ಕಳೆದ ವರ್ಷ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಮಿಷನ್ ಒಲಿಂಪಿಕ್ ಸೆಲ್ ನ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2036 ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ಭಾರತದ ಆಸಕ್ತಿಯನ್ನು ಅಧಿಕೃತವಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಕ್ರೀಡೆಗಳನ್ನು ಸಹಿತ ಸೇರಿಸಬೇಕೆನ್ನುವ ಪ್ರಸ್ತಾಪವನ್ನು ಕ್ರೀಡಾ ಸಚಿವಾಲಯ ಇಡಲಿದೆ.
Paris Olympic 2024: ಟೇಬಲ್ ಟೆನಿಸ್ಗೆ ಸಂಬಂಧಿಸಿದಂತೆ ಭಾರತಕ್ಕೆ ಡಬಲ್ ಗುಡ್ ನ್ಯೂಸ್ ಬಂದಿದೆ. ಇದೇ ಮೊದಲ ಬಾರಿಗೆ ಭಾರತದ ಪುರುಷ ಮತ್ತು ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದು, ಈ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ತಮ್ಮ ಚಮತ್ಕಾರ ತೋರಲು ಸಜ್ಜಾಗಿವೆ.
Neeraj Chopra javelin throw Video: ಹಂಗೇರಿಯ ರಾಜಧಾನಿ ಬುಡಾಪೆಸ್ಟ್’ನಲ್ಲಿರುವ ರಾಷ್ಟ್ರೀಯ ಅಥ್ಲೆಟಿಕ್ಸ್ ಸೆಂಟರ್’ನಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ 88.17 ಮೀಟರ್ ದೂರ ಎಸೆದು ಜಾವೆಲಿನ್ ಚಿನ್ನದ ಪದಕ ಗೆದ್ದಿದ್ದಾರೆ.
Cricket In Olympics: ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ. ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ.
Tokyo Olympics 2020: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪುರುಷರ ಹಾಕಿ ತಂಡ (Indian Hockey Team) ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು (New Zealand Hockey Team) 3-2 ಅಂತರದಿಂದ ಸೋಲಿಸಿದೆ. ಪಂದ್ಯದ ಆರಂಭದಲ್ಲಿ ಭಾರತ ತಂಡ 0-1 ರಿಂದ ಹಿಂದಿತ್ತು. ಆದರೆ, ನಂತರ ರೂಪಿಂದರ್ ಪಾಲ್ ಸಿಂಗ್ (Rupinder Pal Singh) ಮತ್ತು ಹರ್ಮನ್ ಪ್ರೀತ್ ಸಿಂಗ್ (Harman Preet Singh) ದಾಖಲಿಸಿದ ಗೋಲ್ ಗಳ ಮೂಲಕ ಗೆಲುವಿನ ನಗೆ ಬೀರಿದೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ಭಾರತದ ಮಹಿಳಾ ಜಿಮ್ನಾಸ್ಟ್ ಪ್ರಣತಿ ನಾಯಕ್ (Pranati Nayak) ಶ್ರಮಿಸುತ್ತಿದ್ದಾರೆ. ಅವರು ದೀಪ ಕರ್ಮಕರ್ (Dipa Karmakar) ಅವರ ಪರಂಪರೆಯನ್ನು ಮುಂದುವರೆಸಲು ಬಯಸುತ್ತಾರೆ.
ಒಲಿಂಪಿಕ್ಸ್ಗೆ ಆತಿಥ್ಯ ವಹಿಸುವ ಭಾರತದ ಮಹತ್ವಾಕಾಂಕ್ಷೆ ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಹೌದು ಇಂತಹ ವೈಭವಯುತ ಕ್ರೀಡಾಕೂಟವನ್ನು ನಡೆಸಲು ಈಗಾಗಲೇ ಅಹಮದಾಬಾದ್ನ ನಗರ ಅಭಿವೃದ್ಧಿ ಪ್ರಾಧಿಕಾರವು ಮುಂದಿನ ಮಾರ್ಗವನ್ನು ನಿರ್ಧರಿಸಲು ಸಲಹೆಗಾರರಿಂದ ಪ್ರಸ್ತಾಪಗಳಿಗೆ ಆಹ್ವಾನಿಸಿದೆ.
ರಷ್ಯಾ, ಪ್ರಯೋಗಾಲಯದಲ್ಲಿ ನಡೆಸಲಾಗುವ ಡೋಪಿಂಗ್ ಟೆಸ್ಟ್ ಡೇಟಾವನ್ನು ಕುಶಲತೆಯಿಂದ ನಿರ್ವಹಿಸುತ್ತಿದೆ ಎಂದು ಆರೋಪ ಹೊರಿಸಿರುವ Wada's Compliance Review Committee (CRC), ರಷ್ಯಾದ ಆಂಟಿ-ಡೋಪಿಂಗ್ ಏಜೆನ್ಸಿ (ರುಸಾಡಾ) ಕ್ರೀಡಾಪಟುಗಳ ಪರೀಕ್ಷಾ ಫಲಿತಾಂಶಗಳ ಪ್ರಮುಖ ಡೇಟಾಬೇಸ್ ನಲ್ಲಿ ವಿಸಂಗತಿಗಳನ್ನು ಹೊಂದಿದೆ ಎಂದು ಆರೋಪಿಸಿದೆ.
ಮೂರು ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನವು ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ, ಎರಡನೇ ಕ್ವಾಲಿಫೈಯರ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 1-6ರಿಂದ ಸೋಲನುಭವಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.