ನವದೆಹಲಿ: ಕಳೆದ ಆರು ವರ್ಷಗಳಲ್ಲಿ ಸುಮಾರು ಶೇ60 ರಷ್ಟು ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಹೆಚ್ಚಿನವರು ಬಾಲಕಿಯರು ಎಂದು ಹೇಳಲಾಗಿದೆ.
ದತ್ತು ತೆಗೆದುಕೊಂಡ ರಾಜ್ಯದಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ . 2017-18ರ ಸಾಲಿನಲ್ಲಿ ದೇಶದಲ್ಲಿ 3,276 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ.ಇದರಲ್ಲಿ ಒಟ್ಟು1,858 ಬಾಲಕಿಯರು ಇದ್ದಾರೆ ಎಂದು ಹೇಳಲಾಗಿದೆ .
ದತ್ತು ಮಕ್ಕಳ ವಿಚಾರವಾಗಿ ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ 2012ರಿಂದೀಚೆಗೆ ಪ್ರತಿ ರಾಜ್ಯದಲ್ಲಿನ ದತ್ತು ಮಕ್ಕಳ ಸಂಖ್ಯೆಯ ಬಗ್ಗೆ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಪ್ರಾಧಿಕಾರ ಮಕ್ಕಳನ್ನು ದತ್ತು ಅಳವಡಿಸಿಕೊಳ್ಳುವಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ ಎಂದು ತಿಳಿಸಿದೆ. 2017 ರಲ್ಲಿ ದತ್ತು ತೆಗೆದುಕೊಂಡವರ 642 ರಲ್ಲಿ 353 ಬಾಲಕಿಯರು ಎನ್ನಲಾಗಿದೆ. ಕರ್ನಾಟಕದಲ್ಲಿ ಒಟ್ಟು 286 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು, ಅದರಲ್ಲಿ 167 ಬಾಲಕಿಯರು ಎಂದು ಹೇಳಲಾಗಿದೆ.
2017-18ರಲ್ಲಿ, ದತ್ತು ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದ್ದು. ಒಟ್ಟು ದತ್ತು ತೆಗೆದುಕೊಂಡವರ 3,276 ಮಕ್ಕಳ ಪೈಕಿ 1,858 ಬಾಲಕಿಯರು ಮತ್ತು 1,418 ಹುಡುಗರಿದ್ದಾರೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿಸಿದೆ.