ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಮಾಹಿತಿ ಆಯೋಗವನ್ನು ರಚಿಸಿದೆ. ಅಕ್ಟೋಬರ್ 12, 2005 ರಂದು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆಯನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಓದಬಹುದು. ಮಾಹಿತಿ ಹಕ್ಕು ಅಧಿನಿಯಮ, 2005 (ಕೇಂದ್ರ ಅಧಿನಿಯಮ ಸಂಖ್ಯೆ 22, 2005) 27 ರ ಉಪ-ವಿಭಾಗ (1) ಮತ್ತು (2) ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಕರ್ನಾಟಕ ಹಕ್ಕು ಮಾಹಿತಿ ನಿಯಮಗಳು'2005 ಮೂಲಕ ನಾವು ಮಾಹಿತಿ ಹಕ್ಕಿಗಾಗಿ ಅರ್ಜಿಸಲ್ಲಿಸಲು ಪಾಲಿಸಬೇಕಾಗಿರುವ ಕಾರ್ಯವಿಧಾನ ಹಾಗೂ ಇತರ ವಿವರಗಳನ್ನು ತಿಳಿಯಬಹುದಾಗಿದೆ.
ಮೂರು ಭಾರತೀಯ ನೋಟು ಮುದ್ರಣಾಲಯ ಕೇಂದ್ರಗಳು ಹೊಸದಾಗಿ ವಿನ್ಯಾಸಗೊಳಿಸಲಾದ 8,810.65 ಮಿಲಿಯನ್ 500 ರೂ. ನೋಟುಗಳನ್ನು ಆರ್ಬಿಐಗೆ ನೀಡಿವೆ ಎಂದು ವರದಿಯಾಗಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ರಿಪೋರ್ಟ್ ನೀಡಿದೆ.
PM Medical Expenses: ಪ್ರಧಾನಿ ಮೋದಿಯವರು ತಮ್ಮ ವೈದ್ಯಕೀಯ ಬಿಲ್ ಪಾವತಿಸಲು ಯಾವುದೇ ರೀತಿಯ ಸರ್ಕಾರದ ತೆರಿಗೆ ಹಣವನ್ನು ಬಳಸಿಲ್ಲ. ಬದಲಾಗಿ ಅವರೇ ಸ್ವತಃ ತಮ್ಮ ಬಿಲ್ಗಳನ್ನು ಪಾವತಿಸಿದ್ದಾರೆ.
ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಎಸ್ಐಸಿ ಕಳುಹಿಸಿದ ಪತ್ರದಲ್ಲಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಆರ್ಟಿಐ ಮೂಲಕ ಖಾಸಗಿ ಶಾಲೆಗಳ ಬಗ್ಗೆ ಮಾಹಿತಿ ಕೇಳಿದರೆ, ಶಾಲೆಗಳಿಂದ ಕೋರಿದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ.
PM Kisan Sammaan Nidhi: ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಕೃಷಿ ಸಚಿವಾಲಯವು ಎರಡು ವರ್ಗದ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದೆ. ಇದರಲ್ಲಿ 'ಅರ್ಹತೆ ಪಡೆಯದ ರೈತರು' ಮೊದಲ ವರ್ಗಕ್ಕೆ ಸೇರಿದ್ದರೆ, 'ಆದಾಯ ತೆರಿಗೆ ಪಾವತಿಸುವ ರೈತರು' ಎರಡನೆಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಆರ್ಟಿಐ ಮೂಲಕ ಹೊರಬಂದ ಮಾಹಿತಿಯ ಪ್ರಕಾರ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಜಾಹೀರಾತಿಗಾಗಿ ಖರ್ಚು ಮಾಡುತ್ತಿರುವ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ.
ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯ ವ್ಯಾಪ್ತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯನ್ನು ತರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಲಿದೆ.
ಕೇಂದ್ರ ಸಚಿವರ ವಿರುದ್ಧ ಸ್ವೀಕರಿಸಿರುವ ಭ್ರಷ್ಟಾಚಾರದ ದೂರುಗಳು ಖಚಿತವಾಗದ, ಸುಳ್ಳು ಮತ್ತು ಅನಾಮಧೇಯ ದೂರುಗಳನ್ನೂ ಸಹ ಒಳಗೊಂಡಿರುವುದರಿಂದ, ಈಗಲೇ ಯಾವುದೇ ಮಾಹಿತಿ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಗಳಿಗೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ 29 ದೇಶಗಳಿಗೆ ಮಾರಲಾಗುತ್ತದೆ ಎನ್ನುವ ಸಂಗತಿ ಮಾಹಿತಿ ಹಕ್ಕಿನ ಮೂಲಕ ಬಹಿರಂಗಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.