ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ತಮ್ಮನ್ನು ಮುಖ್ಯ ಸೇವಕರಾಗಿ ಘೋಷಿಸಿಕೊಂಡರು. ಅಷ್ಟೇ ಅಲ್ಲ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಅವರು 'ಮನ್ ಕಿ ಬಾತ್' ಕಾರ್ಯಕ್ರಮವನ್ನೂ ಪ್ರಾರಂಭಿಸಿದರು. ತಿಂಗಳಿಗೊಮ್ಮೆ ಪಿಎಂ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' (Mann Ki Baat) ಮೂಲಕ ಜನರೊಂದಿಗೆ ಮಾತನಾಡುತ್ತಾರೆ. ಈ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಬಂದಾಗ ದೇಶದಲ್ಲಿ ಬಹಳ ಜನಪ್ರಿಯವಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರ ಹೊರತಾಗಿಯೂ ಈ ಕಾರ್ಯಕ್ರಮದ ಬಗ್ಗೆ ಹಲವು ರೀತಿಯ ಆರೋಪಗಳು ಕೇಳಿಬರುತ್ತಿದ್ದು ಸರ್ಕಾರದ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಕಾರ್ಯಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಮೂರು ಪಟ್ಟು ಆದಾಯ :
ಆರ್‌ಟಿಐ ಮೂಲಕ ಹೊರಬಂದ ಮಾಹಿತಿಯ ಪ್ರಕಾರ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಜಾಹೀರಾತಿಗಾಗಿ ಖರ್ಚು ಮಾಡುತ್ತಿರುವ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ. ಬಹಿರಂಗವಾಗಿರುವ ಆದಾಯದ ಅಂಕಿ ಅಂಶಗಳ ಪ್ರಕಾರ…
2014-15ರಲ್ಲಿ 1.16 ಕೋಟಿ ರೂ.
2015-16ರಲ್ಲಿ 2.81 ಕೋಟಿ ರೂ.
2016-17ರಲ್ಲಿ 5.12 ಕೋಟಿ ರೂ.
2017-18ರಲ್ಲಿ 10.58 ಕೋಟಿ ರೂ.
2018-19ರಲ್ಲಿ 7.47 ಕೋಟಿ ರೂ.
2019-20ರಲ್ಲಿ 2.56 ಕೋಟಿ ರೂ.
ಮತ್ತು 2020 ರವರೆಗೆ 58 ಲಕ್ಷ ರೂಪಾಯಿಗಳು ಆದಾಯ ರೂಪದಲ್ಲಿ ಬಂದಿವೆ. ಒಟ್ಟಾರೆ ಈ ಅಂಕಿ ಅಂಶವು 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು.
#MannKiBaat: ಕರೋನಾ ಬಿಕ್ಕಟ್ಟಿನ ವೇಳೆ ಹಬ್ಬಗಳ ಆಚರಣೆಯಲ್ಲಿ ಸಂಯಮ ಮುಖ್ಯ
ಅನಿಕೇತ್ ಗೌರವ್ ಎಂಬ ವ್ಯಕ್ತಿ ಆರ್‌ಟಿಐ (RTI) ಮೂಲಕ ಕೇಳಲಾದ ಪ್ರಶ್ನೆಗೆ ಸೂಚನಾ ಮತ್ತು ಮಾಹಿತಿ ಸಚಿವಾಲಯದ ಅಧೀನದಲ್ಲಿರುವ ಬ್ಯೂರೋ ಆಫ್ ಔಟ್ರೀಚ್ ಮತ್ತು ಸಂವಹನ ವಿಭಾಗವು ಉತ್ತರಿಸಿದ್ದು ರೇಡಿಯೋ, ಟೆಲಿವಿಷನ್, ಆನ್‌ಲೈನ್ ಮತ್ತು 'ಮನ್ ಕಿ ಬಾತ್' ಕಾರ್ಯಕ್ರಮದ ಇತರ ವಿಧಾನಗಳ ಮೂಲಕ ಜಾಹೀರಾತಿಗಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಆರ್‌ಟಿಐ ಮೂಲಕ ಬಹಿರಂಗಪಡಿಸಲಾಗಿದೆ. ಆರ್‌ಟಿಐಗೆ ಪ್ರತಿಕ್ರಿಯೆಯಾಗಿ 2014 ರಿಂದ 2020 ರವರೆಗೆ ಮುದ್ರಣ ಮಾಧ್ಯಮದಲ್ಲಿ 7,29,88,765 ರೂ.ಗಳ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಯಿತು. ಟಿವಿ ಅಥವಾ ಇತರ ವಿಧಾನಗಳ ಮೂಲಕ ಜಾಹೀರಾತುಗಾಗಿ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ ಎಂದು ಹೇಳಲಾಗಿದೆ.
ಮಾಹಿತಿಯ ಪ್ರಕಾರ, 2014 ರಿಂದ ಖರ್ಚಿನ ವಿವರಗಳು ಹೀಗಿವೆ…
2014-15 ಅಂಕಿಅಂಶಗಳು: -
- ಒಟ್ಟು ಖರ್ಚು 1,83,34,738 ರೂ.
- ವಿಶೇಷ ಆವೃತ್ತಿಗೆ 60,50,305 ರೂ.
- ಈ ವರ್ಷ ಜಾಹೀರಾತಿಗಾಗಿ 92,03,257 ರೂ.
2015-16ರ ಡೇಟಾ: -
- ಒಟ್ಟು ಖರ್ಚು 2,38,96,241 ರೂ.
- ವಿಶೇಷ ಕಾರ್ಯಕ್ರಮದಲ್ಲಿ 3,53,534 ರೂ
- ಜಾಹೀರಾತಿನಲ್ಲಿ 48,40,616 ರೂ.
- ಅದೇ ವರ್ಷದಲ್ಲಿ ಮನ್ ಕಿ ಬಾತ್‌ಗೆ ಹೆಚ್ಚಿನ ಖರ್ಚುಗಳನ್ನು ಮಾಡಲಾಯಿತು. ಅಂದರೆ ಈ ಕಾರ್ಯಕ್ರಮಕ್ಕಾಗಿ 52,836 ರೂ. ಖರ್ಚು ಮಾಡಲಾಗಿದೆ.
ಸವಾಲುಗಳನ್ನು ನಿಭಾಯಿಸುವುದನ್ನು ನಾವು ಇತಿಹಾಸದ ಮೂಲಕ ತಿಳಿಯಬೇಕಾಗಿದೆ-ಪ್ರಧಾನಿ ಮೋದಿ
2016-17ರ ಅಂಕಿ ಅಂಶಗಳು: -
- ಒಟ್ಟು ಖರ್ಚು 75,976 ರೂ.
- ಮೇ 31 ರ ಕಾರ್ಯಕ್ರಮಕ್ಕಾಗಿ 47,593 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
- ಜಾಹೀರಾತುಗಾಗಿ 19,686 ರೂ.
2017-18ರ ಡೇಟಾ: -
- ಒಟ್ಟು 15,09,740 ರೂ.
2019-20 ಮತ್ತು 21 ಸೆಪ್ಟೆಂಬರ್ 2020 ರವರೆಗೆ ಯಾವುದೇ ಖರ್ಚು ವರದಿಯಾಗಿಲ್ಲ. ಅಂದರೆ ಬಿಡುಗಡೆಯಾಗಿರುವ ಅಂಕಿ-ಅಂಶಗಳ ಪ್ರಕಾರ 2014 ರಿಂದ ಜಾಹೀರಾತಿಗಾಗಿ ಒಟ್ಟು 7,29,88,765 ರೂ.ಗಳನ್ನು ಖರ್ಚು ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ಕೋಟ್ಯಾಂತರ ಮಂದಿ ಪ್ರೇಕ್ಷಕರಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಜನರ ಸಮಸ್ಯೆಗಳನ್ನು ಆಲಿಸುತ್ತಾರೆ. ಹಲವು ವಿಷಯಗಳ ಬಗ್ಗೆ ಅವರು ದೇಶದ ಜನರಿಂದ ಸಲಹೆಗಳನ್ನು ಕೇಳುತ್ತಾರೆ. ಈಗ ಈ ಕಾರ್ಯಕ್ರಮವು ಸರ್ಕಾರದ ಖಜಾನೆಯನ್ನೂ ತುಂಬುತ್ತಿದೆ ಎಂಬುದು ಸಂತಸದ ವಿಷಯವಾಗಿದೆ.