ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಪೋಲೆಂಡ್ ಪ್ರವಾಸ ಕೈಗೊಂಡಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ಗೆ ಭೇಟಿ ನೀಡಿದ್ದಾರೆ. 2ದಿನಗಳ ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಸೆಬಾಸ್ಟಿಯನ್ ಡುಡಾ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರದ ಕೊನೆಯಲ್ಲಿ ಪೋಲೆಂಡ್ ಮತ್ತು ಉಕ್ರೇನ್ಗೆ ತಮ್ಮ ಚೊಚ್ಚಲ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಆಗಸ್ಟ್ 21-22 ರಂದು ಪೋಲೆಂಡ್ ಭೇಟಿ ನೀಡಿದ್ದು, ನಂತರ ಉಕ್ರೇನಿಯನ್ ರಾಷ್ಟ್ರೀಯ ದಿನವಾದ ಆಗಸ್ಟ್ 23 ರಂದು ಉಕ್ರೇನ್ನಲ್ಲಿರುತ್ತಾರೆ.
ಗಡಾಫಿ ಲಿಬಿಯಾದಲ್ಲಿ ಅಧಿಕಾರ ಹೊಂದಿದ್ದ ಸಂದರ್ಭದಲ್ಲಿ, ಬಹುತೇಕ 400 ಮಹಿಳೆಯರು ರೆವಲ್ಯೂಷನರಿ ನನ್ಸ್ ಪಡೆಯಲ್ಲಿ ಕಾರ್ಯಾಚರಿಸುತ್ತಿದ್ದರು. ಜೋಸೆಫ್ ಸ್ಟಾನಿಕ್ ಎಂಬ ಅಮೆರಿಕಾದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಗಡಾಫಿ ಮಹಿಳಾ ಅಂಗರಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ. ಇದರಿಂದಾಗಿ ವಿರೋಧಿಗಳಿಗೆ ಮಹಿಳೆಯರ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ ಮತ್ತು ಮಹಿಳೆಯರು ತಮ್ಮ ಮಾಲೀಕನಿಗೆ ದ್ರೋಹ ಬಗೆಯುವ ಸಾಧ್ಯತೆಗಳು ಕಡಿಮೆ ಎನ್ನುವುದು ಗಡಾಫಿಯ ಯೋಚನೆಯಾಗಿತ್ತು.
Nazi typist proved guilty in 10505 murders: ಅಪ್ರಾಪ್ತ ವಯಸ್ಕಳಾಗಿದ್ದಾಗ, ಫೋರ್ಚ್ನರ್ 1943 ರಿಂದ 1945 ರಲ್ಲಿ ನಾಜಿ ಆಡಳಿತದ ಅಂತ್ಯದವರೆಗೆ ಗ್ಡಾನ್ಸ್ಕ್ ಬಳಿಯ ಸ್ಟಟ್ಥಾಫ್ ಶಿಬಿರದಲ್ಲಿ ನಾಜಿ-ಆಕ್ರಮಿತ ಪೋಲೆಂಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಅಪರಾಧದ ಸಮಯದಲ್ಲಿ ಮಹಿಳೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಫೋರ್ಚ್ನರ್ ಶಿಕ್ಷೆಯನ್ನು ಬಾಲಾಪರಾಧಿ ನ್ಯಾಯಾಲಯದ ಅಡಿಯಲ್ಲಿ ನಮೂದಿಸಲಾಗುತ್ತದೆ.
Russia-Ukraine War: ರಷ್ಯಾದ ದಾಳಿಯ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelensky) ಬಗ್ಗೆ ವಾಗ್ಧಾಳಿ ಜೋರಾಗಿಯೇ ಇದೆ. ಝೆಲೆನ್ಸ್ಕಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ಹೇಳುತ್ತಿವೆ. ಇದೀಗ ಉಕ್ರೇನ್ನ ವಿರೋಧ ಪಕ್ಷದ ನಾಯಕರೊಬ್ಬರು ಈ ವಿಚಾರದಲ್ಲಿ ದೊಡ್ಡ ಹಕ್ಕು ಮಂಡಿಸಿದ್ದಾರೆ.
ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೈವ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಈ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಪೋಲೆಂಡ್ ಮಾರ್ಚ್ 24 ರಂದು ಮಾಸ್ಕೋದಲ್ಲಿ ರಷ್ಯಾದೊಂದಿಗೆ 2022 ರ ವಿಶ್ವಕಪ್ ಪ್ಲೇ-ಆಫ್ ಅನ್ನು ಆಡುವುದಿಲ್ಲ ಎಂದು ಪೋಲಿಷ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರು ಘೋಷಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.