ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್(ಮೌಲ್ಯವರ್ಧಿತ ತೆರಿಗೆ)ಕಡಿತಗೊಳಿಸಿದ್ದು, ಪರಿಣಾಮ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 8 ರೂ. ಕಡಿಮೆಯಾಗಿತ್ತು.
ದೆಹಲಿ ಸರ್ಕಾರವು ಬುಧವಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಅನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ನಗರದಲ್ಲಿ ಇಂಧನದ ಬೆಲೆಯನ್ನು ಲೀಟರ್ಗೆ ಸುಮಾರು 8 ರೂ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹಲಿಯ ಕೇಜ್ರಿವಾಲ್ ಸರ್ಕಾರ ರಾಜ್ಯದ ಜನತೆಗೆ ಬಹು ದೊದ್ದ ಪರಿಹಾರ ನೀಡಿದೆ. ಸರ್ಕಾರವು ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂಪಾಯಿಗಳಷ್ಟು ಅಗ್ಗವಾಗಿದೆ.
ಎಎಪಿ ಆಡಳಿತವಿರುವ ದೆಹಲಿ, ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳ, ಎಡಪಕ್ಷಗಳ ಆಡಳಿತವಿರುವ ಕೇರಳ, ಟಿಆರ್ಎಸ್ ನೇತೃತ್ವದ ತೆಲಂಗಾಣ ಮತ್ತು ವೈಎಸ್ಆರ್ ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ ವ್ಯಾಟ್ ಅನ್ನು ಕಡಿತಗೊಳಿಸಿಲ್ಲ.
ಜನಸಾಮಾನ್ಯರು ಮತ್ತು ವಿಪಕ್ಷಗಳ ಟೀಕೆಗೆ ಮಣಿದು ಕೇಂದ್ರವು ದೀಪಾವಳಿ ಹಬ್ಬದ ಮುನ್ನಾದಿನದಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ಕಡಿತಗೊಳಿಸಿತ್ತು.
ದೇಶದಾದ್ಯಂತ ನವೆಂಬರ್ 13 ರ ಶನಿವಾರದಂದು ಸತತ ಹತ್ತನೇ ದಿನವೂ ಪೆಟ್ರೋಲ್ ಬೆಲೆ ಸ್ಥಿರವಾಗಿ ಉಳಿದಿದೆ. ಇದು ಡೀಸೆಲ್ ಬೆಲೆಗೂ ಅನ್ವಯಿಸುತ್ತದೆ, ಇದು ಸತತ 10 ದಿನಗಳವರೆಗೆ ದೇಶದಾದ್ಯಂತ ಯಾವುದೇ ಬದಲಾವಣೆಗೆ ಒಳಗಾಗಲಿಲ್ಲ
ಇಂದಿನ(ನ.9) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 103.97 ರೂ. ಇದ್ದರೆ, ಡೀಸೆಲ್ ದರ ಲೀಟರ್ಗೆ 86.67 ರೂ. ಇದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಬುಧವಾರ ಡೀಸೆಲ್ ಬೆಲೆ 11 ರಿಂದ 13 ರೂ.ಗೆ ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆ 7 ರಿಂದ 8 ರೂ. ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೇ ಇರುವುದರಿಂದ ಗ್ರಾಹಕರಿಗೆ ಸಾಕಷ್ಟು ನೆಮ್ಮದಿ ಸಿಕ್ಕಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ರಿ ಲೀಟರ್ ಪೆಟ್ರೋಲ್ 26 ಪೈಸೆ ಏರಿಕೆ ಕಂಡಿದ್ದು, 106.21 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 32 ಪೈಸೆ ಏರಿಕೆ ಕಂಡು 96.66 ರೂ.ಗೆ ತಲುಪಿದೆ.
ದೇಶಾದ್ಯಂತ ತೈಲ ಬೆಲೆಗಳು ಸ್ಥಿರವಾಗಿವೆ. ನಿನ್ನೆ ಅಂದರೆ, ಶುಕ್ರವಾರ, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 22 ಪೈಸೆ ಹೆಚ್ಚಿಸಲಾಗಿತ್ತು. ಪೆಟ್ರೋಲ್ ದರ ಸ್ಥಿರವಾಗಿತ್ತು. ಅದರ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಏರಿಕೆಯ ನಂತರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.19 ರೂ. ಮತ್ತು ಡೀಸೆಲ್ ಬೆಲೆ 88.82 ರೂ.ಗೆ ತಲುಪಿದೆ. ಇಂದು ಬೆಲೆಗಳನ್ನು ಹೆಚ್ಚಿಸಲಾಗಿಲ್ಲ, ಆದ್ದರಿಂದ ಹಳೆಯ ಬೆಲೆಗಳು ಇಂದಿಗೂ ಅನ್ವಯವಾಗುತ್ತವೆ.
ದೇಶದಲ್ಲಿ ಮಂಗಳವಾರ (ಸೆಪ್ಟೆಂಬರ್ 14) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.19 ರೂ. ಮತ್ತು ಡೀಸೆಲ್ ಬೆಲೆ 88.62 ರೂ. ಗೆ ಸ್ಥಿರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.