PM Modi Unveiled Hologram Statue Of Netaji: ದೆಹಲಿಯ ಇಂಡಿಯಾ ಗೇಟ್ನಲ್ಲಿ ಬೋಸ್ ಅವರ ಹೊಲೊಗ್ರಾಮ್ ಛಾಯಾ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರು 23 ಜನವರಿ 1897 ರಂದು ಜನಿಸಿದ್ದರು.
ನೇತಾಜಿ ಅವರ ಪ್ರತಿಮೆ ಸಿದ್ಧವಾಗದ ತನಕ, ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆ ಆ ಸ್ಥಳದಲ್ಲಿ ಇರುತ್ತದೆ. ನೇತಾಜಿ ಪ್ರತಿಮೆ ಸ್ಥಾಪಿಸುವ ನಿರ್ಧಾರಕ್ಕೆ ಅವರ ಪುತ್ರಿ ಅನಿತಾ ಬೋಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸಂಸದ ಸುಬ್ರಮಣ್ಯಂ ಸ್ವಾಮಿ ಮಂಗಳವಾರ ರವೀಂದ್ರನಾಥ ಟ್ಯಾಗೋರ್ ಸಂಯೋಜಿಸಿರುವ ಭಾರತೀಯ ರಾಷ್ಟ್ರಗೀತೆ 'ಜನ ಗಣ ಮನ'ದ ಮೂಲ ಆವೃತ್ತಿಯನ್ನು ಬದಲಿಸುವಂತೆ ದೇಶದ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.1943 ರಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಐಎನ್ಎ) ಅಂಗೀಕರಿಸಿದ ಆವೃತ್ತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ.
ನೇತಾಜಿ ಮ್ಯೂಸಿಯಂನಲ್ಲಿ ಸುಭಾಷ್ ಚಂದ್ರ ಬೋಸ್ ಬಳಸುತ್ತಿದ್ದ ಮರದ ಕುರ್ಚಿ ಮತ್ತು ಖಡ್ಗ, ಪದಕಗಳು, ಬ್ಯಾಡ್ಜ್ಗಳು, ಸಮವಸ್ತ್ರ ಹಾಗೂ ಸೇನೆಗೆ ಸಂಬಂಧಪಟ್ಟ ಇತರ ಅಪರೂಪದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 'ಆಜಾದ್ ಹಿಂದ್ ಸರ್ಕಾರ್' ಘೋಷಣೆಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾನುವಾರದಂದು ತ್ರಿವರ್ಣ ಧ್ವಜವನ್ನು ಹಾರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.