ಸುಭಾಷ್ ಚಂದ್ರ ಬೋಸ್ (Subhash Chandra Bose) ನಾಪತ್ತೆಯಾಗಿರುವ ದೇಶ ತೈವಾನ್, ನೇತಾಜಿಯವರ ಪರಂಪರೆಯನ್ನು 'ಮರುಶೋಧಿಸಲು' ತನ್ನ ರಾಷ್ಟ್ರೀಯ ದಾಖಲೆಗಳು ಮತ್ತು ಡೇಟಾಬೇಸ್ ಪರಿಶೀಲನೆಗೆ ಮುಂದಾಗಿದೆ.
1940 ರ ದಶಕದಲ್ಲಿ ಜಪಾನಿಯರ ವಶದಲ್ಲಿದ್ದ ತೈವಾನ್ (Taiwan) , ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರನನ್ನು ಜೀವಂತವಾಗಿ ಕಂಡ ಕೊನೆಯ ದೇಶವಾಗಿತ್ತು. 1945 ರಲ್ಲಿ ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಸಾವನ್ನಪ್ಪಿದರು ಎಂಬುದು ಒಮ್ಮತದ ಅಭಿಪ್ರಾಯವಾಗಿದೆ.
ನಾವು ರಾಷ್ಟ್ರೀಯ ಆರ್ಕೈವ್ಗಳು ಮತ್ತು ಹಲವಾರು ಡೇಟಾಬೇಸ್ಗಳನ್ನು ಹೊಂದಿದ್ದೇವೆ. 1930 ಮತ್ತು 1940 ರ ದಶಕಗಳಲ್ಲಿ ತೈವಾನ್ನ ಮೇಲೆ ಭಾರಿ ಪ್ರಭಾವ ಬೀರಿದ ನೇತಾಜಿ ಮತ್ತು ಅವರ ಪರಂಪರೆಯ ಬಗ್ಗೆ ಹೆಚ್ಚಿನ ವಿಷಗಳನ್ನು ತಿಳಿದುಕೊಳ್ಳಲು ಮತ್ತು ಭಾರತೀಯ ಸ್ನೇಹಿತರು ಇದನ್ನು ಮರುಶೋಧಿಸಲು ನಾವು ಸಹಾಯ ಮಾಡಬಹುದು ಎಂದು ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಉಪ ಪ್ರತಿನಿಧಿ ಮುಮಿನ್ ಚೆನ್, ಶನಿವಾರ (ಜನವರಿ 22, 2022) ವರ್ಚುವಲ್ ಈವೆಂಟ್ನಲ್ಲಿ ಹೇಳಿದರು.
ಇದನ್ನೂ ಓದಿ: Watch:'ಶ್ರೀವಲ್ಲಿ' ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಕ್ರಿಕೆಟರ್ ಡೇವಿಡ್ ವಾರ್ನರ್
ವಿವಿಧ ಖಾತೆಗಳ ಪ್ರಕಾರ, ಆಗಸ್ಟ್ 1945 ರಲ್ಲಿ ವಿಮಾನ ಅಪಘಾತದ ನಂತರ, ನೇತಾಜಿಯನ್ನು ತೈಪೆಯ (Taipei) ಆರ್ಮಿ ಹಾಸ್ಪಿಟಲ್ ನನ್ಮನ್ ಬ್ರಾಂಚ್ ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಆಸ್ಪತ್ರೆ ಗಮನಾರ್ಹವಾಗಿ, ಇಂದಿನ ತೈಪೆ ಸಿಟಿ ಹಾಸ್ಪಿಟಲ್ ಹೆಪಿಂಗ್ ಫ್ಯೂಯೌ ಶಾಖೆಯಾಗಿದೆ.
ಬಹಳಷ್ಟು ಯುವ ಇತಿಹಾಸಕಾರರು ಆಗ್ನೇಯ ಏಷ್ಯಾದ ಜೊತೆಗೆ ಭಾರತದೊಂದಿಗೆ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ನೇತಾಜಿ ಕುರಿತ ಸಾಕಷ್ಟು ಐತಿಹಾಸಿಕ ದಾಖಲೆಗಳು, ಪುರಾವೆಗಳು, ಆರ್ಕೈವ್ಗಳು (archives) ತೈವಾನ್ನಲ್ಲಿವೆ. ಇದೀಗ, ಕೆಲವೇ ಕೆಲವು ಭಾರತೀಯ ವಿದ್ವಾಂಸರಿಗೆ ಇದು ತಿಳಿದಿದೆ ಎಂದು ತೈವಾನ್ ಉಪ ರಾಯಭಾರಿ ಹೇಳಿದ್ದಾರೆ.
ನಾವು ಐತಿಹಾಸಿಕ ಸಂಪರ್ಕಗಳನ್ನು ಹೊಂದಿರುವುದರಿಂದ ತೈವಾನ್ ಮತ್ತು ಭಾರತವು ಇಂಡೋ-ಪೆಸಿಫಿಕ್ ಸಾಮಾನ್ಯ ಇತಿಹಾಸವನ್ನು ಮರುಪರಿಶೀಲಿಸಬೇಕು ಮತ್ತು ಮರುಶೋಧಿಸಬೇಕು ಎಂದಿದ್ದಾರೆ.
ಜಪಾನ್ ಸರ್ಕಾರವು ನೇತಾಜಿಗೆ ಸಂಬಂಧಿಸಿದ ಎರಡು ಫೈಲ್ಗಳನ್ನು ಬಹಿರಂಗಪಡಿಸಿದೆ. ಅವರ ಚಿತಾಭಸ್ಮವನ್ನು ಟೋಕಿಯೋದ ರೆಂಕೋ-ಜಿ ದೇವಸ್ಥಾನದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Exclusive : ಕಾಂಗ್ರೆಸ್ನ ಒಂದು ವಿಭಾಗ ನನ್ನ ತಂದೆಗೆ ಅನ್ಯಾಯ ಮಾಡಿದೆ : ಬೋಸ್ ಮಗಳ ಆರೋಪ
ತೈವಾನ್ ಭಾರತ ಮತ್ತು ನೇತಾಜಿಯೊಂದಿಗೆ ಅಂತಹ ಐತಿಹಾಸಿಕ ಸಂಬಂಧಗಳನ್ನು ಹೊಂದಿದೆ ಎಂದು ಸೂಚಿಸಿದ ದೆಹಲಿಯ ತೈವಾನ್ ರಾಜತಾಂತ್ರಿಕರು, 1940 ರ ದಶಕದಲ್ಲಿ ಚಿಯಾಂಗ್ ಕೈ-ಶೇಕ್ ಕೂಡ ನೇತಾಜಿಯ ಬಗ್ಗೆ ತಮ್ಮ ದಿನಚರಿಯಲ್ಲಿ ಬರೆದಿದ್ದಾರೆ. ಅವರು ಸಹಾನುಭೂತಿ ಹೊಂದಿದ್ದರು ಎಂದಿದ್ದಾರೆ.
ಚಿಯಾಂಗ್ ಕೈ ಶೇಕ್ ಅವರು 1949 ರಲ್ಲಿ ಚೀನಾದಿಂದ ತೈವಾನ್ಗೆ ಪಲಾಯನ ಮಾಡಿದರು. ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಪಡೆಗಳಿಗೆ ನೀಡಿದ ಪ್ರಬಲ ಪ್ರತಿರೋಧಕ್ಕೆ ಹೆಸರುವಾಸಿಯಾಗಿದ್ದರು.
ಸುಭಾಸ್ ಚಂದ್ರ ಬೋಸ್ ಅವರು ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು (British rule) ಕಿತ್ತೊಗೆಯಲು ಜಪಾನಿನ ಸಹಾಯವನ್ನು ಕೋರಿದ್ದರು ಮತ್ತು ಟೋಕಿಯೋದ ಸಹಾಯದಿಂದ ಭಾರತೀಯ ರಾಷ್ಟ್ರೀಯ ಸೇನೆಯನ್ನು ಬೆಳೆಸಿದರು.
ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಸಂಜೆ ಇಂಡಿಯಾ ಗೇಟ್ನಲ್ಲಿ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು (Hologram statue of Netaji) ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅನಾವರಣಗೊಳಿದಸಲಿದ್ದಾರೆ. ಭಾರತ ಸರ್ಕಾರವು ಜನವರಿ 23 ಅನ್ನು "ಪರಾಕ್ರಮ್ ದಿವಸ್" (Parakram Diwas) ಎಂದು ಆಚರಿಸಲು ಘೋಷಿಸಿದೆ.
ಇದನ್ನೂ ಓದಿ: ಮೈತ್ರಿಕೂಟದಲ್ಲಿ ಇಬ್ಬರು ಮುಖ್ಯಮಂತ್ರಿಗಳ ಪ್ರಸ್ತಾಪ ಮುಂದಿಟ್ಟ ಅಸಾದುದ್ದೀನ್ ಓವೈಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.