಾ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್ ಮಾಡುವ ಮೂಲಕ ತಮ್ಮ ಪರ್ಸನಲ್ ನಂಬರ್ ಹಂಚಿಕೊಂಡಿದ್ದಾರೆ.
All right, let's try something new. If you’re in the United States, send me a text at 773-365-9687 — I want to hear how you're doing, what's on your mind, and how you're planning on voting this year.
I'll be in touch from time to time to share what's on my mind, too. pic.twitter.com/NX91bSqbtG
— Barack Obama (@BarackObama) September 23, 2020
ಈ ಸಂಬಂಧ ಟ್ವೀಟ್ ಮಾಡಿರುವ ಬರಾಕ್ ಒಬಾಮಾ - ಹೊಸದನ್ನು ಪ್ರಯತ್ನಿಸೋಣ. ನೀವು ಅಮೆರಿಕಾ (America)ದಲ್ಲಿದ್ದರೆ ಈ ಸಂಖ್ಯೆಯಲ್ಲಿ ನೀವು ನನಗೆ 7773-365-9687 ಗೆ ಸಂದೇಶ ಕಳುಹಿಸಬಹುದು. ನೀವು ಹೇಗಿದ್ದೀರಿ, ನಿಮ್ಮ ಆಲೋಚನೆಗಳು ಹೇಗೆ ಮತ್ತು ಈ ವರ್ಷ ನೀವು ಹೇಗೆ ಮತ ಚಲಾಯಿಸಲು ತಯಾರಿ ಮಾಡುತ್ತಿದ್ದೀರಿ ಎಂದು ತಿಳಿಯಲು ನಾನು ಬಯಸುತ್ತೇನೆ. ನನ್ನ ಆಲೋಚನೆಗಳನ್ನು ಕಾಲಕಾಲಕ್ಕೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.
ಈ ಸಂಖ್ಯೆಗೆ ಸಂದೇಶ ರವಾನಿಸುವ ಮೂಲಕ ನಿಮ್ಮ ವಿಷಯವನ್ನು ನೀವು ಒಬಾಮಾಗೆ ತಿಳಿಸಬಹುದು. ಬರಾಕ್ ಒಬಾಮಾ ಅವರಿಗೆ ಸಂದೇಶ ಕಳುಹಿಸಲು ಇದೊಂದು ಸುವರ್ಣಾವಕಾಶ.
ಅಮೆರಿಕದಲ್ಲಿ ಅನಿಯಂತ್ರಿತ ಕರೋನಾವೈರಸ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಿಷ್ಟು
ಬರಾಕ್ ಒಬಾಮ ಅವರ ಈ ಸಂದೇಶದ ನಂತರ ಅವರ ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದಾರೆ. 59 ವರ್ಷದ ಒಬಾಮಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಈ ಸಂದೇಶವನ್ನು ಮಾಡಿದ್ದಾರೆ. ಮಿಚೆಲ್ ಒಬಾಮ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ಅವರು ಅಭಿಮಾನಿಗಳು ಅನೇಕ ಬಾರಿ ಒತ್ತಾಯಿಸಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಅವರು ಕಾಲೇಜು ಪದವೀಧರರಿಗೆ ಭಾಷಣ ಮಾಡಿದರು. ಈ ಭಾಷಣವನ್ನು ಕೇಳಿದ ಅನೇಕ ಅಭಿಮಾನಿಗಳು ಬಹಳ ಭಾವುಕರಾದರು ಮತ್ತು 44 ನೇ ಅಮೆರಿಕನ್ ಅಧ್ಯಕ್ಷ ಒಬಾಮಾ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಬೇಕೆಂದು ಅವರು ಬಯಸುತ್ತಾರೆ ಎಂಬ ಬಯಕೆಯನ್ನು ಹಂಚಿಕೊಂಡರು. ಒಬಾಮಾ ನೀಡಿದ ವಿಶೇಷ ದೂರವಾಣಿ ಸಂಖ್ಯೆಯಲ್ಲಿ 733 ಏರಿಯಾ ಕೋಡ್ ಇದೆ, ಅದು ಅವರ ದತ್ತು ಪಡೆದ ಚಿಕಾಗೊದ ನಗರವಾಗಿದೆ.
ಆರ್ಥಿಕತೆಗೆ ಬೂಸ್ಟರ್: ಪ್ರತಿಯೊಬ್ಬರಿಗೂ 1-1 ಲಕ್ಷ ರೂಪಾಯಿ
ವರದಿಗಳ ಪ್ರಕಾರ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಭಾಗವಹಿಸಲು ಮತ್ತು ಅವರಿಗೆ ಮತ ಚಲಾಯಿಸಲು ಜನರನ್ನು ಪ್ರೋತ್ಸಾಹಿಸಲು ಒಬಾಮಾ ಈ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ನಿಮ್ಮ ಮಾಹಿತಿಗಾಗಿ ಇದು ಪಠ್ಯ ಆಧಾರಿತ ವೇದಿಕೆಯಾಗಿದ್ದು ಅದು ಜನರಿಗೆ ದೊಡ್ಡ ಗುಂಪುಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಈ ಟ್ವೀಟ್ ಅನ್ನು ಸುಮಾರು ಎರಡೂವರೆ ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ ಮತ್ತು 35 ಸಾವಿರಕ್ಕೂ ಹೆಚ್ಚು ಜನರು ಇದನ್ನು ರಿಟ್ವೀಟ್ ಮಾಡಿದ್ದಾರೆ.