ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 8 ತಿಂಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿಯಲಾಗಿದೆ. ಚಿರತೆ ಸೆರೆಯಿಂದ ನೀರಮಾನ್ವಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 8 ತಿಂಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿಯಲಾಗಿದೆ. ಚಿರತೆ ಸೆರೆಯಿಂದ ನೀರಮಾನ್ವಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನೆಲ, ಜಲ, ಭಾಷೆಯಂಥ ಸೂಕ್ಷ್ಮ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭಿರ ಆರೋಪ ಮಾಡಿದರು.
ಶಿವಮೊಬ್ಬ ಗಲಭೆ ವಿಚಾರದಲ್ಲಿ ರಾಜಕೀಯ ನಾಯಕರ ಟಾಕ್-ವಾರ್ ಬಗ್ಗೆ ಕುಮಾರ್ ಬಂಗಾರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಯಾವ ರಾಜಕೀಯ ನಾಯಕರೂ ಹೇಳಿಕೆ ನೀಡಬಾರದು. ರಾಜಕೀಯ ನಾಯಕರೇ ಸಮಾಜಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರಾಯಚೂರಿನಲ್ಲಿ ಕುಮಾರ್ ಬಂಗಾರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೆಸಿಆರ್, ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ಕೃಷ್ಣಾ ನೀರು ಹಂಚಿಕೆಗೆ ಬೇಡಿಕೆ ಇಟ್ಟಿರುವ ಪ್ರಧಾನಿ ಮೋದಿ ತೆಲಂಗಾಣಕ್ಕೆ ಶತ್ರುವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮುಳುಗುತ್ತಿರೊ ಒಂದೊಂದೇ ಸೇತುವೆಗಳು ಆರೋಗ್ಯ ಇಲಾಖೆ ಮಾಡಿದ ಹಿನ್ನೆಲೆ ತಾಯಿ ಮಗು ಆರೋಗ್ಯ ವಾಗಿ ಇದ್ದಾರೆ . ಈ ಹಿನ್ನೆಲೆ ಗರ್ಭಿಣಿಯರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿ ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮಾ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಂಚಿನಾಳದಲ್ಲಿ ಶಿಫ್ಟಿಂಗ್ ಕಾರ್ಯ ಮಾಡಲಾಗಿತ್ತು
ಕೊನೆಗೂ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನ ಎಲ್ಲಾ ಗೇಟ್ಗಳನ್ನು ಓಪನ್ ಮಾಡಲಾಗಿದೆ. ಸತತ 10 ದಿನಗಳ ಕಾರ್ಯಾಚರಣೆ ಬಳಿಕ ಗೇಟ್ಗಳನ್ನು ಓಪನ್ ಮಾಡಲಾಗಿದೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ 194 ಗೇಟ್ಗಳಿದ್ದು, ಅಧಿಕಾರಿಗಳ ಎಡವಟ್ಟಿನಿಂದ ಪ್ರವಾಹದಲ್ಲಿ ಸ್ಟ್ರಕ್ ಆಗಿದ್ದವು. ಡೈವಿಂಗ್ ಟೀಮ್, ಸ್ಥಳೀಯರ ಕಾರ್ಯಾಚರಣೆ ಮೂಲಕ ಓಪನ್ ಮಾಡಲಾಗಿದೆ..
ತುಂಗಭದ್ರಾ ಡ್ಯಾಂನಿಂದ ನೀರು ಬಿಡಲಾಗಿದೆ ಆದರೆ ಮಂತ್ರಾಲಯಕ್ಕೆ ಅದರಿಂದ ಯಾವುದೇ ಪ್ರವಾಹವಾಗಿಲ್ಲ ಆ ನೀರು ಸೀಮಿತ ಮಟ್ಟದಲ್ಲೇ ಹರಿಯುತ್ತಿದೆ ಭಕ್ತರ ಆತಂಕ ಪಡದೇ ರಾಯರ ದರ್ಶನಕ್ಕೆ ಆಗಮಿಸಬಹುದು
ಜೂಕೂರು ಗ್ರಾಮದ ಮಹಿಳೆ ಮಹಿಳೆ ಲಕ್ಷ್ಮಿ(26)ಸಾವು 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ರಾಯಚೂರಿನ ಮಾನ್ವಿ ತಾಲೂಕಿನ ವಲ್ಕಂ ದಿನ್ನಿಯಲ್ಲಿ ಘಟನೆ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಮಾಲೀಕ ಪತ್ತೆಯಾಗಿದ್ದಾನೆ. ಸದರ್ ಬಜಾರ್ ಪೊಲೀಸರು ಕಾರಿನ ಮಾಲೀಕ ನಾಗರಾಜ್ ಎಂಬೋರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ರಾತ್ರಿ ಕಾರು ನಿಲ್ಲಿಸಿದ್ದಲ್ಲ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ಸ್ಥಳೀಯರು ರಾತ್ರಿಯಿಂದಲೇ ಕಾರು ನಿಂತಿರೋ ಅನುಮಾನ ವ್ಯಕ್ತಪಡಿಸಿದ್ದರು..
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ವಿಧಾನಸಭಾ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನ ಕೇಂದ್ರಬಿಂದುವಾಗಿದ್ದು, ಅದರಲ್ಲೂ ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ತಾಣವಾಗಿ ಮಾರ್ಪಡಾಗಿದೆ.ಪ್ರಥಮ ದರ್ಜೆಯ ಗುತ್ತಿಗೆದಾರ ಮುಜೀಬುದ್ದೀನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರವಂತೂ ನಗರ ಕೇಂದ್ರದ ರಾಜಕೀಯ ಹೈಕಮಾಂಡ್ ಗಮನ ಸೆಳೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಕ್ಕಳು ಸಾಧನೆ ಮಾಡಿದ್ದಾರೆ. ಶಿವರಾಜ್, ಸಂಜನಾ, ಶ್ರೇಯ ಹಾಗೂ ಅಮಿತ್ 2021ರಲ್ಲಿ ಈ ಎಲ್ಲರೂ 10 ಸಾವಿರಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಕಡಿಮೆ ಸಮಯದಲ್ಲಿ ಉತ್ತರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ರು.. ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಳಿಕ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ..
ಈ 5 ಗ್ರಾಮದ ರೈತರಿಗೆ ಸಬ್ಸಿಡಿ ಇಲ್ಲ.. ಕ್ರಾಪ್ ಲೋನ್ ಕೊಡಲ್ಲ..! ಈವರೆಗೆ ಸಾರಿಗೆ ವ್ಯವಸ್ಥೆ ಇಲ್ಲದೇ ತೆಪ್ಪಗಳ ಮೂಲಕವೇ ಓಡಾಟ ಕಟಾವು ಮಾಡಲಾದ ಬೆಳೆಯನ್ನ ತೆಪ್ಪಗಳ ಮೂಲಕವೇ ಸಾಗಾಟ ಸಾರಿಗೆ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಕೊಟ್ಟು ಬೆಳೆ ಸಾಗಾಟ
ರಾಂಪೂರ ನೀರು ಶುದ್ಧೀಕರಣ ಘಟಕದಲ್ಲಿ ಮತ್ತೆ ಅವಾಂತರ, ನೀರು ಸರಬರಾಜು ಘಟಕದಲ್ಲಿ ಸತ್ತು ಬಿದ್ದಿದೆ ಹಲ್ಲಿ, ಹಲ್ಲಿ ಸತ್ತು ಬಿದ್ದ ನೀರನ್ನೇ ಪೊರೈಕೆ ಮಾಡ್ತಿರೋ ಸಿಬ್ಬಂದಿ, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಈ ದೃಶ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.