ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಹಲವಾರು ಯೋಜನೆಗಳ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವ ಪ್ಲಾನ್ ಮಾಡಿದೆ. ಅದೇ ರೀತಿ ಶಿವಮೊಗ್ಗದ ಹೊಸ ಏರ್ಪೋರ್ಟ್ ಕಾಮಗಾರಿ ಭರದಿಂದ ಸಾಗಿದೆ. ಇದೇ ಫೆಬ್ರವರಿ 27 ರಂದು ಖುದ್ದು ಪ್ರಧಾನಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಅವರ ಹೆಸರಿಡಲು ಸರ್ಕಾರ ಪಸ್ತಾವನೆ ಸಲ್ಲಿಸಲಿದೆ ಅಂತ ಬೊಮ್ಮಾಯಿ ಹೇಳಿದ್ದಾರೆ...
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಚಿತ್ರದುರ್ಗಕ್ಕೆ ಹೊರಟಿದೆ. ಶಿವಮೊಗ್ಗ, ಚಿತ್ರದುರ್ಗದಲ್ಲಿ ಯಾತ್ರೆಯನ್ನ ಕೈಗೊಂಡಿದ್ದೇವೆ. ಅಸೆಂಬ್ಲಿ ಮುಗಿದ ನಂತರ ಮೈಸೂರಿನಲ್ಲಿ ಯಾತ್ರೆ ನಡೆಸ್ತೇವೆ. ನಮ್ಮ ಯಾತ್ರೆ ನೋಡಿ ಬಿಜೆಪಿ, JDSಗೆ ಹಿಂಸೆಯಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.
ಶಿವಮೊಗ್ಗದಿಂದ ಕಾರ್ಕಳಕ್ಕೆ ಸಂಚರಿಸುತ್ತಿದ್ದ ಕಾರು ಕುಡುಮಲ್ಲಿಗೆ ಸಮೀಪ ಅಪಘಾತಕ್ಕೀಡಾಗಿದ್ದು, ಸಮಯಕ್ಕೆ ಸರಿಯಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೆರವಿನಿಂದಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸರ್ಕಾರ ವಿಶ್ವವಿದ್ಯಾಲಯದ ತಂಡವನ್ನು ಕಳಿಸಿ ಅಧ್ಯಯನ ಕೈಗೊಂಡಿದೆ. ಕೇಂದ್ರ ಸರ್ಕಾರದ ತಜ್ಞರು ಕೂಡ ಚಿಕ್ಕಮಗಳೂರಿಗೆ ಬಂದು ಅಧ್ಯಯನ ಮಾಡಿದ್ದಾರೆ. ನಿರಂತರವಾಗಿ ಮಳೆ ಇರುವುದರಿಂದ ಹಾಗೂ ಗಾಳಿಯಿಂದ ಒಂದಕ್ಕೊಂದು ಹರಡುತ್ತಿದೆ.
ಶಿವಮೊಗ್ಗದಲ್ಲಿ ಹಕ್ಕಿಪಿಕ್ಕಿ ಕ್ಯಾಂಪ್ ತೆರವು ಕಾರ್ಯಾಚರಣೆ ಹಿನ್ನೆಲೆ ಸ್ಥಳೀಯರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ಖಾಕಿ ಭದ್ರತೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಸೀಮೆಎಣ್ಣೆ ಸುರಿದುಕೊಂಡು ಸ್ಥಳೀಯ ನಿವಾಸಿ ಆತ್ಮಹತ್ಯೆಗೆ ಯತ್ನ
ದೇಶಪ್ರೇಮವಿರುವ ಬಹಳಷ್ಟು ಮಂದಿ ಮುಸ್ಲಿಂರಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ನಾನು ಮುಸ್ಲಿಂ ವಿರೋಧಿಯೂಲ್ಲ.. ದ್ವೇಷಿಯೂ ಅಲ್ಲ ಎಂದಿದ್ದಾರೆ.
ISIS ಉಗ್ರ ಸಂಘಟನೆ ಜೊತೆ ಸಂಪರ್ಕ ಶಂಕೆ ಹಿನ್ನೆಲೆಯಲ್ಲಿ ಗಂಗಾವತಿ ನಗರದ ಶಬ್ಬಿರ್ ಎನ್ನುವ ವ್ಯಕ್ತಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.. ಶಿವಮೊಗ್ಗದ ಶಂಕಿತ ಉಗ್ರರ ಜತೆ ಶಬ್ಬಿರ್ ಸಂಪರ್ಕ ಹೊಂದಿದ್ದ ಎನ್ನಲಾಗ್ತಿದೆ.
ಶಿವಮೊಗ್ಗದಲ್ಲಿ ಶಂಕಿತ ಉಗ್ರ ನವಾಜ್ ತಂದೆ ನಿಧನ ಹಿನ್ನೆಲೆ ತಂದೆಯ ಅಂತ್ಯಕ್ರಿಯೆಗೆ ನವಾಜ್ನನ್ನು ಪೊಲೀಸರು ಕರೆದೊಯ್ಯಲಿದ್ದಾರೆ. ಇದಕ್ಕಾಗಿ ಪೊಲೀಸರು ನ್ಯಾಯಾಲಯದಿಂದ ಆದೇಶ ಪಡೆದಿದ್ದಾರೆ. ಅಂತ್ಯಕ್ರಿಯೆ ಸಮಯದಿಂದ ಸಂಜೆ 7 ಗಂಟೆವರೆಗೆ ಸಮಯಾವಾಕಾಶ ನೀಡಲಾಗಿದೆ.
ಶಿವಮೊಗ್ಗದಲ್ಲಿ ಬಂಧಿಸಲ್ಪಟ್ಟ ಶಂಕಿತ ಉಗ್ರರ ಬಳಿಯಿದ್ದ ಪೆನ್ ಡ್ರೈವ್, ಮೊಬೈಲ್ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿಯಲ್ಲಿ ಸ್ಥಳ ಮಹಜರು ವೇಳೆ ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ. ಮಂಗಳೂರಿನಲ್ಲಿ ಮೊಬೈಲ್ ಜಪ್ತಿ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಕಿತ ಯುವಕರು ಐಸಿಸ್ ಉಗ್ರ ಸಂಘಟನೆಯ ಜೊತೆ ನೇರ ನಂಟು ಹೊಂದಿದ್ದಾರೆ ಎನ್ನಲಾಗಿದ್ದು, ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಕಿಂಗ್ಪಿನ್ ಯಾಸಿನ್ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬ್ಲಾಸ್ಟ್ಗೆ ಸಂಚು ಮಾಡಿರೋ ಬಗ್ಗೆ ಗೊತ್ತಾಗಿದೆ.
ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಹಿನ್ನೆಲೆ ತನಿಖೆಗಾಗಿ ಶಿವಮೊಗ್ಗಕ್ಕೆ FSL ತಂಡ ಆಗನಿಸಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ FSL ತಂಡ. ಶಂಕಿತ ಉಗ್ರರ ಬಳಿ ಸ್ಫೋಟಕ ಇದ್ದ ಹಿನ್ನೆಲೆ FSL ತಂಡದಿಂದ ಸ್ಥಳ ಮಹಜರು ನಡೆಸಲಾಯಿತು.
ಸಾಮಾನ್ಯವಾಗಿ ಅವಳಿ ಕರುಗಳಾದರೆ, ಒಟ್ಟಿಗೆ ಕೆಲವು ನಿಮಿಷಗಳು ಅಥವಾ ಗಂಟೆಗಳ ಅಂತರದಲ್ಲಿ ಹುಟ್ಟುತ್ತವೆ. ಆದರೆ, ಇಲ್ಲಿ ವಾರಗಳ ಅಂತರದಲ್ಲಿ ಎರಡು ಕರುಗಳು ಹುಟ್ಟಿರುವುದಕ್ಕೆ ಪ್ರತ್ಯೇಕವಾಗಿ ಗರ್ಭಕಟ್ಟಿರುವುದು ಕಾರಣ ಎನ್ನಲಾಗುತ್ತಿದೆ.
ಸಾವರ್ಕರ್ ಬಗ್ಗೆ ಕಾಂಗ್ರೆಸ್ನವರಿಗೆ ಏನು ಗೊತ್ತು?, ಸಾವರ್ಕರ್ ಫೋಟೋ ಶಿವಮೊಗ್ಗದಲ್ಲಿ ಒಂದು ಸರ್ಕಲ್ಗೆ ಹಾಕಿದರೆ ಮುಸಲ್ಮಾನರಿಗೆ ಯಾಕೆ ಉರಿ ಅಂತ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ರು. ಬೆಂಗಳೂರಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ದೇಶ ಒಡೆಯುವ ವಿಭಜಕ ಶಕ್ತಿಗಳಿಗೆ ಸಿದ್ದರಾಮಯ್ಯ ಆದರ್ಶ ಆಗಿದ್ದಾರೆ ಅಂತ ಕಿಡಿಕಾರಿದ್ರು.
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲಿ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಫೈರ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲಿ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಫೈರ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.