SHOCKING..! RBI ಮುದ್ರಿಸಿದ ʼ88,032 ಮಿಲಿಯನ್ʼ 500 ರೂ. ಹೊಸ ನೋಟುಗಳು ನಾಪತ್ತೆ..! ಎಲ್ಲಿ ಹೋದವು..?

ಮೂರು ಭಾರತೀಯ ನೋಟು ಮುದ್ರಣಾಲಯ ಕೇಂದ್ರಗಳು ಹೊಸದಾಗಿ ವಿನ್ಯಾಸಗೊಳಿಸಲಾದ 8,810.65 ಮಿಲಿಯನ್ 500 ರೂ. ನೋಟುಗಳನ್ನು ಆರ್‌ಬಿಐಗೆ ನೀಡಿವೆ ಎಂದು ವರದಿಯಾಗಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ರಿಪೋರ್ಟ್‌ ನೀಡಿದೆ.

Written by - Krishna N K | Last Updated : Jun 17, 2023, 01:24 PM IST
  • ದೇಶದಲ್ಲಿ ಮೂರು ನೋಟು ಮುದ್ರಣಾಲಯ ಕೇಂದ್ರಗಳಿವೆ.
  • ಇವು ಹೊಸದಾಗಿ ವಿನ್ಯಾಸಗೊಳಿಸಲಾದ 8,810.65 ಮಿಲಿಯನ್ 500 ರೂ. ನೋಟುಗಳನ್ನು ಆರ್‌ಬಿಐಗೆ ನೀಡಿವೆ.
  • ಆದ್ರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಕೇವಲ 7260 ಮಿಲಿಯನ್‌ ನೋಟುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ.
SHOCKING..! RBI ಮುದ್ರಿಸಿದ ʼ88,032 ಮಿಲಿಯನ್ʼ 500 ರೂ. ಹೊಸ ನೋಟುಗಳು ನಾಪತ್ತೆ..! ಎಲ್ಲಿ ಹೋದವು..? title=

ದೆಹಲಿ : ಭಾರತೀಯ ಮೂರು ನೋಟು ಮುದ್ರಣಾಲಯಗಲ್ಲಿ ಮುದ್ರಿಸಲಾದ 500 ರೂ ನೋಟುಗಳ ಸಂಖ್ಯೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ವೀಕರಿಸಿದ ಸಂಖ್ಯೆಗಳ ನಡುವೆ ಭಾರಿ ವ್ಯತ್ಯಾಸ ಕಂಡು ಬಂದಿದೆ ಎಂದು ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ, ಲೆಕ್ಕಕ್ಕೆ ಸಿಗದ ನೋಟುಗಳ ಮೌಲ್ಯ 88,032.5 ಕೋಟಿ ರೂ. ಎಂದು ಹೇಳಲಾಗಿದೆ.

ಹೌದು.. ಮೂರು ಭಾರತೀಯ ಟಂಕಸಾಲೆಗಳು (ನೋಟು ಮುದ್ರಣಾಲಯಗಳು) ಹೊಸದಾಗಿ 8,810.65 ಮಿಲಿಯನ್ 500 ರೂ. ನೋಟುಗಳನ್ನು ವಿನ್ಯಾಸಗೊಳಿಸಿ ಆರ್‌ಬಿಐಗೆ ನೀಡಿತ್ತಂತೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು ವರದಿ ಹೇಳಿದೆ. ಇದರಿಂದಾಗಿ ಉಳಿದ ನೋಟುಗಳು ಎಲ್ಲಿಗೆ ಹೋದವು ಎಂಬ ಯಕ್ಷ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: PM Kisan: ಇನ್ಮುಂದೆ ಈ ರಾಜ್ಯದ ರೈತರಿಗೆ ಪ್ರತಿ ವರ್ಷ ಸಿಗುತ್ತೆ 12 ಸಾವಿರ ರೂ. ಹಣ

ಎಫ್‌ಪಿಜೆ ಪ್ರಶ್ನೆಗೆ ಉತ್ತರಿಸದ ಆರ್‌ಬಿಐ : ಭಾರತೀಯ ನೋಟುಗಳನ್ನು ಮೂರು ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ (ಪಿ) ಲಿಮಿಟೆಡ್, ಬೆಂಗಳೂರು, ಕರೆನ್ಸಿ ನೋಟ್ ಪ್ರೆಸ್, ನಾಸಿಕ್ ಮತ್ತು ದೇವಾಸ್‌ನಲ್ಲಿರುವ ಬ್ಯಾಂಕ್ ನೋಟ್ ಪ್ರೆಸ್. ಈ ಮೂರು ಟಂಕಸಾಲೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮುದ್ರಿತ ನೋಟುಗಳನ್ನು ಕಳುಹಿಸುತ್ತವೆ. ದೇಶದಲ್ಲಿ ನಗದು ಹರಿವನ್ನು ನಿರ್ವಹಿಸುವುದು ಮತ್ತು ನಿರ್ವಹಣೆ ಮಾಡುವುದು ಆರ್‌ಬಿಐ.

ಆರ್‌ಟಿಐ ಕಾರ್ಯಕರ್ತ ಮನೋರಂಜನ್ ರಾಯ್ 500 ರೂ. ನೋಟುಗಳ ಸ್ಥಿತಿಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ RTI ಅರ್ಜಿಯನ್ನು ಸಲ್ಲಿಸಿದ್ದರು ಎಂದು ಎಫ್‌ಪಿಜೆ (FPJ) ತಿಳಿಸಿದೆ. ವರದಿ ಪ್ರಕಾರ, ನಾಸಿಕ್‌ ಟಂಕಸಾಲೆ ಒಟ್ಟು 375.450 ಮಿಲಿಯನ್‌ 500 ರೂ. ನೋಟನ್ನು ಮುದ್ರಿಸಿದೆ ಎಂದು ವರದಿಯಾಗಿದೆ. ಆದ್ರೆ ಆರ್‌ಬಿಐ ದಾಖಲೆಯಗಳಲ್ಲಿ, ಏಪ್ರಿಲ್‌ 2015 ಮತ್ತು ಡಿಸೆಂಬರ್‌ 2016ರ ನಡುವೆ 345 ಮಿಲಿಯನ್‌ ನೋಟುಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ಮತ್ತೊಂದು ಆರ್‌ಟಿಐ ಪ್ರಶ್ನೆಗೆ ನಾಸಿಕ್‌ ಕರೆನ್ಸಿ ನೋಟ್‌ ಮುದ್ರಣಾಲಯ ಉತ್ತರ ನೀಡಿದೆ. ಆದ್ರೆ, ಹಣಕಾಸು ವರ್ಷ 2015-2016 (ಏಪ್ರಿಲ್ 2015-ಮಾರ್ಚ್ 2016,) ರಘುರಾಮ್ ರಾಜನ್ RBI ಗವರ್ನರ್ ಆಗಿದ್ದಾಗ RBI ಗೆ 500 ರೂಪಾಯಿಗಳ 210.000 ಮಿಲಿಯನ್ ನೋಟುಗಳನ್ನು ಸರಬರಾಜು ಮಾಡಲಾಗಿದೆ ಎಂದು FPJ ವರದಿ ಮಾಡಿದೆ.

ಇದನ್ನೂ ಓದಿ: ಬಿಪರ್‌ಜೋಯ್ ಚಂಡಮಾರುತಕ್ಕೆ ಸಿಲುಕಿದ್ದ 4 ದಿನದ ಮಗುವನ್ನು ರಕ್ಷಿಸಿದ ಲೇಡಿ ಪೊಲೀಸ್‌..! ವಿಡಿಯೋ ನೋಡಿ

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣಾಲಯ (ಪಿ) ಲಿಮಿಟೆಡ್, ಬೆಂಗಳೂರು, ಆರ್‌ಬಿಐಗೆ 5,195.65 ಮಿಲಿಯನ್ ನೋಟುಗಳನ್ನು ನೀಡಿದೆ. ಅಲ್ಲದೆ, ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ 2016-2017 ರಲ್ಲಿ ಆರ್‌ಬಿಐಗೆ 1,953.000 ಮಿಲಿಯನ್ ನೋಟುಗಳನ್ನು ಪೂರೈಸಿದೆ, ಆದರೆ ಆರ್‌ಬಿಐ ಈ ಮೂರು ಪ್ರಿಂಟಿಂಗ್ ಪ್ರೆಸ್‌ಗಳಿಂದ 7,260 ಮಿಲಿಯನ್‌ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು FPJ ವರದಿ ಮಾಡಿದೆ.

ಇದರಿಂದ ಮೂರು ನೋಟು ಮುದ್ರಣಾಲಯಗಳಿಂದ ಮುದ್ರಿಸಿದ ಒಟ್ಟು 8810.65 ಮಿಲಿಯನ್ ನೋಟುಗಳಲ್ಲಿ RBI ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ನೋಟುಗಳು ಕಾಣೆಯಾಗಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಆರ್‌ಟಿಐನ ರಾಯ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಆರ್ಥಿಕ ಗುಪ್ತಚರ ಸಂಸ್ಥೆ ಮತ್ತು ಇಡಿಗೆ ಪತ್ರ ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News