ನಿಮ್ಮ ಆಧಾರ್ ಎಲ್ಲಿ, ಯಾವಾಗ ಬಳಕೆಯಾಗಿದೆ ಎಂದು ತಿಳಿಯಲು ಹೀಗೆ ಮಾಡಿ

ಆಧಾರ್ ಜೊತೆ ಲಿಂಕ್ ಆಗಿರುವ ಯಾವುದೇ ಮಾಹಿತಿ ಬಗ್ಗೆ ಸಂಶಯವಿದ್ದರೆ, ಆಧಾರ್ ಮಾಹಿತಿಯನ್ನು ಆನ್ಲೈನ್'ನಲ್ಲಿ ಲಾಕ್ ಮಾಡಬಹುದು. ಒಂದು ವೇಳೆ ನಿಮ್ಮ ಆಧಾರ್ ಬಳಸಲು ಇಚ್ಚಿಸುವಿರಾದರೆ ನಿಮ್ಮ ಆಧಾರ್ ಅನ್ನು ಅನ್ ಲಾಕ್ ಕೂಡ ಮಾಡಬಹುದು. 

Last Updated : Jan 10, 2019, 06:07 PM IST
ನಿಮ್ಮ ಆಧಾರ್ ಎಲ್ಲಿ, ಯಾವಾಗ ಬಳಕೆಯಾಗಿದೆ ಎಂದು ತಿಳಿಯಲು ಹೀಗೆ ಮಾಡಿ title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನತೆಗೆ ಆಧಾರ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಕೇವಲ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯ ಎಂದು 2018ರ ಸೆಪ್ಟೆಂಬರ್ 26ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸಹ, ಹಲವು ಖಾಸಗಿ ಸಂಸ್ಥೆಗಳು ಪ್ರತಿಯೊಂದು ಕೆಲಸಕ್ಕೂ ಆಧಾರ್ ಸಂಖ್ಯೆಯನ್ನು ಸಲ್ಲಿಸುವಂತೆ ಕಡ್ದಾಯಗೊಳಿಸಿದ್ದವು. ಈ ಸಂದರ್ಭದಲ್ಲಿ ಆಧಾರ್ ಮಾಹಿತಿ ಲೀಕ್ ಆಗಿರುವ ಬಗ್ಗೆಯೂ ಹಲವು ವರದಿಗಳು ಪ್ರಕಟವಾಗಿದ್ದವು. ಹೀಗಾಗಿ ಹಲವರಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳ ಗೌಪ್ಯತೆಗೆ ಧಕ್ಕೆ ಬಂದಿರಬಹುದೇ ಎಂಬ ಅನುಮಾನ ಮೂಡಿದೆ. ಅದನ್ನು ಪರಿಹರಿಸಿಕೊಳ್ಳಲು UIDAI ಒಂದು ಸೌಲಭ್ಯ ನೀಡಿದೆ. ಈ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಎಲ್ಲಿ ಮತ್ತು ಯಾವ, ಯಾವ ಸಂದರ್ಭದಲ್ಲಿ ಬಳಸಲಾಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ಮಾಹಿತಿ ತಿಳಿಯುವುದು ಹೇಗೆ?
* ಮೊದಲಿಗೆ https://resident.uidai.gov.in ವೆಬ್ಸೈಟ್ ಓಪನ್ ಮಾಡಿ.
* ನಂತರ Aadhaar Authentication History ಪೇಜ್'ಗೆ ಹೋಗಲು ಅಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. 
* ಬಳಿಕ ನಿಮ್ಮ ಆಧಾರ್ ಸಂಖ್ಯೆ ಮತ್ತು ಸೆಕ್ಯೂರಿಟಿ ಕೋಡ್ ನಮೂದಿಸಿ, 'Generate OTP' ಆಯ್ಕೆ ಮೇಲೆ ಕ್ಲಿಕ್ ಮಾಡಿ. 
* ಬಳಿಕ ನೀವು ಈಗಾಗಲೇ ಆಧಾರ್ ಜೊತೆ ನೊಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಸಂದೇಶ ಬರಲಿದೆ. 
* ಆ ಓಟಿಪಿ ಸಂಖ್ಯೆ ನಮೂದಿಸುವ ಬಾಕ್ಸ್ ಬಳಿ ಮತ್ತಷ್ಟು ಆಯ್ಕೆಗಳು ನಿಮಗೆ ಕಾಣಿಸಲಿವೆ.
* ಅಲ್ಲಿ, ಸೂಚನೆಯ ಅವಧಿ ಮತ್ತು ಟ್ರಾನ್ಸಾಕ್ಷನ್ ಸಂಖ್ಯೆಗಳನ್ನು ತೋರಿಸುತ್ತದೆ. 
* ಬಳಿಕ ಓಟಿಪಿ ಸಂಖ್ಯೆ ಭರ್ತಿ ಮಾಡಿ 'Submit' ಬಟನ್ ಕ್ಲಿಕ್ ಮಾಡಿ.
* ಓಟಿಪಿ ಪರಿಶೀಲನೆ ಬಳಿಕ ನೀವು ಆಯ್ಕೆ ಮಾಡಿದ ದಿನಾಂಕ, ಸಮಯ ಎಲ್ಲವನ್ನೂ ತಿಳಿಯಬಹುದು. 

ಆನ್ಲೈನ್'ನಲ್ಲಿ ಆಧಾರ್ ಲಾಕ್ ಸೌಲಭ್ಯ 
ಒಂದು ವೇಳೆ, ಆಧಾರ್ ಜೊತೆ ಲಿಂಕ್ ಆಗಿರುವ ಯಾವುದೇ ಮಾಹಿತಿ ಬಗ್ಗೆ ಸಂಶಯವಿದ್ದರೆ, ಆಧಾರ್ ಮಾಹಿತಿಯನ್ನು ಆನ್ಲೈನ್'ನಲ್ಲಿ ಲಾಕ್ ಮಾಡಬಹುದು. ಒಂದು ವೇಳೆ ನಿಮ್ಮ ಆಧಾರ್ ಬಳಸಲು ಇಚ್ಚಿಸುವಿರಾದರೆ ನಿಮ್ಮ ಆಧಾರ್ ಅನ್ನು ಅನ್ ಲಾಕ್ ಕೂಡ ಮಾಡಬಹುದು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್ ಜೊತೆ ಲಿಂಕ್ ಮಾಡಲು ಸೂಚಿಸಿದ್ದು, ಮಾರ್ಜ್ 31 ಕೊನೆಯ ದಿನವಾಗಿದೆ. 

Trending News