ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ತಗುಲಿದ ಗುಂಡು , ಕೈವ್‌ನ ಆಸ್ಪತ್ರೆಗೆ ದಾಖಲು

ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೈವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಈ ಮಾಹಿತಿ ನೀಡಿದ್ದಾರೆ. 

Written by - Ranjitha R K | Last Updated : Mar 4, 2022, 10:37 AM IST
  • ಭಾರತೀಯ ವಿದ್ಯಾರ್ಥಿಗೆ ತಗುಲಿದ ಗುಂಡು
  • ಭಾರತೀಯ ವಿದ್ಯಾರ್ಥಿಯ ಸ್ಥಿತಿ ಗಂಭೀರ
  • ಮಾಹಿತಿ ನೀಡಿದ ಜನರಲ್ ವಿ.ಕೆ.ಸಿಂಗ್
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ತಗುಲಿದ ಗುಂಡು , ಕೈವ್‌ನ ಆಸ್ಪತ್ರೆಗೆ ದಾಖಲು title=
ಭಾರತೀಯ ವಿದ್ಯಾರ್ಥಿಗೆ ತಗುಲಿದ ಗುಂಡು

ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದೆ (Russia-Ukraine War). ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ರಾಜಧಾನಿ ಕೈವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ (MoS) ಜನರಲ್ ವಿಕೆ ಸಿಂಗ್ (General VK Singh)ಪೋಲೆಂಡ್‌ನ ರೇಜ್ ಜೊ ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.  ಕಳೆದ ವಾರವಷ್ಟೇ ರಷ್ಯಾದ ಸೇನೆಯ ದಾಳಿಗೆ ರಾಜ್ಯದ ವಿದ್ಯಾರ್ಥಿ ನವೀನ್ ಪ್ರಾಣ ಕಳೆದುಕೊಂಡಿದ್ದರು. 

'ಗುಂಡು ರಾಷ್ಟ್ರೀಯತೆಯನ್ನು ನೋಡುವುದಿಲ್ಲ' 
ಕೈವ್‌ನಲ್ಲಿ  (kyiv) ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಜನರಲ್ ವಿಕೆ ಸಿಂಗ್ (General VK Singh) ಹೇಳಿದ್ದಾರೆ. ತಕ್ಷಣವೇ ವಿದ್ಯಾರ್ಥಿಯನ್ನು ಕೈವ್‌ನ ಆಸ್ಪತ್ರೆಗೆ (kyiv hospital) ದಾಖಲಿಸಲಾಗಿದೆ.  ಎಲ್ಲರೂ ಕೈವ್ ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಈಗಾಗಲೇ ಆದ್ಯತೆಯ ಮೇಲೆ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ. ಯುದ್ಧದ ಸಂದರ್ಭದಲ್ಲಿ, ಬಂದೂಕಿನ ಬುಲೆಟ್ ಒಬ್ಬರ ಧರ್ಮ ಮತ್ತು ರಾಷ್ಟ್ರೀಯತೆಯನ್ನು ನೋಡುವುದಿಲ್ಲ ಎಂದವರು ಇದೆ ಸಂದರ್ಭದಲ್ಲಿ ಹೇಳಿದ್ದಾರೆ. 

 

ಇದನ್ನೂ ಓದಿ : ರಷ್ಯಾ ದಾಳಿಯಿಂದ ಯುಕ್ರೇನ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೆಂಕಿ : ಇಲ್ಲಿದೆ ವಿಡಿಯೋ

ಪೋಲೆಂಡ್ ಗಡಿ ತಲುಪಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳು :
ಹದಗೆಡುತ್ತಿರುವ ಪರಿಸ್ಥಿತಿಯ ನಡುವೆ, ಭಾರತೀಯ ವಿದ್ಯಾರ್ಥಿಗಳು ಯುದ್ಧ ಪೀಡಿತ ಉಕ್ರೇನ್‌ನಿಂದ  ಹೊರ  ಬರುತ್ತಿದ್ದಾರೆ (Indian students in Ukraine).  ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‌ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್  ವಿಕೆ ಸಿಂಗ್ (General VK Singh) ಅವರು ಉಕ್ರೇನ್‌ಗೆ ಹೊಂದಿಕೊಂಡಿರುವ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆ. 

ನಿರಂತರವಾಗಿ ನಡೆಯುತ್ತಿವೆ ದಾಳಿಗಳು :
ಕಳೆದ ವಾರ ರಾಜ್ಯದ ನವೀನ್ ಉಕ್ರೇನ್‌ನಲ್ಲಿ ಮೃತಪಟ್ಟಿದ್ದರು (Naveen deathin Ukraine). ನವೀನ್ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ನಿಂತಿದ್ದಾಗ ರಷ್ಯಾದ ಸೈನಿಕರ ಗುಂಡಿಗೆ ಬಲಿಯಾಗಿದ್ದರು.  ರಷ್ಯಾದ ಸೇನೆಯು ನಿರಂತರವಾಗಿ ಉಕ್ರೇನ್ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಇಂದು ಈ ಯುದ್ಧದ 8 ನೇ ದಿನವಾಗಿದೆ. ಈ ಯುದ್ದ ಶೀಘ್ರದಲ್ಲೇ ಅಂತ್ಯಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. 

ಇದನ್ನೂ ಓದಿ : ಉಕ್ರೇನ್-ರಷ್ಯಾ ಬಿಕ್ಕಟ್ಟು: ಬೆಲಾರಸ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ಪ್ರಾರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News