ಎಲ್ಲಾ ಆಧಾರ್ ಕಾರ್ಡ್ ಗ್ರಾಹಕರಿಗೆ ಯುಐಡಿಎಐ ಎಚ್ಚರಿಕೆ ನೀಡಿದ್ದು, ನಿಮ್ಮ ಆಧಾರ್ ಕಾರ್ಡ್ನಲ್ಲಿ ಪ್ಲಾಸ್ಟಿಕ್ ಲ್ಯಾಮಿನೇಷನ್ ಇದ್ದರೆ ಅಥವಾ ನೀವು ಪ್ಲಾಸ್ಟಿಕ್ ಆಧಾರ್ ಕಾರ್ಡ್ ಹೊಂದಿದ್ದರೆ ಅಂತಹ ಕಾರ್ಡ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು ಎಂದು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್(Aadhaar Card) ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಪಡೆಯಲು ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆದರೆ ಹಲವರ ಬಳಿ ಅಗತ್ಯ ದಾಖಲೆಗಳ ಕೊರತೆ ಇರುತ್ತದೆ. ನೀವೂ ಅಂತಹದ್ದೇ ಪರಿಸ್ಥಿತಿ ಎದುರಿಸುತ್ತಿದ್ದರೆ, ಅದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ...
ಆಧಾರ್ ಮಾಹಿತಿಗೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ಅಗತ್ಯವಿದೆ. ಗೌಪ್ಯತೆಗಾಗಿ ಮೊಬೈಲ್ ಸಂಖ್ಯೆಯನ್ನು ನೀಡದಿರುವುದರಲ್ಲಿ ಯಾವುದೇ ತೊಂದರೆಗಳಿಲ್ಲ. ಆದಾಗ್ಯೂ, ಹೆಚ್ಚಿನ ಸೇವೆಗಳನ್ನು ಪಡೆಯಲು ಒಟಿಪಿ ಅಗತ್ಯವಿದೆ.
ನಮ್ಮ ಹಲವು ಕೆಲಸಗಳಿಗೆ 'ಆಧಾರ್' ಅಗತ್ಯವಿದೆ. ಈ ಸಂದರ್ಭದಲ್ಲಿ, ಮೂಲ ಡೇಟಾದ ಸುರಕ್ಷತೆಯ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದು, ನಮ್ಮ ಆಧಾರ್ ಗೆ ಒದಗಿಸಲಾಗಿರುವ ನಮ್ಮ ಮೂಲ ಮಾಹಿತಿ ಅಪಾಯದಲ್ಲಿದೆ, ಅದನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ ಜೊತೆ ಲಿಂಕ್ ಆಗಿರುವ ಯಾವುದೇ ಮಾಹಿತಿ ಬಗ್ಗೆ ಸಂಶಯವಿದ್ದರೆ, ಆಧಾರ್ ಮಾಹಿತಿಯನ್ನು ಆನ್ಲೈನ್'ನಲ್ಲಿ ಲಾಕ್ ಮಾಡಬಹುದು. ಒಂದು ವೇಳೆ ನಿಮ್ಮ ಆಧಾರ್ ಬಳಸಲು ಇಚ್ಚಿಸುವಿರಾದರೆ ನಿಮ್ಮ ಆಧಾರ್ ಅನ್ನು ಅನ್ ಲಾಕ್ ಕೂಡ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.