ಎಂಟು ರೂಪಾಯಿಯಷ್ಟು ಅಗ್ಗವಾಯಿತು ಪೆಟ್ರೋಲ್, ಇಂದು ಮಧ್ಯರಾತ್ರಿಯಿಂದಲೇ ಜಾರಿ

ಹಲಿಯ ಕೇಜ್ರಿವಾಲ್ ಸರ್ಕಾರ ರಾಜ್ಯದ ಜನತೆಗೆ ಬಹು ದೊದ್ದ ಪರಿಹಾರ ನೀಡಿದೆ. ಸರ್ಕಾರವು ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂಪಾಯಿಗಳಷ್ಟು ಅಗ್ಗವಾಗಿದೆ. 

Written by - Ranjitha R K | Last Updated : Dec 1, 2021, 01:16 PM IST
  • ದೆಹಲಿಯಲ್ಲಿ ಅಗ್ಗವಾಗುತ್ತಿದೆ ಪೆಟ್ರೋಲ್
  • ವ್ಯಾಟ್ ಅನ್ನು ಕಡಿಮೆ ಮಾಡಿದ ಕೇಜ್ರಿವಾಲ್ ಸರ್ಕಾರ
  • 30 ರಿಂದ 19.4% ಕ್ಕೆ ವ್ಯಾಟ್ ಇಳಿಕೆ
ಎಂಟು ರೂಪಾಯಿಯಷ್ಟು ಅಗ್ಗವಾಯಿತು ಪೆಟ್ರೋಲ್, ಇಂದು ಮಧ್ಯರಾತ್ರಿಯಿಂದಲೇ ಜಾರಿ  title=
ದೆಹಲಿಯಲ್ಲಿ ಅಗ್ಗವಾಗುತ್ತಿದೆ ಪೆಟ್ರೋಲ್ (file photo)

ನವದೆಹಲಿ : Petrol Price Today : ಹಣದುಬ್ಬರದ ನಡುವೆ ಜನಸಾಮಾನ್ಯರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.  ಕೇಜ್ರಿವಾಲ್ ಸರ್ಕಾರವು (Kejriwal government) ಪೆಟ್ರೋಲ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ.  ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ (Petrol rate today) 8 ರೂಪಾಯಿಗಳಷ್ಟು ಅಗ್ಗವಾಗಿದೆ. ಇಂದು ರಾತ್ರಿಯಿಂದಲೇ ಹೊಸ ಬೆಲೆ  ಜಾರಿಯಾಗಲಿದೆ. 

ದೆಹಲಿ ಸರ್ಕಾರ ಮಹತ್ವದ ನಿರ್ಧಾರ :
ಪೆಟ್ರೋಲ್ ಮೇಲಿನ ವ್ಯಾಟ್ (Value Added Tax)  ಅನ್ನು ಸರ್ಕಾರವು 30% ರಿಂದ 19.40 ಕ್ಕೆ ಇಳಿಸಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.97 ರಿಂದ 95.97ಕ್ಕೆ ಇಳಿಯಲಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ನಿರ್ಧಾರವನ್ನು ದೆಹಲಿ ಸರ್ಕಾರ (Delhi government) ಅನುಮೋದಿಸಿದೆ.   ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸುಮಾರು 8 ರೂ.ಗಳಷ್ಟು ಕಡಿಮೆಯಾಗಿದ್ದು, ಹೊಸ ದರ ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ.  

ಇದನ್ನೂ ಓದಿ : Miಯ 32 ಇಂಚಿನ Smart TVಯನ್ನು ಕೇವಲ 4 ಸಾವಿರ ರೂಪಾಯಿಗಳಿಗೆ ಖರೀದಿಸಿ, ಇಲ್ಲಿದೆ Offers

ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ :
ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ (cabinet meet) ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಇಳಿಸುವ ನಿರ್ಧಾರಕ್ಕೆ ದೆಹಲಿ ಸರ್ಕಾರ ಅನುಮೋದನೆ ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಐದು ಮತ್ತು ಹತ್ತು ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ನಂತರ, ಅನೇಕ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿತು. ಈ ಅನುಕ್ರಮದಲ್ಲಿ ಇಂದು ದೆಹಲಿ ಸರ್ಕಾರ ಕೂಡ ಈ ಕ್ರಮಕ್ಕೆ ಮುಂದಾಗಿದೆ.

 ಪರಿಹಾರ ನೀಡಿದ್ದ ಮೋದಿ ಸರ್ಕಾರ :  
ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು (Central government) ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಐದು ಮತ್ತು ಹತ್ತು ರೂಪಾಯಿಗಳಷ್ಟು ಕಡಿತಗೊಳಿಸಿತ್ತು. ಇದರ ನಂತರ, ಅನೇಕ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ (VAT) ಅನ್ನು ಕಡಿಮೆ ಮಾಡಿದ್ದವು. ಈ ಪಟ್ಟಿಯಲ್ಲಿ ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಸರ್ಕಾರಗಳೂ ಸೇರಿವೆ.

ಇದನ್ನೂ ಓದಿ : ಹೊಸ ರೂಪಾಂತರಿ ‘ಓಮಿಕ್ರಾನ್’ ವೈರಸ್ ವಿರುದ್ಧವೂ ಕೆಲಸ ಮಾಡುತ್ತಾ COVAXIN..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News